ದಾವಣಗೆರೆ, ಆ 17- ಜಿಲ್ಲೆಯಲ್ಲಿ ಸೋಮವಾರ 165 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 212 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿ ದ್ದಾರೆ. ಪ್ರಸ್ತುತ 1582 ಸಕ್ರಿಯ ಪ್ರಕರಣಗಳಿವೆ. ದಾವಣಗೆರೆ ತಾಲ್ಲೂಕಿನಲ್ಲಿ 77, ಹರಿಹರ 27, ಜಗಳೂರು 6, ಚನ್ನಗಿರಿ 18, ಹೊನ್ನಾಳಿ 30 ಹಾಗೂ ಹೊರ ಜಿಲ್ಲೆಯ 7 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಪಿ.ಬಿ. ರಸ್ತೆ ದೊಡ್ಡಬಾತಿಯ 49ರ ಪುರುಷ, ಇಂದಿರಾ ಬಡಾವಣೆಯ 64 ಪುರುಷ, ಗಂಗಾಂಭಿಕಾ ಬಡಾವಣೆಯ 60ರ ಪುರುಷ, ನಿಟುವಳ್ಳಿಯ 29ರ ಮಹಿಳೆ, ಶಿವಕುಮಾರ ಸ್ವಾಮಿ ಬಡಾವಣೆ 49ರ ಪುರುಷ, ದುಗ್ಗಮ್ಮನ ದೇವಸ್ಥಾನದ ಬಳಿಯ 29ರ ಪುರುಷ, 60ರ ಮಹಿಳೆ, ವಿವೇಕಾನಂದ ಬಡಾವಣೆ 2ನೇ ಕ್ರಾಸ್ 47ರ ಪುರುಷ,
ಪಿಜೆ ಬಡಾವಣೆ ಪೆವಿಲಿಯನ್ ರಸ್ತೆಯ 55ರ ಮಹಿಳೆ, ವಿನಾಯಕ ನಗರ 2ನೇ ಕ್ರಾಸ್ 52ರ ಪುರುಷ, ಕೆಟಿಜೆ ನಗರ 11ನೇ ಕ್ರಾಸ್ನ 52ರ ಪುರುಷ, ಹೊಂಡದ ವೃತ್ತದ ಬಳಿಯ 53ರ ಪುರುಷ, ವಿನಾಯಕ ಬಡಾವಣೆ 2ನೇ ಕ್ರಾಸ್ 45ರ ಮಹಿಳೆ, 55ರ ಮಹಿಳೆ, ಸರಸ್ವತಿ ನಗರ 67ರ ಪುರುಷ, ದೇವರಾಜ ಅರಸು ಬಡಾವಣೆಯ 65ರ ಪುರುಷ, ಬಸಾಪುರದ 40 ಮಹಿಳೆ, ಜಯ ನಗರದ 47ರ ಪುರುಷ.
ವಿದ್ಯಾನಗರದ 32ರ ಪುರುಷ, ನಿಟುವಳ್ಳಿಯ 28ರ ಪುರುಷ, ಪಿಜೆ ಬಡಾವಣೆಯ 82ರ ಪುರುಷ, ಆವರೆಗೆರೆಯ 28ರ ಪುರುಷ, ಮೌನೇಶ್ವರ ಬಡಾವಣೆಯ 70ರ ಮಹಿಳೆ, ಎಸ್.ಎಸ್. ಲೇ ಔಟ್ 3ನೇ ಕ್ರಾಸ್ 72ರ ಪುರುಷ, 43ರ ಪುರುಷ, ಕನಗೊಂಡನಹಳ್ಳಿಯ 22ರ ಯುವಕ, ಭಗತ್ ಸಿಂಗ್ ನಗರ 11ನೇ ಕ್ರಾಸ್ 35ರ ಪುರುಷ, ಹೊಂಡದ ಸರ್ಕಲ್ 45ರ ಮಹಿಳೆ, 34ರ ಮಹಿಳೆ, ವಿನೋಬನಗರ 4ನೇ ಮೇನ್ 3ನೇ ಕ್ರಾಸ್ 42ರ ಪುರುಷ, 47ರ ಮಹಿಳೆ, 22ರ ಮಹಿಳೆ, 54ರ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್ 70ರ ಪುರುಷ, ಜಾಲಿ ನಗರ 65ರ ಮಹಿಳೆ, ಶೇಖರಪ್ಪ ಬಡಾವಣೆ ಆವರೆಗರೆ 6ರ ಬಾಲಕ, ಹಳೇ ಬಸ್ ನಿಲ್ದಾಣದ ಎದುರು 52ರ ಮಹಿಳೆ, ಕೆಟಿಜೆ ನಗರ 54ರ ಪುರುಷ.
ಹರಿಹರ: 17 ದೃಢ
ಹರಿಹರ : ನಗರದಲ್ಲಿ 12 ಗ್ರಾಮೀಣ ಪ್ರದೇಶಗಳಲ್ಲಿ 5 ಸೇರಿದಂತೆ ಒಟ್ಟು 17 ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ತಹಶೀ ಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದರು.
ನಗರದ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಬೆಸ್ಕಾಂ ಇಲಾಖೆ ಸಿಬ್ಬಂದಿಗಳಲ್ಲಿ ಕಾಣಿಸಿಕೊಂಡಿದ್ದ ಸೋಂಕು ಇದೀಗ ನಗರಸಭೆ ಆಪರೇಟರ್ ಸಿಬ್ಬಂದಿಯಲ್ಲೂ ಪತ್ತೆಯಾಗಿದೆ. ಕಾರಣ, ನಗರಸಭೆ ಆವರಣದಲ್ಲಿ ಸ್ಯಾನಿಟೈಸರ್ ಮಾಡಿ, ಸೀಲ್ ಡೌನ್ ಮಾಡಲಾಗಿದೆ.
ನಗರದ ಜೆ.ಸಿ. ಬಡಾವಣೆ, ವಿದ್ಯಾ ನಗರದ 4, ವಿಜಯನಗರ ಬಡಾವಣೆ ಯಲ್ಲಿ 1, ಆಶ್ರಯ ಕಾಲೂನಿ 1, ಹೆಚ್. ಎಸ್. ಬಡಾವಣೆಯಲ್ಲಿ 1 ಸೇರಿದಂತೆ ಗ್ರಾಮೀಣ ಪ್ರದೇಶದವಾದ ಮಲೆ ಬೆನ್ನೂರು 1, ಸಾರಥಿ 3, ಬನ್ನಿಕೊಡು1 ಗ್ರಾಮದಲ್ಲಿ ಕೊರೊನಾ ಸೋಂಕು ಹರಡಿಕೊಂಡಿದೆ. ಇಲ್ಲಿಯವರೆಗೆ ನಗರದಲ್ಲಿ 535 ಗ್ರಾಮೀಣ ಪ್ರದೇಶಗಳಲ್ಲಿ 315 ಸೇರಿ ಒಟ್ಟು 852 ವ್ಯಕ್ತಿಗಳಿಗೆ ಸೋಂಕು ತಗುಲಿದ್ದು 331 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.
ಹೋಂ ಐಸೋಲೇಷನ್ ನಲ್ಲಿ 235, ದಾವಣಗೆರೆ ಸಿ.ಜೆ. ಆಸ್ಪತ್ರೆಯಲ್ಲಿ142, ಕೊವಿಡ್ ಕೇರ್ ಸೆಂಟರ್ ನಲ್ಲಿ 175, ಹರಿಹರ ಸಿ.ಜೆ. ಆಸ್ಪತ್ರೆಯಲ್ಲಿ 239 ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಕಂಟೋನ್ಮೆಂಟ್ ಝೋನ್ ಗಳು 285 ಇದ್ದು ಅದರಲ್ಲಿ 131 ಅವಧಿ ಮುಗಿದಿದ್ದು ಉಳಿದ 154 ಕಂಟೋನ್ಮೆಂಟ್ ಝೋನ್ ಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು 180 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯವರೆಗೆ 9548 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಾಯುಕ್ತೆ ಎಸ್ ಲಕ್ಷ್ಮೀ, ಆರೋಗ್ಯ ಇಲಾಖೆಯ ಮಹೇಶ ಕೊಡಬಾಳು ,ಕೋಡಿ ಭೀಮರಾಯ್ ಇತರರು ಹಾಜರಿದ್ದರು.
ಮಲೇಬೆನ್ನೂರಿನಲ್ಲಿ 75, ಹೊಳೆಸಿರಿಗೆರೆಯಲ್ಲಿ 50 ಜನರಿಗೆ ರಾಪಿಡ್ ಟೆಸ್ಟ್, ನಾಲ್ವರಿಗೆ ದೃಢ
ಮಲೇಬೆನ್ನೂರು, ಆ17- ಪಟ್ಟಣದಲ್ಲಿ ಸೋಮವಾರ ಮತ್ತೆ 75 ಜನರಿಗೆ ರಾಪಿಡ್ ಟೆಸ್ಟ್ ಮಾಡಲಾಗದ್ದು, ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ.
ತಹಶೀಲ್ದಾರ್ ಅವರ ಸೂಚನೆಯಂತೆ ಇಲ್ಲಿನ ಕಲ್ಲೇಶ್ವರ ಬಡಾವಣೆ ಮತ್ತು ಬಸವೇಶ್ವರ ಬಡಾವಣೆಯ ಕಂಟೈನ್ಮೆಂಟ್ ಜೋನ್ನಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಟ್ಟು 75 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ ಎಂದು ಉಪತಹಶೀಲ್ದಾರ್ ಆರ್. ರವಿ, ವೈದ್ಯಾಧಿಕಾರಿ ಡಾ. ಲಕ್ಷ್ಮೀದೇವಿ ಅವರು ಮಾಹಿತಿ ನೀಡಿದರು.
ಹೊಳೆಸಿರಿಗೆರೆ : ಇಲ್ಲಿನ ಗ್ರಾಪಂ ಕಛೇರಿ ಯಲ್ಲಿ ಶುಕ್ರವಾರ 50 ಜನರಿಗೆ ಕೊರೊನಾ ರಾಪಿಡ್ ಟೆಸ್ಟ್ ಮಾಡಲಾಯಿತು. ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಮಲೇರಿಯಾ ಅಧಿಕಾರಿ ಹಾಗೂ ಹರಿಹರ ತಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ನಟರಾಜ್ ಭೇಟಿ ನೀಡಿ ವೀಕ್ಷಿಸಿದರು.
ವೈದ್ಯಾಧಿಕಾರಿ ಡಾ. ರೇಖಾ, ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಹೆಚ್. ಪಾಟೀಲ್ ಪ್ರಯೋಗ ಶಾಲಾ ತಂತ್ರಜ್ಞರಾದ ದೇವರಾಜ್, ನೀಲಪ್ಪ, ಆರೋಗ್ಯ ಸಿಬ್ಬಂದಿ ಪ್ರಕಾಶ್ನಾಯ್ಕ್, ಆಶಾ ಕಾರ್ಯಕರ್ತೆಯರಾದ ಮಾಲಾಶ್ರೀ, ಕರಿಬಸಪ್ಪ, ಪಿಡಿಓ ನಂದ್ಯೆಪ್ಪ ಈ ವೇಳೆ ಹಾಜರಿದ್ದರು.
ದಾವಣಗೆರೆಯ ಇ.ಡಬ್ಲೂ.ಎಸ್. ಕಾಲೋನಿ 2ನೇ ಮೇನ್, 3ನೇ ಕ್ರಾಸ್, 24ರ ಪುರುಷ, 86ರ ವೃದ್ದೆ, 4 ರ ಬಾಲಕಿ, ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತದ 58ರ ಪುರಷ, ಎಂ.ಸಿ.ಸಿ. ಬಿ ಬ್ಲಾಕ್ 17ನೇ ಮೇನ್ 7ನೇ ಕ್ರಾಸ್ನ 80ರ ವೃದ್ದೆ, ವಿನೋಬನಗರ 3ನೇ ಮೇನ್ 2ನೇ ಕ್ರಾಸ್ ನ 70ರ ವೃದ್ದೆ, ಟಿ.ಸಿ ಲೇಔಟ್ನ 27ರ ಪುರಷ, ಪಿ.ಜೆ. ಬಡಾವಣೆಯ 7ನೇ ಮೇನ್, 7ನೇ ಕ್ರಾಸ್ 33ರ ಪುರುಷ, 33ರ ಮಹಿಳೆ, 30ರ ಮಹಿಳೆ,3ರ ಬಾಲಕಿ,
9ನೇ ಮೇನ್ 9ನೇ ಕ್ರಾಸ್ 2 ರ ಬಾಲಕಿಬಿ.ಟಿ.ಲೇಔಟ್ ಎಲ್.ಐ.ಸಿ ಆಫೀಸ್ ಹಿಂಭಾಗ 38ರ ಪುರುಷ, ವಿದ್ಯಾನಗರ 5ನೇ ಮೇನ್, 5ನೇ ಕ್ರಾಸ್, 47ರ ಮಹಿಳೆ.
ಜಯನಗರದ 55ರ ಮಹಿಳೆ, ಶೇಖರಪ್ಪ ಬಡಾವಣೆಯ 23ರ ಮಹಿಳೆ, ವಿನೋಬನಗರದ 35ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆಯ 33ರ ಮಹಿಳೆ, 50ರ ಪುರುಷ, ದೊಡ್ಡಬಾತಿಯ 50ರ ಮಹಿಳೆ, ದೊಡ್ಡಮ್ಮ ದೇವಸ್ಥಾನ ಆವರೆಗರೆಯ 46ರ ಮಹಿಳೆ, ಚೌಡೇಶ್ವರಿ ದೇವಸ್ಥಾನದ ಬಳಿ ಆವರೆಗೆರ 52ರ ಪುರುಷ, ಆಂಜನೇಯ ದೇವಸ್ಥಾನದ ಆವರಗೆರೆಯ 19ರ ಯುವತಿ, ಪಿಜೆ ಬಡಾವಣೆ 41ರ ಪುರುಷ, ಶೇಖರಪ್ಪ ನಗರದ 75ರ ವೃದ್ಧೆ ಸೇರಿ 165 ಜನರಲ್ಲಿ ಸೋಂಕು ಪತ್ತೆಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 143 ಹರಿಹರ 24, ಜಗಳೂರು 4, ಚನ್ನಗಿರಿ 10, ಹೊನ್ನಾಳಿ 28 ಹಾಗೂ ಹೊರ ಜಿಲ್ಲೆಯ 3 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.