ದಾವಣಗೆರೆ, ನ.23- ಮಹಾ ನಗರ ಪಾಲಿಕೆ ಯಿಂದ ನಗರದಲ್ಲಿ ಹಂದಿಗಳನ್ನು ಹಿಡಿಯಲಾಗುತ್ತಿದೆ ಎಂದು ಸುಳ್ಳು ವದಂತಿ ಹಬ್ಬಿಸ ಲಾಗಿದ್ದು, ಪಾಲಿಕೆಯಿಂದ ಹಂದಿ ಗಳನ್ನು ಹಿಡಿಯಲು ಯಾವ ಅಧಿಕಾರಿ ಗಳು ಆದೇಶ ನೀಡಿಲ್ಲ. ಹಂದಿಗಳ ಮಾಲೀಕರು ಗಾಬರಿಯಾಗುವ ಅಗತ್ಯ ವಿಲ್ಲ ಎಂದು ಪಾಲಿಕೆ ಉಪ ಮೇಯರ್ ಶ್ರೀಮತಿ ಸೌಮ್ಯ ಎಸ್. ನರೇಂದ್ರಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಕೆಲವು ದಿನಗಳಿಂದ ಹಂದಿ ಸಾಕಾಣೆ ಮಾಲೀಕರು ಪಾಲಿಕೆಯಿಂದ ಹಂದಿಗಳ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಮ್ಮನ್ನು ಸಂಪರ್ಕಿಸಿದ್ದು, ಅಂತಹ ಯಾವುದೇ ಆದೇಶವನ್ನು ಪಾಲಿಕೆ ನೀಡಿಲ್ಲ. ಹಂದಿಗಳನ್ನು ಯಾರಾದರು ಹಿಡಿಯುವುದು ಕಂಡುಬಂದಲ್ಲಿ ತಕ್ಷಣವೇ ಪಾಲಿಕೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅವರು ಮನವಿ ಮಾಡಿದ್ದಾರೆ.
January 10, 2025