211 ಸ್ಥಾನಗಳಿಗೆ ಅವಿರೋಧ ಆಯ್ಕೆ

ಜಿಲ್ಲೆಯಲ್ಲಿ ಹೆಚ್ಚಿದ ಗ್ರಾಮ ಪಂಚಾಯ್ತಿ ಚುನಾವಣಾ ಕಾವು

ದಾವಣಗೆರೆ ತಾ.80 ಹೊನ್ನಾಳಿ ತಾ.31 ಸ್ಥಾನಗಳಿಗೆ ಅವಿರೋಧ ಆಯ್ಕೆ

ದಾವಣಗೆರೆ, ಡಿ. 15 – ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ದಾವಣಗೆರೆ, ಹೊನ್ನಾಳಿ ಹಾಗೂ ಜಗಳೂರು ತಾಲ್ಲೂಕುಗಳ ಗ್ರಾಮ ಪಂಚಾಯ್ತಿಗಳಿಗೆ 211 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಾವಣಗೆರೆಯ ಎರಡು ಹಾಗೂ ಹೊನ್ನಾಳಿಯ ಒಂದು ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಉಳಿದಂತೆ ಮೂರು ತಾಲ್ಲೂಕುಗಳ 1087 ಸ್ಥಾನಗಳಿಗೆ ಚುನಾವಣೆ ನಿಗದಿಯಂತೆ ನಡೆಯಲಿದೆ.

ಜಗಳೂರಿನಲ್ಲಿ ಅತಿ ಹೆಚ್ಚಿನ 100 ಸದಸ್ಯರು ಅವಿ ರೋಧವಾಗಿ ಆಯ್ಕೆ ಯಾಗಿದ್ದಾರೆ. ದಾವಣಗೆರೆ ತಾಲ್ಲೂಕಿನ 80 ಹಾಗೂ ಹೊನ್ನಾಳಿಯ 31 ಸದಸ್ಯರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಅವಿರೋಧ ಸ್ಥಾನಗಳನ್ನು ಹೊರತು ಪಡಿಸಿ ದಾವಣಗೆರೆಯ 499, ಹೊನ್ನಾಳಿಯ 291 ಹಾಗೂ ಜಗ ಳೂರಿನ 297 ಸ್ಥಾನಗಳಿಗೆ ಈಗ ಚುನಾವಣೆ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 38 ಗ್ರಾಮ ಪಂಚಾಯತಿಗಳಿದ್ದು, 581 ಸದಸ್ಯ ಸ್ಥಾನಗಳಿವೆ. 80 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 499 ಸ್ಥಾನಗಳಿಗೆ ಚುನಾ ವಣೆ ನಡೆಯಲಿದೆ.  2 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಅನುಸೂಚಿತ ಜಾತಿ-413, ಅನುಸೂಚಿತ ಪಂಗಡ-179, ಹಿಂದುಳಿದ ವರ್ಗ (ಅ)-121, ಹಿಂದುಳಿದ ವರ್ಗ (ಬಿ)-21, , ಸಾಮಾನ್ಯ-663 ಅಭ್ಯರ್ಥಿಗಳು ಸೇರಿದಂತೆ ಒಟ್ಟು 1397 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 

ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 28 ಗ್ರಾಮ ಪಂಚಾಯತಿಗಳಿದ್ದು, 323 ಸದಸ್ಯ ಸ್ಥಾನಗಳಿವೆ.  31 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 291 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.  1 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ಅನುಸೂಚಿತ ಜಾತಿ-242, ಅನುಸೂಚಿತ ಪಂಗಡ-81, ಹಿಂದುಳಿದ ವರ್ಗ (ಅ)-77, ಹಿಂದುಳಿದ ವರ್ಗ (ಬಿ)-15, , ಸಾಮಾನ್ಯ-395 ಅಭ್ಯರ್ಥಿಗಳು ಸೇರಿದಂತೆ ಒಟ್ಟು 810 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 

ದಾವಣಗೆರೆ ತಾಲ್ಲೂಕಿನ ಕಂದಗಲ್ಲು ಗ್ರಾಮ ಪಂಚಾಯ್ತಿಯಲ್ಲಿ ಅತಿ ಹೆಚ್ಚಿನ 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಕೈದಾಳೆ ಗ್ರಾಮ ಪಂಚಾಯ್ತಿಯ 8, ಬೆಳವನೂರು ಹಾಗೂ ಮುದಹದಡಿಗಳ ತಲಾ 7, ಕುರ್ಕಿಯ 6, ಶ್ರೀರಾಮನಗರದ ಐದು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಗೋಪನಾಳಿನ 4, ಶ್ಯಾಗಲೆ ಹಾಗೂ  ನೇರ್ಲಿಗಿಯ ತಲಾ ಮೂರು, ಕಡ್ಲೆಬಾಳು ಹಾಗೂ ಕಂದನಕೋವಿಗಳ ತಲಾ 2 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.

ಹೆಬ್ಬಾಳು, ಹೊನ್ನೂರು, ಅತ್ತಿಗೆರೆ, ನರಗನಹಳ್ಳಿ, ಅಣಬೇರು, ಮಳಲ್ಕೆರೆ, ಮತ್ತಿ, ಅಣಜಿ ಹಾಗೂ ಹದಡಿಗಳ ತಲಾ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.

ಹೊನ್ನಾಳಿ ತಾಲ್ಲೂಕಿನ 31 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ತಾಲ್ಲೂಕಿನ ಉಳಿದ 291 ಸ್ಥಾನಗಳಿಗೆ ಈಗ ಚುನಾವಣೆ ನಡೆಯಬೇಕಿದೆ.

ಕುಳಗಟ್ಟೆ ಗ್ರಾಮ ಪಂಚಾಯ್ತಿಯ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಹೆಚ್. ಗೋಪಗೊಂಡನಹಳ್ಳಿಯ 5, ಬನ್ನಿಕೋಡಿನ 4 ಹಾಗೂ ಅರಬಗಟ್ಟೆಯ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.

ಸಾಸ್ವೆಹಳ್ಳಿಯ ಎರಡು ಸ್ಥಾನಗಳಿಗೆ ಅವರೋಧ ಆಯ್ಕೆಯಾಗಿದೆ. ಹತ್ತೂರು, ಹರಳಹಳ್ಳಿ, ಹಿರೇಗೋಣಿಗೆರೆ, ಮಾಸಡಿ, ಕುಂಬಳೂರು, ಮುಕ್ತೇನಹಳ್ಳಿ, ರಾಂಪುರ, ಹೊಸಹಳ್ಳಿ ಹಾಗೂ ಹುಣಸಘಟ್ಟಗಳ ತಲಾ ಒಂದು ಕ್ಷೇತ್ರಕ್ಕೆ ಅವಿರೋಧ ಆಯ್ಕೆ ಮಾಡಲಾಗಿದೆ.

error: Content is protected !!