ದೇವರ ಮೇಲೆ ಭಕ್ತಿ ಇರಲಿ, ಗುರು – ಹಿರಿಯರನ್ನು ಗೌರವಿಸಿ

ದಾವಣಗೆರೆ, ಡಿ. 27- ದೇವರ ಮೇಲೆ ಭಕ್ತಿ ಇರಬೇಕು, ಗುರು – ಹಿರಿಯರನ್ನು ಗೌರವಿಸಬೇಕು ಎಂದು ಮಹಾನಗರಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಅವರು ತಿಳಿಸಿದರು.

ಅವರು ಇಂದು ನಗರದ ರೋಟರಿ ಬಾಲಭವನದಲ್ಲಿ ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ, ಸಾಧಕರಿಗೆ, ಕೊರೋನಾ ವಾರಿಯರ್ಸ್‍ಗಳಿಗೆ ಸನ್ಮಾನ, ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಹೆಚ್ಚಾದ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಪೂಜೆ ಕೈಗೊಂಡು ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಲಾಯಿತು, ಜನರ ದೈವಭಕ್ತಿಯಿಂದ ಕೊರೊನಾ ನಿಯಂತ್ರಣದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು . 

ಕೊರೋನಾ ವಾರಿಯರ್ಸ್‍ಗಳು ತಮ್ಮ ಜೀವದ ಹಂಗು ತೊರೆದು, ತಮ್ಮ ಕುಟುಂಬದಿಂದ ದೂರ ಉಳಿದು ಹಗಲಿರುಳು ಶ್ರಮಿಸಿದರು ಎಂದು ಪ್ರಶಂಸಿಸಿದರು.

 2020 ನೇ ವರ್ಷವನ್ನು ಮರೆತು, ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿ, ಜೀವನದಲ್ಲಿ ಸುಖ ಮತ್ತು ನೆಮ್ಮದಿಯನ್ನು ಕಾಣುವಂತಾಗಲೆಂದು ಆಶಿಸಿದರು. 

ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವ ವೀರಶೈವ- ಲಿಂಗಾಯತ ಏಕೀಕರಣ ಪರಿಷತ್ ಅಧ್ಯಕ್ಷರಾದ ರೇವಣ್ಣ ಬಳ್ಳಾರಿ ಅವರು ವಹಿಸಿದ್ದರು .

ಈ ಸಂದರ್ಭದಲ್ಲಿ 2020ರ ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಡಾ. ಹೆಚ್ ಷಡಾಕ್ಷರಪ್ಪ ಅವರನ್ನು ಸನ್ಮಾನಿಸಲಾಯಿತು. ಮನ ಮಂಥನ ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು . 

ಶಿಕ್ಷಕಿ ಜಿ ಸಿ ಶಿಲ್ಪ ಅವರು ಹೊಸ ವರ್ಷ ಹೊಸ ಹರುಷ ವಿಷಯ ಕುರಿತು ಉಪನ್ಯಾಸ ನೀಡಿದರು , ಶರಣ ದಂಪತಿಗಳಾದ ಶ್ರೀಮತಿ ಜಯಶ್ರೀ ಮತ್ತು ಶಿವಕುಮಾರ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೊರೊನಾ ವಾರಿಯರ್ಸ್ ಪೋಲೀಸ್ ಇಲಾಖೆಯ ಪ್ರಶಾಂತ್ ಅವರನ್ನು ಗೌರವಿಸಲಾಯಿತು. ದಾನಿಗಳಾದ ಹೆಚ್ ಜಿ ಉಮೇಶ್ ಮತ್ತು ನ್ಯಾಮತಿ ಶಿವಕುಮಾರ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಕ್ಕೇಶ್‍ ನಾಗನೂರು ಅವರೂ ಸೇರಿದಂತೆ ಸುಮಾರು 50 ಜನ  ಕವಿಗಳು ಕೊರೊನಾ ಕುರಿತ ಸ್ವರಚಿತ ಕವನಗಳನ್ನು ವಾಚಿಸಿದರು. 

ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಶೀಧರ್ ಪಾಟೀಲ್, ಪಬ್ಲಿಕ್ ಟಿ ವಿ ಜ್ಯೋತಿಷಿ ಲಲಿತಾಸುತಂ , ಟಿ ವಿ 9 ಹಾಸ್ಯ ಕಲಾವಿದ ಪಿ ಜಗನ್ನಾಥ್ , ವಿ ವೀ ಲಿಂ ಏ ಪ ಕಾರ್ಯಾಧ್ಯಕ್ಷ ಇಂದೂಧರ್ ನಿಶಾನಿಮಠ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ದಾಕ್ಷಾಯಣಮ್ಮ ಮತ್ತಿತರರು ಆಗಮಿಸಿದ್ದರು. 

ರುಕ್ಮಾಬಾಯಿ ಅವರಿಂದ ಪ್ರಾರ್ಥನೆಯಾಯಿತು. ಹೆಚ್. ವಿ. ಪ್ರಭುಲಿಂಗಪ್ಪ ಸ್ವಾಗತಿಸಿದರು. 

ಪ್ರಾಸ್ತಾವಿಕವಾಗಿ ಶಿವಕು ಮಾರ್ ಶೆಟ್ಟರ್ ಮಾತನಾಡಿದರು. ಎನ್.ಜೆ. ಶಿವಕುಮಾರ್ ನಿರೂಪಿಸಿದರು. ಶ್ರೀಮತಿ ಎ.ಬಿ. ರುದ್ರಮ್ಮ ವಂದಿಸಿದರು.

error: Content is protected !!