ಪಾಲಿಕೆ ಖರ್ಚಿಲ್ಲದೇ ನಗರದಾದ್ಯಂತ ಎಲ್‌ಇಡಿ ದೀಪಗಳ ಅಳವಡಿಕೆ

ಪಾಲಿಕೆ ಖರ್ಚಿಲ್ಲದೇ ನಗರದಾದ್ಯಂತ ಎಲ್‌ಇಡಿ ದೀಪಗಳ ಅಳವಡಿಕೆ - Janathavaniಖಾಸಗಿ ಸಹಭಾಗಿತ್ವದಲ್ಲಿ ಎಂಟು ತಿಂಗಳಲ್ಲಿ ಯೋಜನೆ ಜಾರಿ : ಮೇಯರ್ ಅಜಯ್

ದಾವಣಗೆರೆ, ನ. 25 – ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಪಾಲಿಕೆಯಿಂದ ಹಣ ವೆಚ್ಚ ಮಾಡದೇ ನಗರದೆಲ್ಲೆಡೆ ಎಲ್.ಇ.ಡಿ. ದೀಪಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ತಿಳಿಸಿದ್ದಾರೆ.

ಪಾಲಿಕೆ ವತಿಯಿಂದ ಗಾಂಧಿನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಆಯೋಜಿ ಸಲಾಗಿದ್ದ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಪ್ರಸಕ್ತ ಪಾಲಿಕೆ ಬೀದಿ ದೀಪಗಳ ವಿದ್ಯುತ್‌ ವೆಚ್ಚಕ್ಕಾಗಿ ತಿಂಗಳಿಗೆ 80 ಲಕ್ಷ ರೂ. ಪಾವತಿಸುತ್ತಿದೆ. ಎಲ್.ಇ.ಡಿ. ದೀಪಗಳನ್ನು ಅಳವಡಿಕೆ ಮಾಡಿದರೆ ವೆಚ್ಚ 30 ಲಕ್ಷ ರೂ.ಗಳಿಗೆ ಇಳಿಕೆಯಾಗಿ, ಪ್ರತಿ ತಿಂಗಳು 50 ಲಕ್ಷ ರೂ. ಉಳಿತಾಯ ವಾಗಲಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ, ಖಾಸಗಿಯವರಿಗೆ ಟೆಂಡರ್‌ನಲ್ಲಿ ಯಾವುದೇ ಹಣ ನೀಡದೇ ಎಲ್‌ಇಡಿ ಅಳವಡಿಕೆಯ ಕಾರ್ಯ ವಹಿಸಲಾಗುವುದು. ಎಲ್‌ಇಡಿ ಅಳ ವಡಿಕೆ ಮಾಡುವುದರಿಂದ ಉಳಿತಾಯ ವಾಗುವ ಹಣದಲ್ಲಿ 32 ಲಕ್ಷ ರೂ.ಗಳನ್ನು 84 ತಿಂಗಳ ಅವಧಿಗೆ ಖಾಸಗಿಯವರು ಪಡೆಯಲಿದ್ದಾರೆ ಎಂದು ಅಜಯ್‌ಕುಮಾರ್ ವಿವರಿಸಿದ್ದಾರೆ.

ಈ ಯೋಜನೆಯ ಅನ್ವಯ 45 ವಾರ್ಡ್‌ಗಳಲ್ಲಿರುವ 21 ಸಾವಿರ ಬೀದಿ ದೀಪಗಳನ್ನು ಮುಂದಿನ ಎಂಟು ತಿಂಗಳಲ್ಲಿ ಎಲ್‌ಇಡಿಗೆ ಪರಿವರ್ತನೆ ಮಾಡಲಾಗುವುದು ಎಂದವರು ಹೇಳಿದ್ದಾರೆ.

ಪಾಲಿಕೆ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ನಂತರ 543 ಟೆಂಡರ್‌ ಗಳನ್ನು ಕರೆಯಲಾಗಿತ್ತು. ಕೊರೊನಾ ದಿಂದಾಗಿ ಕಾಮಗಾರಿಗಳಿಗೆ ಹಿನ್ನಡೆಯಾ ಗಿದೆ. ಇದುವರೆಗೂ 62 ಕಾಮಗಾರಿಗಳು ಮುಗಿದ್ದು, 32 ಚಾಲನೆಯಲ್ಲಿವೆ. ಉಳಿದ 44 ಟೆಂಡರ್‌ಗಳ ಕಾಮಗಾ ರಿಗಳು 2-3 ತಿಂಗಳಲ್ಲೇ ಚಾಲನೆಗೊಳ್ಳ ಲಿವೆ ಎಂದವರು ತಿಳಿಸಿದರು.

ಒಂದು ಲಕ್ಷ ಸಸಿ ನೆಡುವು ಕಾರ್ಯಕ್ರಮದ ಅನ್ವಯ ಪ್ರತಿ ವಾರ್ಡ್‌ನಲ್ಲಿ ಪಕ್ಷಿಗಳಿಗೆ ಆಹಾರ ಉಣಿಸಲು ನೆರವಾಗುವ ತಲಾ 100 ಹಣ್ಣಿನ ಸಸಿಗಳನ್ನು ನೆಡಲಾಗುವುದು. ಮುಂದಿನ ಜೂನ್ ಒಳಗೆ ಎಲ್ಲಾ ಲಕ್ಷ ಸಸಿಗಳನ್ನು ವಾರ್ಡ್‌ಗಳಲ್ಲಿ ನೆಡುವ ಮೂಲಕ ಹಸಿರೀಕರಣ ಮಾಡಲಾಗುವುದು ಎಂದು ಅಜಯ್‌ಕುಮಾರ್‌ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

error: Content is protected !!