ದಾವಣಗೆರೆ, ಆ.13- ಜಿಲ್ಲೆಯಲ್ಲಿ ಗುರುವಾರ 200 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ವರದಿಯಾಗಿದೆ. ಮೂವರು ಸಾವನಪ್ಪಿದ್ದು, 224 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 114 ಜನರು ಸಾವನ್ನಪ್ಪಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ 265, ಹರಿಹರ 64, ಜಗಳೂರು 16, ಚನ್ನಗಿರಿ 34, ಹೊನ್ನಾಳಿ 39 ಹಾಗೂ ಹೊರ ಜಿಲ್ಲೆಯ 5 ಜನರಿಗೆ ಪಾಸಿಟಿವ್ ಪತ್ತೆಯಾಗಿದೆ.
ದಾವಣಗೆರೆಯ ಶಾಂತಿ ನಗರದ 31ರ ಪುರುಷ, ಒಂದನೇ ಎಂ.ಎಂ.ಎಫ್.ಸಿ. ನ್ಯಾಯಾಲಯದ 39ರ ಮಹಿಳೆ, ನ್ಯಾಯಾಧೀಶರ ನಿವಾಸದಲ್ಲಿನ 48ರ ಪುರುಷ, ಲೆನಿನ್ ನಗರದ 60ರ ಪುರುಷ, ವಿನೋಬನಗರದ 19ರ ಬಾಲಕ, ಮಂಡಲೂರು ಗ್ರಾಮದ 80ರ ವೃದ್ಧ, ಶಾಮನೂರಿನ 40ರ ಪುರುಷ, ನರಸರಾಜ ಪೇಟೆಯ 44ರ ಪುರುಷ, ಸಿದ್ಧವೀರಪ್ಪ ಬಡಾವಣೆಯ 58ರ ಪುರುಷ, ಪೊಲೀಸ್ ಕ್ವಾಟ್ರಸ್ ಹಿಂಭಾಗ ನಿಟುವಳ್ಳಿ 52ರ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್ 27ರ ಪುರುಷ, ಎಸ್.ಎಸ್. ಬಡಾವಣೆ 3ನೇ ಕ್ರಾಸ್ 47ರ ಮಹಿಳೆ, ಅಜಾದ್ ನಗರ 9ನೇ ಕ್ರಾಸ್ 28ರ ಮಹಿಳೆ.
ನಿಟುವಳ್ಳಿ 43ರ ಪುರುಷ, ಎಸ್.ಎಸ್. ಬಡಾವಣೆಯ 45ರ ಪುರುಷ, 30ರ ಮಹಿಳೆ, 5ರ ಬಾಲಕಿ, 3ರ ಬಾಲಕ, ಆಂಜನೇಯ ಬಡಾವಣೆಯ 18ನೇ ಕ್ರಾಸ್ 48ರ ಪುರುಷ, ದೇವರಾಜ ಅರಸು ಬಡಾವಣೆಯ 41ರ ಪುರುಷ, ಶ್ರೀನಿವಾಸ 10ನೇ ಕ್ರಾಸ್ 80ರ ಪುರುಷ, ರಾಜೀವ್ ಗಾಂಧಿ ಬಡಾವಣೆಯ 20ರ ಮಹಿಳೆ, ಕುರ್ಕಿ ಗ್ರಾಮದ 75ರ ಮಹಿಳೆ, ರೈಲ್ವೇ ರ್ಯಾನಿಂಗ್ ರೂಂ ಹಿಂಭಾಗದ 47ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆಯ 39ರ ಪುರುಷ, 39ರ ಮಹಿಳೆ, ಹೊಂಡದ ರಸ್ತೆಯ 31ರ ಪುರುಷ.
ಎಂ.ಸಿ.ಸಿ. ಬಿ ಬ್ಲಾಕ್ 77ರ ಮಹಿಳೆ, ವಿನೋಬನಗರದ 14ನೇ ಕ್ರಾಸ್ 46ರ ಪುರುಷ, ಹೆಚ್.ಕೆ.ಆರ್. 5ನೇ ಕ್ರಾಸ್ 50ರ ಮಹಿಳೆ, ಎಸ್.ಎಸ್. ಬಡಾವಣೆ ಬಿ ಬ್ಲಾಕ್ 63ರ ಪುರುಷ, ನಿಜಲಿಂಗಪ್ಪ ಬಡಾವಣೆಯ 45ರ ಪುರುಷ, ಗಾಂಧಿ ನಗರ 1ನೇ ಮೇನ್ 23ರ ಪುರುಷ, 28ರ ಪುರುಷ, 34ರ ಪುರುಷ, ಆಲೂರು ಹಟ್ಟಿಯ 30ರ ಮಹಿಳೆ, 22ರ ಮಹಿಳೆ, 1 ವರ್ಷದ ಹೆಣ್ಣು ಮಗು, ನಾಗರಕಟ್ಟೆಯ 75ರ ಮಹಿಳೆ, ದೇವರಾಜ ಅರಸು ಬಡಾವಣೆ 50ರ ಮಹಿಳೆ.
ನಾಗರಕಟ್ಟೆಯ 26ರ ಮಹಿಳೆ, ಮುಗ್ಗಿದರಾಗಿಹಳ್ಳಿಯ ಶಾಲೆ ಹಿಂಭಾಗದ 62ರ ಮಹಿಳೆ, 38ರ ಪುರುಷ, 25ರ ಪುರುಷ,
ಜಿಲ್ಲೆಯಲ್ಲಿ ಲೆಕ್ಕ ತಪ್ಪಿದ ಕೊರೊನಾ
ಗುರುವಾರ ಜಿಲ್ಲಾಡಳಿತ ನೀಡಿದ ಮಾಹಿತಿಯಲ್ಲಿ 323 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿತ್ತು. ಆದರೆ ಆದರಲ್ಲಿ ಬುಧವಾರ ಸೋಂಕು ದೃಢಪಟ್ಟಿದ್ದ 123ಜನರ ಮರು ಸೇರ್ಪಡೆಯಾಗಿತ್ತು.
ಬುಧವಾರದ ಜಿಲ್ಲಾ ಬುಲೆಟನ್ನಲ್ಲಿ 239 ಜನಕ್ಕೆ ಪಾಸಿಟಿವ್ ಬಂದ ಬಗ್ಗೆ ವರದಿಯಾಗಿತ್ತು. ಆದರೆ ಅದರಲ್ಲಿ ಮಂಗಳವಾರ ವರದಿಯಾದ 29 ಜನರ ಹೆಸರು ಮತ್ತೆ ಸೇರ್ಪಡೆಗೊಂಡಿತ್ತು. ಹೀಗಾಗಿ ಜಿಲ್ಲಾಡಳಿತ ನೀಡಿರುವ ಕೊರೊನಾ ಸೋಂಕಿತರ ಮಾಹಿತಿ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ.
ಅಧಿಕಾರಿಗಳ ಸ್ಪಷ್ಟನೆ : ಇವತ್ತಿನ ಮೀಡಿಯಾ ಬುಲೆಟಿನ್ನಲ್ಲಿ ಜಿಲ್ಲೆಯಲ್ಲಿ 323 ಹೊಸ ಪ್ರಕರಣಗಳು ಎಂದು ವರದಿಯಾಗಿರುತ್ತದೆ. ವಾಸ್ತವವಾಗಿ 200 ಪ್ರಕರಣಗಳು ಮಾತ್ರ ಇರುತ್ತವೆ. ಐಸಿಎಂಆರ್ ಪೋರ್ಟಲ್ ನಲ್ಲಿ 200 ಪ್ರಕರಣಗಳು ಮಾತ್ರ ಆಪ್ಲೋಡ್ ಆಗಿದ್ದು ಇವುಗಳನ್ನು ಜಿಲ್ಲೆಯಿಂದ ಪಾಸಿಟಿವ್ ಕೇಸ್ ಗಳನ್ನು ಆಪ್ಲೋಡ್ ಮಾಡಬೇಕಾದ ‘ಪರಿಹಾರ’ ಪೋರ್ಟಲ್ ನಲ್ಲಿ ನಮೂದು ಮಾಡುವಾಗ ನಿನ್ನೆಯ 123 ಪ್ರಕರಣಗಳು ಉಳಿದುಕೊಂಡಿರುತ್ತವೆ. ಡಬಲ್ ಎಂಟ್ರಿಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸಿದ್ದು, ಆದರೂ ಡಿಲೀಟ್ ಆಗಿರುವುದಿಲ್ಲ. ಈ ತಾಂತ್ರಿಕ ದೋಷದಿಂದ ಹೆಚ್ಚುವರಿ ಪ್ರಕರಣಗಳು ರಾಜ್ಯದ ಮತ್ತು ನಮ್ಮ ಜಿಲ್ಲಾ ಬುಲೆಟಿನ್ನಲ್ಲಿ ನಮೂದಾಗಿವೆ. ಈ ದೋಷಗಳನ್ನು ಸರಿಪಡಿಸಿದ ನಂತರ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ ನಿಖರವಾಗಿ ತಿಳಿಯಲಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಜಿ.ಡಿ. ರಾಘವನ್ ಸ್ಪಷ್ಟಪಡಿಸಿದ್ದಾರೆ.
ಗ್ರಾಮೀಣ ಭಾಗದ 52 ಜನರಿಗೆ ಕೊರೊನಾ ಸೋಂಕು
ಹರಿಹರ ತಾಲ್ಲೂಕಿನ 14 ಗ್ರಾಮೀಣ ಪ್ರದೇಶಗಳಲ್ಲಿ 38 ಸೇರಿ ಒಟ್ಟು 52 ವ್ಯಕ್ತಿಗಳಿಗೆ ಕೊರೊನಾ ಸೋಂಕು ದೃಡಪಟ್ಟಿದೆ ಎಂದು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ತಿಳಿಸಿದ್ದಾರೆ.
ಹರಿಹರ ನಗರದಲ್ಲಿ 14, ಮಲೆಬೆನ್ನೂರು 5, ಹೊಳೆಸಿರಿಗೆರೆ 3, ಕುರಬರಹಳ್ಳಿ 3, ಗಂಗನಹರಸಿ 3, ಬೆಳ್ಳೂಡಿ 5, ಜಿಗಳಿ, ಪಾಳ್ಯ, ಎಳೆಹೊಳೆ 12, ಬಿಳಸನೂರು 1, ಹಾಲಿವಾಣ 1, ಕಮಲಾಪುರ 1 ಸೇರಿದಂತೆ ಒಟ್ಟು 52 ವ್ಯಕ್ತಿಗಳಿಗೆ ಹರಡಿದೆ. ಇಲ್ಲಿಯವರೆಗೆ ನಗರದಲ್ಲಿ 480 ಗ್ರಾಮೀಣ ಪ್ರದೇಶಗಳಲ್ಲಿ 240 ವ್ಯಕ್ತಿಗಳು ಕೊರೊನಾ ಸೋಂಕು ಹರಡಿಕೊಂಡಿದ್ದು, 331 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಹೋಂ ಐಸೋಲೇಷನ್ನಲ್ಲಿ 168 ದಾವಣಗೆರೆ ಸಿ.ಜಿ. ಆಸ್ಪತ್ರೆಯಲ್ಲಿ 135, ಕೋವಿಡ್ ಕೇರ್ ಸೆಂಟರ್ನಲ್ಲಿ 167, ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿ 191 ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 161 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಒಟ್ಟು 8744 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಕಂಟೈನ್ಮೆಂಟ್ ಝೋನ್ 242 ಇದ್ದು, ಅದರಲ್ಲಿ 110 ಅವಧಿ ಮುಕ್ತವಾಗಿ ಉಳಿದ 132 ಕಂಟೈನ್ಮೆಂಟ್ ಝೋನ್ಗಳಲ್ಲಿ ಯಾವುದೇ ರೀತಿಯ ಅಗತ್ಯ ವಸ್ತುಗಳಿಗೆ ತೊಂದರೆ ಬರದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಆವರಗೆರೆ ಆಂಜನೇಯ ದೇವಸ್ಥಾನದ ದಾವಣಗೆರೆ 70ರ ಪುರುಷ, 36ರ ಮಹಿಳೆ, 3ರ ಬಾಲಕ, 56ರ ಮಹಿಳೆ, 20ರ ಮಹಿಳೆ, 28ರ ಮಹಿಳೆ,
ಸಿದ್ದವೀರಪ್ಪ ಬಡಾವಣೆ 12ನೇ ಕ್ರಾಸ್ 50ರ ಮಹಿಳೆ, ಚಿಕ್ಕನಹಳ್ಳಿ ಹೊಸ ಬಡಾವಣೆ 31ರ ಪುರುಷ, ದೇವರಾಜ ಅರಸು ಬಡಾವಣೆ 20ರ ಮಹಿಳೆ, ಮೌನೇಶ್ವರ ಬಡಾವಣೆ 70ರ ವೃದ್ಧ, ಹಳೇಬಾತಿಯ 68ರ ಪುರುಷ, ಹನುಮನಹಳ್ಳಿಯ 20ರ ಪುರುಷ, ಕುರ್ಕಿಯ 50ರ ಪುರುಷ, 47ರ ಮಹಿಳೆ, 25ರ ಮಹಿಳೆ, ಪಿಜೆ ಬಡಾವಣೆ 53ರ ಪುರುಷ, ಅಶೋಕ ನಗರದ 63ರ ಮಹಿಳೆ, ವಿನೋಬನಗರದ 5ನೇ ಕ್ರಾಸ್ 41ರ ಪುರುಷ, ಮಸ್ತಾಫಾ ನಗರದ 42ರ ಪುರುಷ, ಎಸ್.ಎಸ್. ಬಡಾವಣೆ ಬಿ ಬ್ಲಾಕ್ 55ರ ಮಹಿಳೆ, 1ನೇ ಕ್ರಾಸ್ 23ರ ಪುರುಷ, 47ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್ 56ರ ಪುರುಷ, 62ರ ಮಹಿಳೆ, 25ರ ಪುರುಷ, 11ನೇ ಮೇನ್ 63ರ ಮಹಿಳೆ, ಆರ್.ಎಸ್.ಐ. ಆಸ್ಪತ್ರೆ ಹಿಂಭಾಗ 35ರ ಮಹಿಳೆ, ವಿನಾಯಕ ನಗರ 5ನೇ ಕ್ರಾಸ್ 40ರ ಮಹಿಳೆ, ಲೆನಿನ್ ನಗರ 67ರ ಪುರುಷ, ಬೇತೂರು ಜಗಳೂರು ರಸ್ತೆಯ 65ರ ಪುರುಷ,
ಬ್ಯಾಂಕ್ ಆಫ್ ಬರೋಡ ಪಿಜೆ ಬಡಾವಣೆ 26ರ ಪುರುಷ, 24ರ ಪುರುಷ, ಡಾಲರ್ಸ್ ಕಾಲೋನಿ ಶಾಮನೂರು 45ರ ಪುರುಷ,
63ರ ಪುರುಷ, 65ರ ಪುರುಷ, 66ರ ಮಹಿಳೆ, ಕಂದನಕೋವಿಯ 37ರ ಪುರುಷ, ನಾಗರಕಟ್ಟೆಯ 50ರ ಪುರುಷ, ನಿಜಲಿಂಗಪ್ಪ ಬಡಾವಣೆ 1ನೇ ಕ್ರಾಸ್ 43ರ ಮಹಿಳೆ, ತರಳಬಾಳು ಬಡಾವಣೆ 64ರ ಮಹಿಳೆ, ಕಲ್ಲೇಶ್ವರ ಮಿಲ್ ಬಳಿಯ 47ರ ಪುರುಷ, ಮುಡೇನಹಳ್ಳಿ 60ರ ಮಹಿಳೆ, ಹನುಮನಹಳ್ಳಿಯ 18ರ ಬಾಲಕಿ, 25ರ ಮಹಿಳೆ, ಸಿದ್ದವೀರಪ್ಪ ಬಡಾವಣೆ 48ರಪುರುಷ ಇವರು ಸೋಂಕಿಗೆ ತುತ್ತಾಗಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ 139, ಹರಿಹರ 27, ಜಗಳೂರು 4, ಚನ್ನಗಿರಿ 21, ಹೊನ್ನಾಳಿ 28 ಹಾಗೂ ಹೊರ ಜಿಲ್ಲೆಯ 5 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.