ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ

ದಾವಣಗೆರೆ, ಆ. 11 – ನಗರದಲ್ಲಿ ಮಂಗಳವಾರ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು.  ಕೊರೊನಾ ಹಿನ್ನೆಲೆಯಲ್ಲಿ ಜನ್ಮಾಷ್ಟಮಿಯ ಸಂಭ್ರಮ ಅಷ್ಟಾಗಿ ಕಂಡು ಬರಲಿಲ್ಲ.

ಶ್ರೀ ಕೃಷ್ಣನ ಜನ್ಮಾಷ್ಠಮಿ ದಿನ ಮಕ್ಕಳಿಗೆ ಕೃಷ್ಣ-ರಾಧೆಯ ವೇಷ ತೊಡಿಸಿ ತಾಯಂದಿರು ಸಂಭ್ರಮಿಸಲು ಕೊರೊನಾ ತಡೆ ನೀಡಿದಂತಿತ್ತು. ಸಾಮಾನ್ಯವಾಗಿ  ಪ್ರತಿ ವರ್ಷ ಮಕ್ಕಳಿಗಾಗಿಯೇ ಶಾಲೆ, ದೇವಸ್ಥಾನಗಳಲ್ಲಿ ಬೆಣ್ಣೆ ತಿನ್ನುವ ಮತ್ತಿತರ ಮನರಂಜನಾ ಕಾರ್ಯಕ್ರಮಗಳೂ ಇರುತ್ತಿದ್ದವು. ಕೃಷ್ಣನನ್ನು ದೇವರಾಗಿ ನೋಡುವುದಕ್ಕಿಂತ ಹೆಚ್ಚಾಗಿ ಬಾಲ ಗೋಪಾಲನಾಗಿ ಕಣ್ತುಂಬಿಕೊಳ್ಳಲು ಹೆಚ್ಚು ಜನ ಇಷ್ಟಪಡುತ್ತಿದ್ದರು. ಕೃಷ್ಣ ಮಠ, ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ನೆರವೇರಿದರೆ ಶಾಲೆಗಳು, ಸಂಘ-ಸಂಸ್ಥೆಗಳು, ದೇಗುಲಗಳಲ್ಲಿ ಮಕ್ಕಳು ಮತ್ತು ದೊಡ್ಡವರಿಗಾಗಿ ವಿವಿಧ ಸ್ಪರ್ಧೆಗಳನ್ನು ಇಡಲಾಗುತ್ತಿತ್ತು. ಆದರೆ ಈ ಬಾರಿ ಅಂತಹ ಕಾರ್ಯಕ್ರಮಗಳು ನಡೆಯಲಿಲ್ಲ.

ಆದರೆ  ಶ್ರೀ ಗುರು ರಾಯರ ಮಠಗಳಲ್ಲಿ, ಶ್ರೀರಾಮನ ದೇವಸ್ಥಾನಗಳಲ್ಲಿ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

error: Content is protected !!