ದಾವಣಗೆರೆ, ಆ.18- ಜಿಲ್ಲೆಯಲ್ಲಿ ಇಂದು 332 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 45 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. 1 ಸಾವು ಸಂಭವಿಸಿದೆ. ಈ ದಿನ ದಾವಣಗೆರೆಯಲ್ಲಿ 206, ಹರಿಹರ 42, ಜಗಳೂರು 25, ಚನ್ನಗಿರಿ 19, ಹೊನ್ನಾಳಿ 29 ಹಾಗೂ ಅಂತರ್ಜಿಲ್ಲೆಯಿಂದ 11, ಕೋವಿಡ್ 19 ಪ್ರಕರಣಗಳು ಇಂದು ವರದಿಯಾಗಿದೆ.
ಇಂದು ತಾಲ್ಲೂಕುವಾರು ಬಿಡುಗಡೆಯಾದವರು : ದಾವಣಗೆರೆ 29, ಹರಿಹರ 05, ಜಗಳೂರು 01, ಚನ್ನಗಿರಿ 03, ಹೊನ್ನಾಳಿ 07 ಸೇರಿದಂತೆ ಒಟ್ಟು 45 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ 5,785 ಒಟ್ಟು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 3787 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ, 130 ಸಾವು ಸಂಭವಿಸಿದ್ದು ಪ್ರಸ್ತುತ 1868 ಸಕ್ರಿಯ ಪ್ರಕರಣಗಳು ಇವೆ.
ಹರಿಹರದಲ್ಲಿ 34 ಜನರಿಗೆ ಕೊರೊನಾ, ಓರ್ವನ ಸಾವು
ಹರಿಹರ, ಆ.18- ನಗರದ ಜೆ.ಸಿ. ಬಡಾವಣೆ, ವಿದ್ಯಾನಗರ ಎ ಬ್ಲಾಕ್, ಜಿಜಾಮಾತಾ ಕಾಲೋನಿ, ಜೆ.ಸಿ. ಬಡಾವಣೆ, ಕೆ.ಇ.ಬಿ. ಕಚೇರಿ, ಹಳೆ ಹರ್ಲಾಪುರ, ಬಹಾರ್ ಮಕಾನ್ ವಿಜಯ ನಗರ ಬಡಾವಣೆ ಸೇರಿದಂತೆ 13 ವ್ಯಕ್ತಿಗಳಿಗೆ ಮತ್ತು ಗ್ರಾಮೀಣ ಪ್ರದೇಶವಾದ ಕೆ.ಬೇವಿನಹಳ್ಳಿ 1, ನಿಟ್ಟೂರು 1, ಹಳಿಯಾಳ 1, ಹೊಳೆಸಿರಿಗೆರಿ 3, ಜಿಗಳಿ 1, ಬೆಳ್ಳೂಡಿ 4, ಮಲೆಬೆನ್ನೂರು ನಗರದಲ್ಲಿ 8 ಸೇರಿ ಒಟ್ಟು 34 ವ್ಯಕ್ತಿಗಳಿಗೆ ಕೊರೊನಾ ಸೋಂಕು ಹರಡಿಕೊಂಡಿದ್ದು. ಓರ್ವ ವ್ಯಕ್ತಿಯು ಮರಣ ಹೊಂದಿದ್ದಾರೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.
ನಗರದಲ್ಲಿ 549 ಗ್ರಾಮೀಣ ಪ್ರದೇಶದಲ್ಲಿ 337 ಸೇರಿದಂತೆ ಒಟ್ಟು ತಾಲ್ಲೂಕಿನಲ್ಲಿ 886 ವ್ಯಕ್ತಿಗಳಿಗೆ ಕೊರೊನಾ ಸೋಂಕು ತಗುಲಿದ್ದು, 331 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಉಳಿದ 555 ವ್ಯಕ್ತಿಗಳು ಹೋಂ ಐಸೋಲೇಷನ್ 248, ದಾವಣಗೆರೆ ಸಿ.ಜೆ. ಆಸ್ಪತ್ರೆಯಲ್ಲಿ 142, ಕೋವಿಡ್ ಕೇರ್ ಸೆಂಟರ್ನಲ್ಲಿ 176, ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿ 249 ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಟಲು ದ್ರವ ಪರೀಕ್ಷೆಯನ್ನು ಇಂದು 118 ವ್ಯಕ್ತಿಗಳಿಗೆ ಮಾಡಿದ್ದು, ಇಲ್ಲಿಯವರೆಗೆ 9,666 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 292 ಕಂಟೋನ್ಮೆಂಟ್ ಝೊನ್ ಇವೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮಿ, ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ವಿಮಲ ನಾಯ್ಕ್, ನಗರಸಭೆ ಎಇಇ ಬಿರಾದಾರ ಇತರರು ಹಾಜರಿದ್ದರು.
ಮಲೇಬೆನ್ನೂರು ಹೋಬಳಿಯಲ್ಲಿ 21 ಜನರಿಗೆ ಕೊರೊನಾ ಸೋಂಕು : ನಿಟ್ಟೂರಿನಲ್ಲಿ 69 ಜನರಿಗೆ ಟೆಸ್ಟ್ : ತಹಶೀಲ್ದಾರ್ ಭೇಟಿ
ಮಲೇಬೆನ್ನೂರು, ಆ.18- ಪಟ್ಟ ಣದಲ್ಲಿ ಮಂಗಳವಾರ 8 ಜನರಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 13 ಜನರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ.
ಪಟ್ಟಣದ 1ನೇ ವಾರ್ಡ್ನಲ್ಲಿ 35 ವರ್ಷದ ಮಹಿಳೆಗೆ, 5ನೇ ವಾರ್ಡ್ನಲ್ಲಿ 81 ವರ್ಷದ ವೃದ್ಧನಿಗೆ, 45 ವರ್ಷದ ಮಹಿಳೆಗೆ, 36 ವರ್ಷದ ವ್ಯಕ್ತಿಗೆ, 15 ವರ್ಷದ ಬಾಲಕಿಗೆ, 19ನೇ ವಾರ್ಡ್ನಲ್ಲಿ 16 ವರ್ಷದ ಬಾಲಕಿಗೆ, 22ನೇ ವಾರ್ಡಿನಲ್ಲಿ ಗಂಡ-ಹೆಂಡತಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಹೊಳೆಸಿರಿಗೆರೆಯಲ್ಲಿ ಮೂವರಿಗೆ, ನಿಟ್ಟೂರು, ಹಳ್ಳಿಹಾಳ್, ಜಿಗಳಿಯಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರನ್ನೂ ಗುತ್ತೂರಿನಲ್ಲಿರುವ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಯಿತು.
ನಿಟ್ಟೂರಿನಲ್ಲಿ 69 ಟೆಸ್ಟ್ : ನಿಟ್ಟೂರು ಗ್ರಾಮದ ಕಂಟೈನ್ಮೆಂಟ್ ಏರಿಯಾದಲ್ಲಿ 29 ಜನರಿಗೆ ಮತ್ತು ಈಗಾಗಲೇ ಸೀಲ್ಡೌನ್ ಆಗಿರುವ ಮನೆಯೊಂದರಲ್ಲಿ 40 ಜನರಿಗೆ ಮಂಗಳವಾರ ರಾಪಿಡ್ ಟೆಸ್ಟ್ ಮಾಡಲಾಯಿತು. ಈ ಪೈಕಿ ಒಂದೇ ಮನೆಯಲ್ಲಿ 7 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಲಾಗಿದೆ.
ಪರೀಕ್ಷಾ ಸ್ಥಳಕ್ಕೆ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಟಿಹೆಚ್ಓ ಡಾ. ಚಂದ್ರಮೋಹನ್, ಉಪತಹಶೀಲ್ದಾರ್ ಆರ್. ರವಿ ಅವರು ಭೇಟಿ ನೀಡಿದ್ದರು. ಇದೇ ದಿನ ಭಾನುವಳ್ಳಿ ಯಲ್ಲೂ 82 ಜನರಿಗೆ ರಾಪಿಡ್ ಟೆಸ್ಟ್ ಮಾಡಲಾಯಿತು.
ದೇವರಬೆಳಕೆರೆ ವೈದ್ತಾಧುಜಾರು ಡಾ. ದರ್ಶನ್, ಹಿರಿಯ ಆರೋಗ್ಯ ಸಹಾಯಕ ಪಿಡಿಓ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್, ಎಂ. ಉಮ್ಮಣ್ಣ, ಪ್ರಯೋಗ ಶಾಲಾ ತಂತ್ರಜ್ಞರಾದ ರಂಗನಾಥಸ್ವಾಮಿ, ರಮಾನಾಯ್ಕ ಹಾಗೂ ಆಶಾ ಕಾರ್ಯಕರ್ತೆಯರು ಈ ವೇಳೆ ಹಾಜರಿದ್ದರು.