ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್
ದಾವಣಗೆರೆ, ನ.24- ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ನಗರದ ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್ ಅವರನ್ನು ಸರಸ್ವತಿ ನಗರದ ಶ್ರೀ ವಿಜಯ ವಿನಾಯಕ ಯುವಕ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ಎಂ.ಸುರೇಶ್, `ಸ್ವಂತಕ್ಕೆ ಸ್ವಲ್ಪ – ಸಮಾಜಕ್ಕೆ ಸರ್ವಸ್ವ’ ಎನ್ನುವ ತತ್ವದಲ್ಲಿ ನಂಬಿಕೆಯಿಟ್ಟು ಶಿಕ್ಷಣ ಕ್ಷೇತ್ರದ ಮೂಲಕ ಸಮಾಜ ಸೇವೆ ಮಾಡುವ ಮಹತ್ವಾಕಾಂಕ್ಷೆಯನ್ನು ತಾವು ಹೊಂದಿರುವುದಾಗಿ ಹೇಳಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಸದುಪಯೋಗ ಗೊಳಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುವುದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ವಿಜಯ ವಿನಾಯಕ ಯುವಕ ನಾಗರಿಕ ವೇದಿಕೆಯ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಪಠ್ಯ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ, ಕ್ರೀಡೆ, ಕಲೆ ಹೀಗೆ ಹತ್ತು ಹಲವು ವಿಭಾಗಗಳಲ್ಲಿ ವಿದ್ಯಾರ್ಥಿಗಳನ್ನು ತಮ್ಮ ಸೋಮೇಶ್ವರ ವಿದ್ಯಾ ಸಂಸ್ಥೆಯಲ್ಲಿ ತರಬೇತಿಗೊಳಿಸುವ ಮೂಲಕ ಕೆ.ಎಂ.ಸುರೇಶ್ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸತನ್ನು ತರಬೇಕೆನ್ನುವ ಕನಸುಗಳನ್ನು ಹೊಂದಿರುವ ಕನಸುಗಾರ ಸುರೇಶ್ ಅವರಲ್ಲಿರುವ ವಿಶೇಷವಾದ ಶಕ್ತಿಯನ್ನು ಗುರುತಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯವರು ತಮ್ಮ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷ ಸ್ಥಾನ ನೀಡಿರುವುದು ಶ್ಲ್ಯಾಘನೀಯ ಎಂದರು.
ಸಮಾರಂಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಕೆ.ಎಂ.ವೀರೇಶ್, ವಿಜಯ ವಿನಾಯಕ ಯುವಕ ನಾಗರಿಕ ವೇದಿಕೆಯ ಪದಾಧಿಕಾರಿಗಳಾದ ಕೆ.ರಾಘವೇಂದ್ರ ನಾಯರಿ, ಎಸ್.ಹೆಚ್. ಚಂದ್ರ ನಾಯ್ಕ್, ಕ್ಯಾಸ್ಯಾ ನಾಯಕ, ಶಾಂತಪ್ಪ ಪೂಜಾರಿ, ಪ್ರೊ. ಎಂ.ಬಿ.ರೇವಣಸಿದ್ದಪ್ಪ, ತಿಪ್ಪೇಸ್ವಾಮಿ ಪವಾಡಪ್ಳ, ಪ್ರೊ. ಗಂಗಾಧರಯ್ಯ ಹಿರೇಮಠ, ನಾಗರಾಜ ಮಾಸ್ತರ್, ಕಾಡಜ್ಜಿ ವೀರಪ್ಪ, ಬಿ.ಎಂ.ಗದಿಗೇಶ್, ಪ್ರಸಾದ ಬಂಗೇರ, ಶಾಮ್ ನಾಯ್ಕ್, ಹೆಚ್. ಪಾಲಾಕ್ಷಪ್ಪ, ಟಿ.ಬಿ.ರಮೇಶ್, ಬಿ.ಶಿವಪುತ್ರಪ್ಪ, ಹೇಮಾ ಪೂಜಾರಿ, ಕಮಲಾ ಸೋಮಶೇಖರ್, ನಾಗೇಶ್ವರಿ ನಾಯರಿ, ಮಂಜುಳಾ ವೆಂಕಟೇಶ್, ಲಾಲ್ ಸಿಂಗ್ ನಾಯ್ಕ್, ವಿ. ಸಿದ್ದೇಶ್, ಎಸ್.ಸೋಮಶೇಖರ್, ಸಚಿನ್, ನಾಗೇಂದ್ರಪ್ಪ ಮತ್ತಿತರರು ಹಾಜರಿದ್ದರು.