ದಾವಣಗೆರೆ , ಆ. 7- ಜಿಲ್ಲೆಯ ಲ್ಲಿಂದು 110 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ. ಇಬ್ಬರು ಸಾವನ್ನಪ್ಪಿದ್ದು, 206 ಜನರು ಸೋಂಕು ಮುಕ್ತರಾಗಿ ಬಿಡುಗಡೆ ಯಾಗಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 3146 ಜನರಲ್ಲಿ ಸೋಂಕು ಕಾಣಿಸಿ ಕೊಂಡಿದ್ದು, 2048 ಜನ ಬಿಡುಗಡೆ ಯಾಗಿದ್ದಾರೆ. 1020 ಸಕ್ರಿಯ ಪ್ರಕರ ಣಗಳಿವೆ. ಒಟ್ಟಾರೆ 78 ಸಾವು ಸಂಭವಿಸಿವೆ.
ಹೊಂಡದ ವೃತ್ತದ ಬಳಿಯ 72ರ ವೃದ್ಧೆ ಹಾಗೂ ಭಾಷಾ ನಗರದ 40ರ ಪುರುಷ ಸಾವನ್ನಪ್ಪಿದ್ದಾರೆ.
ನಗರದ ಹೆಚ್.ಎಂ. ರಸ್ತೆ ಮಂಡಿಪೇಟೆಯ 59ರ ಪುರುಷ, ಎಸ್.ಎಸ್. ಬಡಾವಣೆಯ 57ರ ಪುರುಷ, ನಿಜಲಿಂಗಪ್ಪ ಬಡಾವಣೆಯ 46ರ ಪುರುಷ, ಆವರಗೆರೆಯ 38ರ ಪುರುಷ, ವಿದ್ಯಾನಗರದ 21ರ ಮಹಿಳೆ, ಕೆಟಿಜೆ ನಗರ 15ನೇ ಕ್ರಾಸ್ನ 28ರ ಪುರುಷ, ಎಸ್.ಒ.ಜಿ. ಕಾಲೋನಿಯ 57ರ ಪುರುಷ, ಆವರೆಗೆರಯ 72ರ ವೃದ್ಧ, ನಿಟ್ಟೂರಿನ 37ರ ಪುರುಷ. ನಿಜಲಿಂಗಪ್ಪ ಬಡಾವಣೆಯ 29ರ ಪುರುಷ, ಕೆಟಿಜೆ ನಗರದ 30ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್ನ 34ರ ಪುರುಷ, ಬೆಳಲಗೆರೆಯ 33ರ ಪುರುಷ, ನಿಟುವಳ್ಳಿ ಶ್ರೀರಾಮ ನಗರದ 30ರ ಮಹಿಳೆ, ಮಹರಾಜ ಪೇಟೆಯ ಹೆಚ್.ಸಿ. ಗಲ್ಲಿಯ 58ರ ಪರುಷ, ಪಿ.ಜೆ. ಬಡಾವಣೆ 3ನೇ ಕ್ರಾಸ್ನ 45ರ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್ 6ನೇ ಮೇನ್ 60ರ ಪುರುಷ.
ವಿನಾಯಕ ಬಡಾವಣೆಯ 14ರ ಬಾಲಕ, 40ರ ಮಹಿಳೆ, ಎಂ.ಸಿಸಿ. ಬಿ ಬ್ಲಾಕ್ 46ರ ಪುರುಷ, ಲೇಬರ್ ಕಾಲೋನಿಯ 68ರ ಪುರುಷ, ಬನಶಂಕರಿ ಬಡಾವಣೆಯ 42ರ ಪುರುಷ, ನಿಟುವಳ್ಳಿಯ 53ರ ಪುರುಷ, 49ರ ಪುರುಷ, ಬಾಡಾದ 32ರ ಮಹಿಳೆ, 38ರ ಪುರುಷ, 11ರ ಬಾಲಕ, ಮಹರಾಜ ಪೇಟೆ ವಿಠ್ಠಲ ಮಂದಿರದ ಬಳಿಯ 32ರ ಮಹಿಳೆ, ಎಸ್.ಪಿ.ಎಸ್. ನಗರದ 19ರ ಬಾಲಕಿ, ನಿಟುವಳ್ಳಿಯ 45ರ ಪುರುಷ, ರಟ್ಟಿಹಳ್ಳಿಯ 48ರ ಪುರುಷ.
ಜಾಲಿನಗರದ 70ರ ಪುರುಷ, ಪಿ.ಜೆ. ಬಡಾವಣೆಯ 70ರ ಮಹಿಳೆ, ಕುಂಬಾರ ಪೇಟೆಯ 65ರ ಮಹಿಳೆ, ತರಳಬಾಳು ಬಡಾವಣೆಯ 38ರ ಪುರುಷ, ವಿದ್ಯಾನಗರದ 1ನೇ ಕ್ರಾಸ್ನ 72ರ ವೃದ್ಧ, 66ರ ಮಹಿಳೆ, ಭಗತ್ ಸಿಂಗ್ ನಗರದ 3ನೇ ಕ್ರಾಸ್ನ 65ರ ಮಹಿಳೆ ಮೆಹಬೂಬ್ ನಗರದ 21ರ ಯುವತಿ.
ಶಿರಮಗೊಂಡನಹಳ್ಳಿಯ 58ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್ 4ನೇ ಕ್ರಾಸ್ನ 56ರ ಪುರುಷ, ಹಳೇ ಜಾಲಿ ನಗರದ 23ರ ಮಹಿಳೆ, ಆರ್.ಎಂ.ಸಿ. ರಸ್ತೆ 4ನೇ ಕ್ರಾಸ್ ಹೆಚ್.ಕೆ.ಆರ್. ನಗರದ 25ರ ಮಹಿಳೆ, ಹಳೇ ಕುಂದುವಾಡದ 41ರ ಪುರುಷ, ವಿದ್ಯಾನಗರದ 51ರ ಪುರುಷ, ಪಿಜೆ ಬಡಾವಣೆ 8ನೇ ಮೇನ್, 49ರ ಮಹಿಳೆ, ಮಾಯಕೊಂಡದ 70ರ ವೃದ್ಧ, ಕೆಟಿಜೆ ನಗರದ 8ನೇ ಕ್ರಾಸ್ನ 66ರ ಪುರುಷ. ತುರ್ಚಘಟ್ಟದ 68ರ ಪುರುಷ. ಎಂಸಿ.ಸಿ. ಎ ಬ್ಲಾಕ್ನ 38ರ ಪುರುಷ, ಎಸ್.ಕೆ.ಪಿ. ರಸ್ತೆ ಅಣಪುಲಕೆರೆಯ 45ರ ಪುರುಷ, ಭಗತ್ ಸಿಂಗ್ ನಗರದ 12ನೇ ಕ್ರಾಸ್ನ 64ರ ಪುರುಷ, ನಿಟುವಳ್ಳಿಯ 44ರ ಪುರುಷ, ಎಸ್.ಎಸ್.ಎಂ. ನಗರದ 26ರ ಮಹಿಳೆ. ವಿಜಯ ನಗರ ಬಡಾವಣೆಯ 24ರ ಮಹಿಳೆ, ಡಿಸಿಎಂ ಟೌನ್ಶಿಪ್ನ 52ರ ಪುರುಷ. ಬೆಳಗೆರೆಯ 65ರ ಪುರುಷ, ಚಿಕ್ಕನಹಳ್ಳಿಯ 48ರ ಮಹಿಳೆ, ಬೇತೂರು ರಸ್ತೆಯ 64ರ ಮಹಿಳೆ, ಅಂಬಿಕಾ ನಗರದ 50ರ ಮಹಿಳೆ, ಯಲ್ಲಮ್ಮ ನಗರದ 40ರ ಪುರುಷ.
ಹೊನ್ನಾಳಿ ತಾಲ್ಲೂಕು ಕುಂಬಳೂರಿನ 29ರ ಮಹಿಳೆ, 54ರ ಮಹಿಳೆ, 55ರ ಮಹಿಳೆ, 65ರ ಪುರುಷ, 65ರ ಮ ಹಿಳೆ, 70ರ ಮಹಿಳೆ, 60 ಹಾಗೂ 70ರ ಪುರುಷರು, 22ರ ಯುವತಿ, 75ರ ವೃದ್ಧ, ಹೊನ್ನಾಳಿ ಪಟ್ಟಣದ 45ರ ಪುರುಷ, 54ರ ಪುರುಷ, 34ರ ಪುರುಷ, ನ್ಯಾಮತಿ ಶಿವಾನಂದಪ್ಪ ಬಡಾವಣೆಯ 64ರ ಮ ಹಿಳೆ, 60ರ ಮಹಿಳೆ, 58ರ ಪುರುಷ, 2 ವರ್ಷದ ಬಾಲಕ, 22ರ ಪುರುಷ. ನೆಲಹೊನ್ನೆ ತಾಂಡಾದ 38ರ ಪುರುಷ, 43ರ ಮಹಿಳೆ, ಸುರಹೊನ್ನೆಯ 29ರ ಮಹಿಳೆ, ಆರ್ನುಡಿಯ 55ರ ಪುರುಷ, 50ರ ಮಹಿಳೆ, 47ರ ಮಹಿಳೆ.
ಜಗಳೂರು ತಾಲ್ಲೂಕು ಬಿಳಿಚೋಡಿನ 52ರ ಪುರುಷ. ಚನ್ನಗಿರಿ ತಾ.ಕಾಶಿಪುರದ 55ರ ಪುರುಷ, ನೀತಿಗೆರೆಯ 59ರ ಪುರುಷ, ರಾಣೇಬೆನ್ನೂರಿನ 71ರ ಪುರುಷ ಇವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಸೋಂಕು ಮುಕ್ತರಾಗಿ ಜಿಲ್ಲೆಯಲ್ಲಿ 206 ಜನ ಬಿಡುಗಡೆಯಾಗಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ 113, ಹರಿಹರ 17, ಜಗಳೂರು 6, ಚನ್ನಗಿರಿ 26, ಹೊನ್ನಾಳಿ 43 ಹಾಗೂ ಹೊರ ಜಿಲ್ಲೆಯ ಒಬ್ಬರು ಬಿಡುಗಡೆಯಾಗಿದ್ದಾರೆ.
ಹರಿಹರದಲ್ಲಿ 8 ವ್ಯಕ್ತಿಗಳಿಗೆ ಕೊರೊನಾ ಸೋಂಕು : ನಗರದಲ್ಲಿ ಇಂದು 8 ವ್ಯಕ್ತಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದರು.
ನಗರದಲ್ಲಿ 350, ಗ್ರಾಮೀಣ ಪ್ರದೇಶದ 138 ವ್ಯಕ್ತಿಗ ಳಿಗೆ ಕೊರೊನಾ ಸೋಂಕು ತಗುಲಿದ್ದು, ಅದರಲ್ಲಿ 329 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆ ಗಳಿಗೆ ತೆರಳಿದ್ದಾರೆ. ಹೋಂ ಐಸೋಲೇಷನ್ ನಲ್ಲಿ 94, ದಾವಣಗೆರೆ ಸಿ.ಜೆ. ಆಸ್ಪತ್ರೆಯಲ್ಲಿ 118, ಕೊವಿಡ್ ಕೇರ್ ಸೆಂಟರ್ ನಲ್ಲಿ 162, ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ 71 ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 169 ವ್ಯಕ್ತಿಗಳಿಗೆ ಸೇರಿದಂತೆ ಇಲ್ಲಿಯವರೆಗೆ 7646 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಕಂಟೋನ್ಮೆಂಟ್ ಝೋನ್ ಗಳು187 ಇದ್ದು ಅದರಲ್ಲಿ 39 ಅವಧಿ ಮುಗಿದು 149 ಕಂಟೋನ್ಮೆಂಟ್ ಝೋನ್ ಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ನಗರದ ಶಿವಮೊಗ್ಗ ರಸ್ತೆಯ 66 ವರ್ಷದ ಪುರುಷ ವ್ಯಕ್ತಿಗೆ, ಗ್ರಾಸಿಂ ಸ್ಟಾಪ್ ಕಾಲೋನಿ 33 ವರ್ಷದ ಪುರುಷ ವ್ಯಕ್ತಿಗೆ, ತಹಶೀಲ್ದಾರ್ ಕಚೇರಿಯ ಸರ್ವೇ ಇಲಾಖೆ 32 ವರ್ಷದ ಮಹಿಳೆ, ಮರಾಠ ಗಲ್ಲಿ 37 ವರ್ಷದ ಪುರುಷ, ಹರ್ಲಾಪುರ ಬಡಾವಣೆ 65 ವರ್ಷದ ಮಹಿಳೆ, ಅಂಬಾ ನಿಲಯದ 71 ವರ್ಷದ ಪುರುಷ, 65 ವರ್ಷದ ಮಹಿಳೆ, ಇಂದ್ರಾನಗರ ಮಲೆಬೆನ್ನೂರು 45 ವರ್ಷದ ಪುರುಷನಿಗೆ ಕೊರೊನಾ ಸೋಂಕು ಹರಡಿಕೊಂಡಿವೆ ಎಂದು ಹೇಳಿದರು.
ಕೊರೊನಾ ಹರಡಿಕೊಂಡಿರುವ ಸ್ಥಳಕ್ಕೆ ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮೀ, ಸಿಪಿಐ ಎಸ್. ಶಿವಪ್ರಸಾದ್, ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಪಿಎಸ್ಐ ಎಸ್. ಶೈಲಾಶ್ರೀ, ನಗರಸಭೆ ಎಇಇ ಬಿರಾದಾರ ಇತರರು ಭೇಟಿ ನೀಡಿದ್ದರು.