ಪಂಚಾಯ್ತಿ ಸೆಣಸಾಟಕ್ಕೆ ಮುಹೂರ್ತ

ಪಂಚಾಯ್ತಿ ಸೆಣಸಾಟಕ್ಕೆ ಮುಹೂರ್ತ - Janathavaniಎರಡು ಹಂತದ ಚುನಾವಣೆಯಲ್ಲಿ 2,628 ಸದಸ್ಯರ ಆಯ್ಕೆ

ದಾವಣಗೆರೆ, ನ.30 – ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಡಿ.22ರ ಮಂಗಳವಾರ ದಾವಣಗೆರೆ, ಹೊನ್ನಾಳಿ ಹಾಗೂ ಜಗಳೂರು ತಾಲ್ಲೂಕುಗಳ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಎರಡನೇ ಹಂತದಲ್ಲಿ ಡಿ.27ರ ಭಾನುವಾರ ಹರಿಹರ, ಚನ್ನಗಿರಿ ಹಾಗೂ ನ್ಯಾಮತಿ ತಾಲ್ಲೂಕುಗಳ ಪಂಚಾಯ್ತಿಗಳಲ್ಲಿ ಚುನಾವಣೆ ನೆರವೇರಲಿದೆ. ಮೊದಲ ಹಂತದ ಚುನಾವಣೆಗೆ ಡಿ.7ರಿಂದ ನಾಮಪತ್ರ ಸಲ್ಲಿಕೆ ಹಾಗೂ ಎರಡನೇ ಹಂತಕ್ಕೆ ಡಿ.11ರಿಂದ ನಾಮಪತ್ರ ಸಲ್ಲಿಕೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಮೊದಲ ಹಂತದಲ್ಲಿ ಡಿ.14 ಹಾಗೂ ಎರಡನೇ ಹಂತದಲ್ಲಿ ಡಿ.19ರವರೆಗೆ ಅವಕಾಶ ಇದೆ. ಎರಡೂ ಹಂತಗಳ ಗ್ರಾಮ ಪಂಚಾಯ್ತಿ ಚುನಾವಣೆಯ ಮತಗಳ ಎಣಿಕೆ ಡಿ.30ರ ಬುಧವಾರ ನೆರವೇರಲಿದೆ.

ನ್ಯಾಮತಿ ತಾಲ್ಲೂಕಿನ ನ್ಯಾಮತಿ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸುವ ಕಾರಣ ಇಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುವುದಿಲ್ಲ. ದಾವಣಗೆರೆ ತಾಲ್ಲೂಕಿನ ಬೇತೂರು, ಕನಗೊಂಡನಹಳ್ಳಿ, ಕುಕ್ಕುವಾಡ ಮತ್ತು ಮಾಯಕೊಂಡ ಗ್ರಾಮ ಪಂಚಾಯ್ತಿಗಳ ಅವಧಿ ಪೂರ್ಣಗೊಳ್ಳದ ಕಾರಣ ಇಲ್ಲೂ ಸಹ ಚುನಾವಣೆ ನಡೆಯುವುದಿಲ್ಲ.

ಉಳಿದಂತೆ ಜಿಲ್ಲೆಯ ಆರು ತಾಲ್ಲೂಕುಗಳ ಒಟ್ಟು 191 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ.  ಈ ಚುನಾವಣೆಗಳಿಗಾಗಿ ಒಟ್ಟು 1,300 ಮತಗಟ್ಟೆಗಳನ್ನು ರೂಪಿಸಲಾಗುವುದು. 1,050 ಕ್ಷೇತ್ರಗಳಿರಲಿದ್ದು, ಇಲ್ಲಿ 2,628 ಸದಸ್ಯರು ಗೆಲುವಿಗಾಗಿ ಸೆಣಸಾಟ ನಡೆಸಲಿದ್ದಾರೆ. 

ಚನ್ನಗಿರಿಯಲ್ಲಿ ಅತಿ ಹೆಚ್ಚಿನ 61 ಗ್ರಾಮ ಪಂಚಾಯ್ತಿಗಳಿದ್ದರೆ, ನ್ಯಾಮತಿಯಲ್ಲಿ ಅತಿ ಕಡಿಮೆ 17 ಗ್ರಾಮ ಪಂಚಾಯ್ತಿಗಳಿವೆ. ಉಳಿದಂತೆ ದಾವಣಗೆರೆಯಲ್ಲಿ 38, ಹೊನ್ನಾಳಿಯಲ್ಲಿ 29, ಜಗಳೂರಿನಲ್ಲಿ 22 ಹಾಗೂ ಹರಿಹರದಲ್ಲಿ 24 ಗ್ರಾಮ ಪಂಚಾಯ್ತಿಗಳಿವೆ.

 8,37,727 ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ. ಜಿಲ್ಲೆಯಲ್ಲಿ ಪುರುಷ ಮತದಾರರ ಸಂಖ್ಯೆ 4,23,484 ಹಾಗೂ ಮಹಿಳಾ ಮತದಾರರ ಸಂಖ್ಯೆ 4,14,243 ಆಗಿದೆ. ಈ ಚುನಾವಣೆಗಾಗಿ 191 ಚುನಾವಣಾಧಿಕಾರಿಗಳು ಹಾಗೂ 196 ಸಹಾಯಕ ಚುನಾವಣಾಧಿಕಾರಿಗಳನ್ನು ನೇಿಮಿಸಲಾಗುವುದು.

ಆರು ತಾಲ್ಲೂಕುಗಳ ಗ್ರಾಮ ಪಂಚಾಯ್ತಿಗಳ 2,628 ಸ್ಥಾನಗಳ ಪೈಕಿ 1,359 ಸ್ಥಾನಗಳು ಮಹಿಳೆಯರಿಗೆ ಸಿಗಲಿವೆ.

ಅನುಸೂಚಿತ ಜಾತಿಯವರಿಗೆ 629 ಸ್ಥಾನಗಳನ್ನು ಮೀಸಲಿಡಲಾಗಿದ್ದು, ಈ ಮಹಿಳೆಯರಿಗೆ 363 ಸ್ಥಾನಗಳಿವೆ. ಅನುಸೂಚಿತ ಪಂಗಡಕ್ಕೆ 397 ಸ್ಥಾನಗಳಿದ್ದು, ಮಹಿಳೆಯರು 266 ಸ್ಥಾನಗಳನ್ನು ಪಡೆಯಲಿದ್ದಾರೆ. ಹಿಂದುಳಿದ §ಅ¬ ವರ್ಗಕ್ಕೆ 268 ಸ್ಥಾನಗಳಿದ್ದು, ಮಹಿಳೆಯರು 174 ಸ್ಥಾನಗಳನ್ನು ಪಡೆಯಲಿದ್ದಾರೆ. ಮತ್ತು ಹಿಂದುಳಿದ §ಬ¬ ವರ್ಗಕ್ಕೆ 49 ಸ್ಥಾನಗಳನ್ನು ಮೀಸಲಿಡಲಾಗಿದ್ದು, ಮಹಿಳೆಯರು 15 ಸ್ಥಾನಗಳನ್ನು ಪಡೆಯಲಿದ್ದಾರೆ. ಸಾಮಾನ್ಯ ವರ್ಗದಲ್ಲಿ 1,285 ಸ್ಥಾನಗಳಿದ್ದು, ಮಹಿಳೆಯರು 541 ಸ್ಥಾನಗಳನ್ನು ಪಡೆಯಲಿದ್ದಾರೆ.

error: Content is protected !!