ಸರಳ ಸಾರ್ವಜನಿಕ ಗಣಪತಿ

ಸರ್ಕಾರದ ಅನುಮತಿ ನೀಡಿದ್ದರೂ ಮುಂದುವರಿದ ಗೊಂದಲ

ದಾವಣಗೆರೆ, ಆ. 18- ಕೋವಿಡ್ ನಿಯಮಗಳನ್ನು ಪಾಲನೆ ಜೊತೆ ಸಾರ್ವಜನಿಕ ಗಣೇಶೋತ್ಸವ ಆಚರ ಣೆಗೆ ಸರ್ಕಾರ  ಹಸಿರು ನಿಶಾನೆ ತೋರಿ ಸುತ್ತಿದ್ದಂತೆ, ಗೊಂದಲಗಳ ನಡು ವೆಯೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ  ಹಾಗೂ ಬೀದಿ ಬದಿಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಕುರಿತ ಚಟುವಟಿಕೆಗಳು ಮತ್ತೆ ಗರಿಗೆದರಿವೆ.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.

ಹಲವು ವರ್ಷಗಳಿಂದ ಗಣೇಶ ನನ್ನು ಪ್ರತಿಷ್ಠಾಪಿಸಿ ಸಂಪ್ರದಾಯ ಆ ಚರಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ಉತ್ಸವಕ್ಕೆ ನಿಷೇಧ ಹೇರಿದ್ದರಿಂದ ಹಲವರಲ್ಲಿ ಬೇಸರವನ್ನುಂಟು ಮಾಡಿತ್ತು. ಆದರೆ, ಇದೀಗ ಮುಖ್ಯಮಂತ್ರಿಗಳು ಉತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ಗಣೇಶನ ವಿಗ್ರಹ ಪ್ರತಿಷ್ಠಾಪನೆಗೆ ಹಲವಾರು ಗೊಂದಲ, ಅಡೆತಡೆಗಳಿವೆ.

ಕೊರೊನಾ ನಡುವೆಯೂ ಎಚ್ಚರಿಕೆಯಿಂದ ಹಬ್ಬ ಆಚರಿಸಲು ನಗರದ ಕೆಲವು ಪ್ರಮುಖ ಸಂಘಟನೆಗಳು ಈ ತಿಂಗಳುಗಳ ಮೊದಲೇ ಮುಂಗಡ ನೀಡಿ ವಿಗ್ರಹ ನಿರ್ಮಾಣಕ್ಕೆ ಆರ್ಡರ್ ಕೊಟ್ಟಿದ್ದವು. ಆದರೆ ಸರ್ಕಾರ ನಿಷೇಧ ಹೇರುತ್ತಿದ್ದಂತೆ, ಈ ಕಾರ್ಯಕ್ಕೆ ತುಸು ಹಿನ್ನಡೆಯಾಗಿತ್ತು. ಆದರೆ ದೇವಸ್ಥಾನದಲ್ಲಾದರೂ ಕೂರಿಸಿ ಸರಳವಾಗಿ ಆಚರಿಸುವ ನಿರ್ಧಾರಕ್ಕೆ ಸಂಘಟನೆಗಳು ತೀರ್ಮಾನಿಸಿದ್ದವು.

ಈಗ ಸಾರ್ವಜನಿಕವಾಗಿ ಆಚರಿ ಸಲು ಅನುಮತಿ ಇದೆ. ಆದರೆ ದೊಡ್ಡ ವಿಗ್ರಹಗಳನ್ನು ಪ್ರತಿಷ್ಠಾಪಿಸಬಾರದು ಎಂದು ಅಧಿಕಾರಿಗಳು ಹೇಳುತ್ತಿರು ವುದು ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ಮುಂಗಡ ಕೊಟ್ಟು ವಿಗ್ರಹ ತಯಾರಿಸಲು ಹೇಳಿದ್ದು, ವಿಗ್ರಹಗಳೂ ರೆಡಿ ಇವೆ. ಅದನ್ನು ಬಿಟ್ಟು ಬೇರೆ ಚಿಕ್ಕ ವಿಗ್ರಹಗಳನ್ನು ಕೊಳ್ಳಬೇಕೆಂದರೆ ಹೇಗೆ? ಎಂದು ಕೆಲ ಸಂಘಟನೆಗಳ ಪ್ರಶ್ನೆಯಾಗಿದೆ.

ಇನ್ನು ಬೀದಿ ಬದಿ ಗಣಪನ  ಪ್ರತಿಷ್ಠಾಪನೆ ಬೇಡ ಎಂದು ಕುಳಿತಿದ್ದವರು, ಸರ್ಕಾರದ ಹೊರ ಆದೇಶದಿಂದಾಗಿ ಮತ್ತೆ ಹಬ್ಬದ ಸಂಭ್ರಮಕ್ಕೆ ಮುಂದಾಗಿದ್ದಾರೆ. ಆದರೆ ಪ್ರತಿಷ್ಠಾಪಿಸಲು ದೊಡ್ಡ ವಿಗ್ರಹಗಳು ಸಿಗುತ್ತಿಲ್ಲ. ಕಾರಣ ವಿಗ್ರಹ ತಯಾರಿಸುವವರು ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಅಷ್ಟಾಗಿ ದೊಡ್ಡಗಾತ್ರದ ವಿಗ್ರಹಗಳನ್ನು ತಯಾರಿಸಿಲ್ಲ. ಸರ್ಕಾರ ಹಬ್ಬಕ್ಕೆ ಮೂರು ದಿನಗಳು ಮಾತ್ರ ಬಾಕಿ ಇರುವುಗ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿರುವುದು ಈ ರೀತಿಯ ಗೊಂದಲಕ್ಕೆ ಕಾರಣವಾಾಗಿದೆ.

ಒಟ್ಟಿನಲ್ಲಿ ಈ ವರ್ಷದ ಗಣೇಶೋತ್ಸವ ಹಿಂದಿನ ವರ್ಷಗಳಂತೆ ಅದ್ದೂರಿಯಾಗಿ ನಡೆಯಲು ಕೊರೊನಾ ಅಡ್ಡಬಂದಿರುವುದಂತೂ ನಿಜ.

error: Content is protected !!