ದಾವಣಗೆರೆ, ಆ. 11- ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಶೇ.79.76ರಷ್ಟು ಫಲಿತಾಂಶ ಲಭಿಸಿದೆ.
9,926 ಬಾಲಕರು ಹಾಗೂ 10,198 ಬಾಲಕಿಯರು ಸೇರಿ 20,124 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 7,614 ಬಾಲಕರು ಹಾಗೂ 8,437 ಬಾಲಕಿಯರು ಸೇರಿ ಒಟ್ಟು 16,051 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜಗಳೂರು ತಾಲ್ಲೂಕು ಈ ವರ್ಷ ಶೇ.87.68ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮವಾಗಿದೆ. ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 1,075 ಬಾಲಕರ ಪೈಕಿ 930 ಹಾಗೂ 1,020 ಬಾಲಕಿಯರ ಪೈಕಿ 907 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ದಾವಣಗೆರೆ ದಕ್ಷಿಣ ವಲಯ ದ್ವಿತೀಯ ಸ್ಥಾನದಲ್ಲಿದ್ದು, ಪರೀಕ್ಷೆ ಬರೆದ ,2802 ಬಾಲಕರು ಹಾಗೂ 2,840 ಬಾಲಕಿಯರ ಪೈಕಿ 2,370 ಬಾಲಕರು ಹಾಗೂ 2389 ಬಾಲಕಿಯರು ಉತ್ತೀರ್ಣರಾಗಿದ್ದಾರೆ. 83.72ರಷ್ಟು ಫಲಿತಾಂಶ ಬಂದಿದೆ.
ಹರಿಹರ ತಾಲ್ಲೂಕಿನಲ್ಲಿ 1,518 ಬಾಲಕರು ಹಾಗೂ 1,556 ಬಾಲಕಿಯರು ಪರೀಕ್ಷೆ ಬರೆದಿದ್ದು, 1,123 ಬಾಲಕರು ಹಾಗೂ 1,329 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಶೇ.80.70ರಷ್ಟು ಫಲಿತಾಂಶ ಬಂದಿದೆ.
ಚನ್ನಗಿರಿ ತಾಲ್ಲೂಕಿಲ್ಲಿ 1,767 ಬಾಲಕರು ಹಾಗೂ 1,847 ಬಾಲಕಿಯರು ಪರೀಕ್ಷೆ ಬರೆದಿದ್ದು, 1,290 ಬಾಲಕರು ಹಾಗೂ 1,556 ಬಾಲಕಿಯರು ಉತ್ತೀರ್ಣರಾಗಿ ಶೇ.78.74ರಷ್ಟು ಫಲಿತಾಂಶ ಲಭಿಸಿದೆ.
ದಾವಣಗೆರೆ ಉತ್ತರ ವಲಯಕ್ಕೆ ಶೇ.73.11 ರಷ್ಟು ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 1,553 ಬಾಲಕರು ಹಾಗೂ 1,493 ಬಾಲಕಿಯರ ಪೈಕಿ, 1,106 ಬಾಲಕರು ಹಾಗೂ 1,121 ಬಾಲಕಿಯರು ಪಾಸಾಗಿದ್ದಾರೆ.
ಹೊನ್ನಾಳಿ ತಾಲ್ಲೂಕಿಗೆ ಶೇ. 72.75ರಷ್ಟು ಫಲಿತಾಂಶ ಲಭಿಸಿದ್ದು, 1,211 ಬಾಲಕರ ಪೈಕಿ 795 ಹಾಗೂ 1,442 ಬಾಲಕಿಯರ ಪೈಕಿ 1,135 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
2 ಶೂನ್ಯ ಫಲಿತಾಂಶ: ಚನ್ನಗಿರಿ ತಾಲ್ಲೂಕಿನ ಕರೇಕಟ್ಟೆ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ದಾವಣಗೆರೆ ದಕ್ಷಿಣ ವಲಯದ ಲೆನಿನ್ ನಗರದ ವಿಶ್ವಬಂಧು ಪ್ರೌಢಶಾಲೆ (ಅನುದಾನಿತ) ಶೂನ್ಯ ಫಲಿತಾಂಶ ಪಡೆದಿವೆ.
37 ಶಾಲೆಗಳಿಗೆ ಶೇ.100 ಫಲಿತಾಂಶ: 14 ಸರ್ಕಾರಿ ಶಾಲೆಗಳು, 6 ಅನುದಾನಿತ ಹಾಗೂ 17 ಅನುದಾನ ರಹಿತ ಸೇರಿ ಒಟ್ಟು 37 ಶಾಲೆಗಳು ಈ ಬಾರಿ ಶೇ.100ರಷ್ಟು ಫಲಿತಾಂಶ ಪಡೆದಿವೆ.
ಚನ್ನಗಿರಿ ತಾಲ್ಲೂಕು ಕಾಕನೂರು ಕಿತ್ತೂರು ರಾಣಿ ವಸತಿ ಶಾಲೆ, ವಿನಾಯಕ ಪ್ರೌಢಶಾಲೆ, ಗುಳ್ಳಹಳ್ಳಿಯ ರಂಗನಾಥ ಪ್ರೌಢಶಾಲೆ, ಕಬ್ಬಳ್ಳಿಯ ವಿದ್ಯಾಲಕ್ಷ್ಮಿ ಪ್ರೌಢಶಾಲೆ.
ಹರಿಹರ ತಾಲ್ಲೂಕಿನ ಜಿ.ಬೇವಿನಹಳ್ಳಿಯ ಸಿದ್ದಲಿಂಗೇಶ್ವರ ಪ್ರೌಢಶಾಲೆ, ನಂದಿಗುಡಿಯ ಮುರಾರ್ಜಿ ವಸತಿ ಶಾಲೆ.
ದಾವಣಗೆರೆ ಉತ್ತರ ವಲಯದ ಅಂಧ ಮಕ್ಕಳು ಪ್ರೌಢಶಾಲೆ, ಬಸಾಪುರದ ಸರ್ಕಾರಿ ಪ್ರೌಢಶಾಲೆ, ಹಾಲವರ್ತಿ ಸರ್ಕಾರಿ ಪ್ರೌಢಶಾಲೆ, ಅಣಜಿಯ ಶ್ರೀ ದೇವೀರಮ್ಮ ಪ್ರೌಢಶಾಲೆ, ಹೆಬ್ಬಾಳು ಶ್ರೀ ರುದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಲಯನ್ಸ್ ಪ್ರೌಢಶಾಲೆ, ನಂದಗೋಕುಲ ಪ್ರೌಢಶಾಲೆ, ಮೆಳ್ಳಕಟ್ಟೆಯ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆ, ಜ್ಞಾನಜ್ಯೋತಿ ಕಾನ್ವೆಂಟ್.
ದಾವಣಗೆರೆ ದಕ್ಷಿಣ ವಲಯದ ಗಂಗನಕಟ್ಟೆ ಸರ್ಕಾರಿ ಪ್ರೌಢಶಾಲೆ, ನಾಗರಸನಹಳ್ಳಿ ಸರ್ಕಾರಿ ಪ್ರೌಢಶಾಲೆ, ವಡೇರಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ, ಬೆಳವನೂರು ಮಾಗನೂರು ಬಸಪ್ಪ ಪ್ರೌಢಶಾಲೆ, ಎಸ್.ಟಿ.ಜೆ. ಪ್ರೌಢಶಾಲೆ ಅನುಭವ ಮಂಟಪ, ಸೇಂಟ್ ಜಾನ್ಸ್ ಕಾನ್ವೆಂಟ್, ಶ್ರೀ ಸೋಮೇಶ್ವರ ಪ್ರೌಢಶಾಲೆ, ಗೋಣಿವಾಡದ ಶ್ರೀ ಸೋಮೇಶ್ವರ ಪ್ರೌಢಶಾಲೆ, ಶ್ಯಾಗಲೆಯ ಕುವೆಂಪು ಪ್ರೌಢಶಾಲೆ, ಜೀನಿಯಸ್ ಸೆಂಟ್ರಲ್ ಸ್ಕೂಲ್.
ಜಗಳೂರು ತಾಲ್ಲೂಕಿನ ಮೆದಿಕೇರಿನಹಳ್ಳಿ ಸರ್ಕಾರಿ ಪ್ರೌಢಶಾಲೆ, ಹಿರೇಮಲ್ಲನಹೊಳೆ ಸರ್ಕಾರಿ ಪ್ರೌಢಶಾಲೆ, ಯರಲಕಟ್ಟೆ ಸರ್ಕಾರಿ ಪ್ರೌಢಶಾಲೆ, ಉದ್ದಘಟ್ಟದ ಕಿತ್ತೂರು ರಾಣಿ ವಸತಿ ಪ್ರೌಢಶಾಲೆ, ಮುಗ್ಗಿದರಾಗಿಹಳ್ಳಿ ಮುರಾರ್ಜಿ ವಸತಿ ಪ್ರೌಢಶಾಲೆ, ಜಗಳೂರಿನ ಬಾಲ ಭಾರತಿ ಪ್ರೌಢಶಾಲೆ, ಇಮಾಮ್ ಸ್ಮಾರಕ ಪ್ರೌಢಶಾಲೆ, ನವಚೇತನ ಪ್ರೌಢಶಾಲೆ, ದಿದ್ದಿಗಿ ರೂರಲ್ ಪಬ್ಲಿಕ್ ಪ್ರೌಢಶಾಲೆ.
ಹೊನ್ನಾಳಿ ತಾಲ್ಲೂಕಿನ ಮಾದನಬಾವಿ ಮುರಾರ್ಜಿ ವಸತಿ ಪ್ರೌಢಶಾಲೆ, ಹೊನ್ನಾಳಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ದುರ್ಗಿಗುಡಿ ಹಾಗೂ ಕುಂದೂರು ಜ್ಞಾನಗಂಗಾ ಪ್ರೌಢಶಾಲೆ ಇವು ಶೇ.100ರಷ್ಟು ಫಲಿತಾಂಶ ಪಡೆದಿವೆ.