ದಾವಣಗೆರೆ,ಡಿ.24- ಅಖಿಲ ಭಾರತ ವೀರ ಶೈವ ಮಹಾಸಭಾದ ಸ್ಥಳೀಯ ಮಹಿಳಾ ಘಟಕದ ವತಿಯಿಂದ ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಮಹಾಸಭಾದ ನಗರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ವಾಲಿ ಅವರ ಅಧ್ಯಕ್ಷತೆಯಲ್ಲಿ ಕಾರ್ತಿಕೊತ್ಸವ ಆಚರಿಸಲಾಯಿತು.
ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಸ್ವಾಗಿ ಶಾಂತಕುಮಾರ್, ಸಹ ಸಂಚಾಲಕ ಟಿಂಕರ್ ಮಂಜಣ್ಣ, ದೇವಸ್ಥಾನದ ಟ್ರಸ್ಟಿ ಬೇತೂರು ರಾಜೇಶ್, ಶಿವು ಬೆನ್ನೂರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಾಸಭಾ ಮಹಿಳಾ ಘಟಕದ ಪದಾಧಿಕಾರಿಗಳಾದ ರೂಪ ಶಿವಕುಮಾರ್, ಸುಮಾ ಮಲ್ಲಿಕಾರ್ಜುನ್, ಸುಶೀಲಮ್ಮ, ಮಂಜುಳ ಇಟಗಿ, ವಸಂತ, ಸುನಂದ, ಸರ್ವಮಂಗಳ, ವನಿತಾ, ಸುಜಾತ, ರೇಣುಕ, ಮಂಜುಳ, ಊಮಾ ವಾಲಿಶೆಟ್ಟರ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.