ದಾವಣಗೆರೆ ಆ. 12 – ಇಲ್ಲಿನ ಗಾಂಧಿನಗರದ ಶ್ರೀ ಹೊರಟ್ಟಿ ದುರ್ಗಾಂಬಿಕಾ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಡಾ|| ಶಾಮನೂರು ಶಿವಶಂಕರ ಪ್ಪನವರ ಅಭಿಮಾನಿಗಳು ಹಾಗೂ ಗಾಂಧಿನಗರದ ಮುಖಂಡರುಗಳಿಂದ ನಾಡಿದ್ದು ದಿನಾಂಕ 14ರಂದು ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕೊರೊನಾದಿಂದ ಶೀಘ್ರ ಗುಣಮುಖರಾಗಲೆಂದು ವಿವಿಧ ದೇವಸ್ಥಾನ ಗಳಲ್ಲಿ ಅಭಿಷೇಕ ಮತ್ತು ಪೂಜೆ ಏರ್ಪಡಿಸಲಾಗಿದೆ.
ಅಂದು ಮಧ್ಯಾಹ್ನ 12 ಗಂಟೆಗೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ, ಶ್ರೀ ಹೊರಟ್ಟಿ ಶ್ರೀದುರ್ಗಾಂಬಿಕಾ ದೇವಿ, ಶ್ರೀಮರಿಯಮ್ಮ ದೇವಿ ಹಾಗೂ ಶ್ರೀ ಭೈರೇಶ್ವರ ದೇವರು ಸೇರಿದಂತೆ ಗಾಂಧಿನಗರದ ಎಲ್ಲಾ ದೇವಸ್ಥಾನಗಳಲ್ಲಿ ಅಭಿಷೇಕ ಮತ್ತು ಪೂಜೆ ನಡೆಸಲಾಗುವುದು ಎಂದು ಮುಖಂಡರುಗಳಾದ ಎಲ್.ಎಂ.ಹನುಮಂತಪ್ಪ, ಬಿ.ಹೆಚ್.ವೀರಭದ್ರಪ್ಪ, ಬಿ.ಎಂ.ರಾಮಸ್ವಾಮಿ, ಎನ್. ನೀಲಗಿರಿಯಪ್ಪ ತಿಳಿಸಿದ್ದಾರೆ.