ಶಾಸಕ ಭೀಮಾನಾಯ್ಕ್ ಅನರ್ಹತೆಗೆ ಆಗ್ರಹ

ಕೂಡ್ಲಿಗಿಯಲ್ಲಿ ಬಿಜೆಪಿ ಪ್ರತಿಭಟನೆ

ಕೂಡ್ಲಿಗಿ, ನ. 9- ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣಾ ಸಂದರ್ಭದಲ್ಲಿ ಅಲ್ಲಿನ ಶಾಸಕ ಭೀಮಾನಾಯ್ಕ್ ಬಿಜೆಪಿ ಮುಖಂಡರ ವಿರುದ್ಧ ದುರ್ವರ್ತನೆಯಿಂದ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಕೂಡ್ಲಿಗಿ ಮಂಡಲ ಬಿಜೆಪಿ ವತಿಯಿಂದ ಸೋಮ ವಾರ ಪ್ರತಿಭಟನೆ ನಡೆಸಿ, ಭೀಮಾನಾಯ್ಕ್‌ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಪಟ್ಟಣದ ಮಹಾತ್ಮ  ಗಾಂಧೀಜಿ ಪವಿತ್ರ ಚಿತಾಭಸ್ಮ ಸ್ಮಾರಕದಿಂದ ತಾಲ್ಲೂಕು ಕಛೇ ರಿವರೆಗೆ ಪ್ರತಿಭಟನೆ ನಡೆಸಿ, ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ಕುರಿತು ಬಿಜೆಪಿ ರಾಜ್ಯ ಸಮಿತಿ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಶಾಸಕ ಭೀಮಾ ನಾಯ್ಕ್  ಅವರ ವರ್ತನೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನೀತಿಗೆ ವಿರೋಧವಾಗಿದೆ ಎಂದು ಕಿಡಿ ಕಾರಿದರು. 

ಕೂಡ್ಲಿಗಿ ಮಂಡಲ ಅಧ್ಯಕ್ಷ ಚನ್ನಪ್ಪ, ಬಿಜೆಪಿ ಜಿಲ್ಲಾ ಕಮಿಟಿಯ ಸೂರ್ಯ ಪಾಪಣ್ಣ, ಬಂಗಾರು ಹನುಮಂತು ಹಾಗೂ ಇತರರು ಮಾತನಾಡಿದರು.

ಜಿ.ಪಂ. ಸದಸ್ಯ ತರಕಾರಿ ರೇವಣ್ಣ, ತಾ.ಪಂ. ಅಧ್ಯಕ್ಷೆ ನಾಗರತ್ನ ಲಿಂಗಪ್ಪ, ನಿಕಟಪೂರ್ವ ಮಂಡಲ ಅಧ್ಯಕ್ಷ ಕೆ.ಹೆಚ್. ವೀರನಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯ ಹುಡೇದ ಪಾಪಣ್ಣ, ಬಿಜೆಪಿ ಮುಖಂಡ ಟಿ.ಜಿ. ಮಲ್ಲಿಕಾರ್ಜುನಗೌಡ, ಹೊಸಹಳ್ಳಿ ಭೀಮಣ್ಣ, ಗುಂಡುಮುಣುಗು ಪ್ರಕಾಶ, ಕೂಡ್ಲಿಗಿಯ ಸುನಿಲ್ ಗೌಡ, ನಾರಾಯಣಿ, ಜಯಮ್ಮರ ರಾಘು, ಗಣೇಶ, ಗುರಿಕಾರ ರಾಘು, ನಾಗಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!