ಕರ್ತವ್ಯಕ್ಕೆ ಹಾಜರಾದ ಕೆಎಸ್ಸಾರ್ಟಿಸಿ ನೌಕರರು

ದಾವಣಗೆರೆ, ಡಿ.14- ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಪ್ರಮುಖ ಬೇಡಿಕೆಯನ್ನು ಹೊರತುಪಡಿಸಿ ಉಳಿದ 9 ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಸಮ್ಮತಿಸಿದ ಕಾರಣ ನಗರದಲ್ಲಿ ಕೆಎಸ್‍ಆರ್ ಟಿಸಿ ನೌಕರರು ಮುಷ್ಕರ ಕೈ ಬಿಟ್ಟು ಯಥಾ ಪ್ರಕಾರ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದು, ಸರ್ಕಾರಿ ಬಸ್ ಗಳ ಸೇವೆ ಆರಂಭವಾಗಿದೆ. 

ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ 10 ಬೇಡಿಕೆಗಳನ್ನು ಮುಂದಿಟ್ಟು ಕಳೆದ 4 ದಿನಗಳಿಂದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮುಷ್ಕರ ಕೈಗೊಂಡು ಬಿಗಿಪಟ್ಟು ಹಿಡಿದಿದ್ದರು. 

ಸೋಮವಾರ ಮಧ್ಯಾಹ್ನದವರೆಗೂ ಚಾಲಕರು ಮತ್ತು ನಿರ್ವಾಹಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ನಂತರ ಮಧ್ಯಾಹ್ನದ ವೇಳೆಗೆ ಸರ್ಕಾರವು ಸಾರಿಗೆ ನೌಕರರ ಮುಖಂಡರೊಂದಿಗೆ ಚರ್ಚಿಸಿ, 6ನೇ ವೇತನ ಪರಿಷ್ಕರಣೆ ಸೇರಿದಂತೆ 9 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮುಷ್ಕರ ವನ್ನು ಸಾರಿಗೆ ನೌಕರರು ಹಿಂಪಡೆದಿದ್ದಾರೆ. 

ಬೆಳಿಗ್ಗೆಯಿಂದಲೇ ಬಸ್ ಸಂಚಾರ ಆರಂಭ ವಾಗಬಹುದು ಎಂಬ ನಿರೀಕ್ಷೆಯಲ್ಲಿ ಬಸ್ ನಿಲ್ದಾ ಣಕ್ಕೆ ಬಂದಿದ್ದ ಪ್ರಯಾಣಿ ಕರು ಮಧ್ಯಾಹ್ನ ದವರೆಗೂ ಪರದಾಡಿದರು. 

ಕೆಎಸ್‍ಆರ್ ಟಿಸಿ ನೌಕರರ ಮುಷ್ಕರ ಕೊನೆಗೊಳ್ಳಲಿದ್ದು, ಬಸ್ ಸಂಚಾರ ಆರಂಭವಾಗಲಿದೆ ಎಂಬ ಮಾಧ್ಯಮಗ ಳಲ್ಲಿ ಬಂದ ಸುದ್ದಿ ನೋಡಿ ಪರಸ್ಥಳಕ್ಕೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು, ಕೆಎಸ್‍ ಆರ್‌ಟಿಸಿ ಅಧಿಕಾರಿಗಳ ಬಳಿ ಬಸ್ ಸಂಚಾರ ಆರಂಭದ ಸಮಯವನ್ನು ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು. ಬಸ್ ಸಂಚಾರ ಆರಂಭಗೊ ಳ್ಳುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

error: Content is protected !!