ದಾವಣಗೆರೆ, ನ. 27- ಗ್ರಾಮ ಸ್ವರಾಜ್ಯದ ಬಗ್ಗೆ ಜಾಗೃತಿ ಮೂಡಿಸಲು ಮಾಜಿ ಶಾಸಕ ಹಾಗೂ ಜೆಡಿಯು ಮುಖಂಡ ಮಹಿಮಾ ಪಟೇಲ್ ಅವರ ಪಾದಯಾತ್ರೆಯ ಎರಡನೇ ಹಂತವಾಗಿ ಕಾರಿಗನೂರು ಗ್ರಾಮದಿಂದ ಕೂಡಲ ಸಂಗಮಕ್ಕೆ ಪ್ರಯಾಣ ಬೆಳೆಸಿದರು.
ಶುಕ್ರವಾರ ಕಾರಿಗನೂರಿನ ಜೆ.ಹೆಚ್. ಪಟೇಲ್ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಯಾತ್ರೆಯು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಪುಣ್ಯಸ್ಮರಣೆಯ ದಿನವಾದ ಡಿಸೆಂಬರ್ 12ರಂದು ಕೂಡಲಸಂಗಮ ತಲುಪಲಿದೆ.
ಒಟ್ಟು 2,000 ಕಿ.ಮೀ. ಪಾದಯಾತ್ರೆಯನ್ನು ಕೈಗೊಳ್ಳುತ್ತಿರುವ ಪಟೇಲ್, ಮೊದಲ ಹಂತದಲ್ಲಿ ಬೆಂಗಳೂರಿನಿಂದ ಕಾರಿಗನೂರಿಗೆ ಪಾದಯಾತ್ರೆ ಮೂಲಕ 350 ಕಿ.ಮೀ. ಕ್ರಮಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್, ಚನ್ನಗಿರಿ ಕೇದಾರ ಲಿಂಗ ಶಿವ ಶಾಂತವೀರ ಮಹಾಸ್ವಾಮೀಜಿ, ಅಣ್ಣಪ್ಪ ಕೆ.ಎಸ್. ಇತರರು ಉಪಸ್ಥಿತರಿದ್ದರು.