ಗಾಂಧೀಜಿ, ಅಂಬೇಡ್ಕರ್, ಬಾಬೂಜಿ, ಭಗತ್ ಸಿಂಗ್ ಪ್ರತಿಮೆಗಳಿಗೆ ನಮನ
ದಾವಣಗೆರೆ, ಆ.9- ದಾವಣಗೆರೆ ಬಿಜೆಪಿ ದಕ್ಷಿಣ ವಿಧಾನ ಸಭಾ ಕ್ಷೇತ್ರದ ವತಿಯಿಂದ ಬಲಿದಾನ ದಿವಸ ಹಾಗೂ ಕ್ವಿಟ್ ಇಂಡಿಯಾ ಚಳವಳಿಯ 77ನೇ ದಿನವನ್ನು ಇಂದು ನಗರದಲ್ಲಿ ಆಚರಿಸಲಾಯಿತು.
ಬ್ರಿಟಿಷರ ಗುಂಡಿಗೆ ಎದೆ ಕೊಟ್ಟು ಭಾರತಮಾತೆಗೆ ಪ್ರಾಣಾರ್ಪಣೆ ಮಾಡಿದ ದಾವಣಗೆರೆಯ ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಹದಡಿ ನಿಂಗಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಮಾಗನಹಳ್ಳಿ ಹನುಮಂತಪ್ಪ ಅವರುಗಳ ಬಲಿದಾನ ದಿವಸ ಹಾಗೂ ಕ್ವಿಟ್ ಇಂಡಿಯಾ ಚಳವಳಿಯ 77 ನೇ ವರ್ಷಾಚರಣೆ ಅಂಗವಾಗಿ ಮಹಾನಗರ ಪಾಲಿಕೆ ಆವರಣದಲ್ಲಿರುವ ಬಲಿದಾನಿಗಳ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು.
ನಗರ ಪಾಲಿಕೆ ಆವರಣದಲ್ಲಿನ ಮಹಾತ್ಮ ಗಾಂಧೀಜಿ, ಬಾಬು ಜಗಜೀವನ್ ರಾಂ,
ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ರೈಲ್ವೆ ನಿಲ್ದಾಣ ಪಕ್ಕದ ಕೆಳ ಸೇತುವೆ ಮುಂಭಾಗದಲ್ಲಿರುವ ಭಗತ್ ಸಿಂಗ್ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಗೋಪಾಲ್ ರಾವ್ ಮಾನೆ, ದೂಡಾ ಸದಸ್ಯರಾದ ದೇವಿರಮ್ಮ ಡಿ. ಎಲ್. ರಾಮಚಂದ್ರಪ್ಪ, ಶಾಂತಮ್ಮ, ಪ್ರಧಾನ ಕಾರ್ಯದರ್ಶಿ ನೀಲಗುಂದ ರಾಜು, ಟಿಂಕರ್ ಮಂಜಣ್ಣ, ಶ್ರೀಕಾಂತ್ ನಿಲಗುಂದ, ಗುರು ಸೋಗಿ, ರಾಕೇಶ್ ಭಜರಂಗಿ,
ಎಚ್.ಬಿ. ನವೀನ್ ಕುಮಾರ್, ಮಂಜುನಾಥ ಪೈ, ಪುಲೈ, ಶೋಭಾ ಕೊಟ್ರೇಶ್, ಸುಮಾ, ಮಲ್ಲಿಕಾರ್ಜುನ ಬಸಾಪುರ, ನಾಗರಾಜ್ ಅಂಗಡಿ, ಪಿ. ಅಭಿಷೇಕ್, ಆನಂದ್ ಹಿರೇಮಠ್, ಪ್ರವೀಣ್ ಜಾಧವ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.