ದಾವಣಗೆರೆ, ಡಿ. 22 – ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಹೊಂಡದ ವೃತ್ತದಿಂದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಮುಖಾಂತರ ಹಗೇದಿಬ್ಬ ವೃತ್ತದವರೆಗೆ ಮತ್ತು ಎಸ್.ಕೆ.ಪಿ ಗಣೇಶ ದೇವಸ್ಥಾನದವರೆಗೆ ಅಳವಡಿಸಲಾಗಿರುವ ಅಲಂಕಾರಿಕ ಕೋನಿಕಲ್ ಎಲ್.ಇ.ಡಿ ದೀಪದ ಕಂಬಗಳ ಉದ್ಘಾಟನೆಯನ್ನು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಇಂದು ಸಂಜೆ ನೆರವೇರಿಸಿದ್ದಾರೆ.
ಬೀರೂರು – ಸಮ್ಮಸಗಿ (ಪಿ.ಬಿ) ರಸ್ತೆಯ ಉಳಿದ ಪ್ರದೇಶದ ಮಿಡಿಯಾದಲ್ಲಿ ಹಾಲಿ ಬೆಡ್ ಹಾಕಿರುವ ಸ್ಥಳದಲ್ಲಿ ಹೊಸದಾಗಿ ಅಲಂಕಾರಿಕ ಕಂಬಗಳನ್ನು ಹಾಗೂ ಎಲ್.ಇ.ಡಿ ಬೀದಿ ದೀಪ ಕಂಬಗಳನ್ನೂ ಉದ್ಘಾಟಿಸಲಾಗಿದೆ.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಏರ್ಪಾಡಾಗಿದ್ದ ಈ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ಜಿಲ್ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕ ಬಸವರಾಜ ನಾಯ್ಕ, ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ ಮತ್ತಿತರರು ಉಪಸ್ಥಿತರಿದ್ದರು.