ದಾವಣಗೆರೆ, ಆ. 2 – ಜಿಲ್ಲೆಯಲ್ಲಿ ಭಾನುವಾರ 178 ಜನರಲ್ಲಿ ಕೊರೊನಾ ಸೋಂಕು ಕಾಣಿಸಿ ಕೊಂಡಿದ್ದು, ಇದೇ ದಿನ 89 ಜನ ಗುಣಮುಖರಾಗಿದ್ದಾರೆ. ಮೂವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 850ಕ್ಕೆ ಏರಿಕೆಯಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 2,384 ಜನರಲ್ಲಿ ಕೊರೊನಾ ಪತ್ತೆಯಾಗಿದ್ದು ಇವರಲ್ಲಿ 1,479 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. 55 ಜನರು ಸಾವನ್ನಪ್ಪಿದ್ದಾರೆ.
ಹರಿಹರದ 45 ವರ್ಷದ ಮಹಿಳೆ ಹಾಗೂ ದಾವಣಗೆರೆಯ ವಿನೋಬನಗರದ 70ರ ವೃದ್ಧೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಜಗಳೂರು ತಾಲ್ಲೂಕು ಮುಷ್ಟೂರಿನ 74 ವರ್ಷದ ವೃದ್ಧರೊಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದು, ಇವರು ರಕ್ತದೊತ್ತಡ, ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ ಹಾಗೂ ಹೃದಯ ರೋಗದಿಂದ ಬಳಲುತ್ತಿದ್ದರು.
ಭಾನುವಾರ ಪತ್ತೆಯಾದ ಪ್ರಕರಣಗಳಲ್ಲಿ ದಾವಣಗೆರೆ ತಾಲ್ಲೂಕಿನ 83 ಸೋಂಕಿತರು ಸೇರಿದ್ದಾರೆ. ಹರಿಹರದಲ್ಲಿ 24, ಜಗಳೂರಿನ ಒಬ್ಬರು, ಚನ್ನಗಿರಿಯಲ್ಲಿ 28, ಹೊನ್ನಾಳಿಯಲ್ಲಿ 38 ಹಾಗೂ ಹೊರ ಜಿಲ್ಲೆಯ ನಾಲ್ವರು ಸೋಂಕಿತರು ಕಂಡು ಬಂದಿದ್ದಾರೆ.
ದಾವಣಗೆರೆ ತಾಲ್ಲೂಕಿನ 60 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಹರಿಹರದ 14, ಜಗಳೂರಿನ 7, ಚನ್ನಗಿರಿಯ 3, ಹೊನ್ನಾಳಿಯ 3 ಹಾಗೂ ಹೊರ ಜಿಲ್ಲೆಯ ಇಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ.
ದಾವಣಗೆರೆ ನಗರದ ಶಿವಕುಮಾರಸ್ವಾಮಿ ಬಡಾವಣೆಯ 50ರ ಪುರುಷ, ನಿಟುವಳ್ಳಿಯ 42ರ ಪುರುಷ, ಆಂಜನೇಯ ಬಡಾವಣೆಯ 56ರ ಪುರುಷ, ವಿನೋಬನಗರದ 60ರ ಪುರುಷ, ಎ.ಕೆ. ಕಾಲೊನಿಯ 55ರ ಮಹಿಳೆ, ಉಪ್ಪಾರ ಬೀದಿಯ 66ರ ಪುರುಷ, ರಂಗನಾಥ ಬಡಾವಣೆಯ 45ರ ಮಹಿಳೆ, ವಿನೋಬನಗರದ 52ರ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ.
ರಂಗನಾಥ ಬಡಾವಣೆಯ 27, 31, 36 ಹಾಗೂ 60ರ ಪುರುಷರು, 31ರ ಮಹಿಳೆ, 2ರ ಬಾಲಕಿ, ರಾಮನಗರದ 26ರ ಮಹಿಳೆ, ಸುರೇಶ್ ನಗರದ 34ರ ಮಹಿಳೆ, ಡಿಸಿಎಂ ಬಡಾವಣೆಯ 22ರ ಮಹಿಳೆ, ಎಸ್.ಒ.ಜಿ. ಕಾಲೊನಿಯ 26ರ ಮಹಿಳೆ, ಶಾಂತಿನಗರದ 33ರ ಪುರುಷ, ನಿಟುವಳ್ಳಿಯ 71ರ ಪುರುಷ, ದೇವರಾಜ ಅರಸ್ ಬಡಾವಣೆಯ 63ರ ಪುರುಷ, ಶ್ರೀರಾಮ ಬಡಾವಣೆಯ 40ರ ಮಹಿಳೆ, ಬನಶಂಕರಿ ಬಡಾವಣೆಯ 60ರ ಪುರುಷ ಹಾಗೂ 50ರ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಶಾಂತಿನಗರದ 27ರ ಪುರುಷ, ಎಸ್.ಎಂ.ಕೆ. ನಗರದ 55ರ ಮಹಿಳ, ಜೆ.ಹೆಚ್. ಪಟೇಲ್ ಬಡಾವಣೆಯ 79ರ ವೃದ್ಧ, ಎಸ್.ಪಿ.ಎಸ್. ನಗರದ 48ರ ಪುರುಷ, ಕೆ.ಟಿ.ಜೆ. ನಗರದ 40ರ ಪುರುಷ, ನಿಟುವಳ್ಳಿಯ 54ರ ಪುರುಷ, ಭಾರತ್ ಕಾಲೋನಿಯ 31ರ ಮಹಿಳೆ, ಹೊಂಡದ ಸರ್ಕಲ್ನ 52ರ ಪುರುಷ, ವಿವೇಕಾನಂದ ಬಡಾವಣೆಯ 49ರ ಪುರುಷ, ನಿಟುವಳ್ಳಿಯ 57ರ ಮಹಿಳೆ, ಕೆ.ಟಿ.ಜೆ. ನಗರದ 65ರ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.
ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯಾದ 26ರ ಮಹಿಳೆ, ಎಂಸಿಸಿ ಬಿ ಬ್ಲಾಕ್ನ 48ರ ಪುರುಷ ಕೆ.ಟಿ.ಜೆ. ನಗರದ 66ರ ಪುರುಷ, ಸರಸ್ವತಿ ನಗರದ 39ರ ಪುರುಷ, ವಿನೋಬನಗರದ 39ರ ಮಹಿಳೆ, ಬಂಬೂ ಬಜಾರ್ನ 75ರ ಮಹಿಳೆ, ಎಸ್.ಎಂ. ಕೃಷ್ಣ ನಗರದ 55ರ ಪುರುಷ, ಹೆಚ್.ಕೆ.ಆರ್. ಸರ್ಕಲ್ನ 68ರ ಪುರುಷ, ಪೊಲೀಸ್ ಕ್ವಾರ್ಟರ್ಸ್ನ 9ರ ಬಾಲಕ, ಮೋತಿ ದೊಡ್ಡಪ್ಪ ಲೇಔಟ್ನ 25ರ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಎಸ್.ಪಿ.ಎಸ್. ನಗರದ 26ರ ಪುರುಷ, ಎಸ್ಎಸ್. ಬಡಾವಣೆಯ 40ರ ಪುರುಷ, ಎಲ್ಲಮ್ಮನಗರದ 42ರ ಮಹಿಳೆ, ವಿದ್ಯಾನಗರದ 38ರ ಹಾಗೂ 65ರ ಪುರುಷರು, ಭಗತ್ ಸಿಂಗ್ ನಗರದ 71ರ ವೃದ್ಧ, ಶಾಂತಿನಗರದ 34ರ ಪುರುಷ, ವಿನೋಬನಗರದ 38ರ ಮಹಿಳೆ, ಅಮರಪ್ಪನ ತೋಟದ 31ರ ಪುರುಷ, ತರಳಬಾಳು ಬಡಾವಣೆಯ 42ರ ಪುರುಷ, ಭಾರತ್ ಕಾಲೋನಿಯ 42ರ ಪುರುಷ, ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ 34, 43, 46 ಹಾಗೂ 75ರ ಪುರುಷರಲ್ಲಿ ಕೊರೊನಾ ಕಂಡು ಬಂದಿದೆ.
ದಾವಣಗೆರೆ ತಾಲ್ಲೂಕಿನ ಕೋಲ್ಕುಂಟೆಯ 27ರ ಮಹಿಳೆ ಹಾಗೂ 15ರ ಯುವತಿ, ನರಗನಹಳ್ಳಿಯ 23ರ ಪುರುಷ, ಗಂಗನಕಟ್ಟೆಯ 38 ಹಾಗೂ 62ರ ಪುರುಷರು ಹಾಗೂ 4ರ ಬಾಲಕಿ, ಕಡ್ಲೇಬಾಳಿನ 55ರ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಹದಡಿಯ 80ರ ವೃದ್ಧ, ಬಾತಿಯ 54ರ ಮಹಿಳೆ, ಕಂದಗಲ್ನ 28ರ ಮಹಿಳೆ, 56ರ ಮಹಿಳೆ, ಅಗಸನಕಟ್ಟೆಯ 18ರ ಯುವತಿ, ಮೆಳ್ಳೇಕಟ್ಟೆಯ 50ರ ಪುರುಷ, ಆನೆಕೊಂಡದ 6ರ ಬಾಲಕಿ, 29 ಹಾಗೂ 56ರ ಪುರುಷರು, ಕಾಡಜ್ಜಿಯ 40ರ ಪುರುಷ, ಗಂಗನಕಟ್ಟೆಯ 20ರ ಮಹಿಳೆ, ಹಳೇಬೇತೂರಿನ 48ರ ಪುರುಷ ಹಾಗೂ 44ರ ಮಹಿಳೆ, ಮಾಯಕೊಂಡದ 72ರ ವೃದ್ಧರಲ್ಲಿ ಸೋಂಕು ಕಂಡು ಬಂದಿದೆ.
ಹರಿಹರದ 87ರ ವೃದ್ಧೆ, 61 ಹಾಗೂ 62ರ ಪುರುಷರು, 68ರ ಮಹಿಳೆ, ತರಕಾರಿ ಮಾರುಕಟ್ಟೆಯ 47ರ ಮಹಿಳೆ, ಕುರುಬರ ಬೀದಿಯ 50 ಹಾಗೂ 52ರ ಮಹಿಳೆಯರು ಮತ್ತು 65ರ ಪುರುಷ, ಇಂದಿರಾ ನಗರದ 38ರ ಪುರುಷ, ವಿದ್ಯಾನಗರದ 29, 58, 68 ಹಾಗೂ 67ರ ಪುರುಷರು, ಅಮರಾವತಿ ಕಾಲೋನಿಯ 43ರ ಪುರುಷ, ದೊಡ್ಡಿಬೀದಿಯ 46ರ ಮಹಿಳೆ ಹಾಗೂ ಹರಿಹರ ತಾಲ್ಲೂಕಿನ ಹಳ್ಳದಕೇರಿಯ 23ರ ಮಹಿಳೆ, ಗುತ್ತೂರಿನ 45ರ ಪುರುಷ, ಮಲೇಬೆನ್ನೂರಿನ 38ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.
ಚನ್ನಗಿರಿಯ 26, 54 ಹಾಗೂ 27ರ ಪುರುಷರು, ತುಮ್ಕೋಸ್ನ 29ರ ಪುರುಷ, ಕಣಸಾಲು ಬಡಾವಣೆಯ 60ರ ಮಹಿಳೆ, ವಿ.ಆರ್ ಬಡಾವಣೆಯ 29ರ ಪುರುಷ ಪೇಟೆ ಬೀದಿಯ 52ರ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.
89 ಗುಣಮುಖ, ಮೂವರ ಸಾವು
ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರಿನ 25, 39, 63 ಹಾಗೂ 36ರ ಮಹಿಳೆಯರು, 75ರ ವೃದ್ಧೆ ಹಾಗೂ 32,44ರ ಪುರುಷ, 75ರ ವೃದ್ಧ, 16ರ ಯುವತಿ, ನವಿಲೇಹಾಳಿನ 42, 47, 65 ಹಾಗೂ 62ರ ಮಹಿಳೆಯರು ಹಾಗೂ 49, 22ರ ಪುರುಷರು, 13ರ ಬಾಲಕಿ, ಹೊನ್ನೇಬಾಗಿಯ 49ರ ಮಹಿಳೆ ಹಾಗೂ 56ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.
ಹೊನ್ನಾಳಿಯ ಪೊಲೀಸ್ ಕ್ವಾರ್ಟರ್ಸ್ನ 30ರ ಪುರುಷ ಮತ್ತು ಹೊನ್ನಾಳಿ ತಾಲ್ಲೂಕಿನ ಕುಂದೂರಿನ 36ರ ಪುರುಷ ಹಾಗೂ 26 ಮತ್ತು 34ರ ಮಹಿಳೆ, ಕೂಲಂಬಿಯ 25ರ ಮಹಿಳೆ, ಸುರಹೊನ್ನೆಯ 26ರ ಪುರುಷ, ಕೆರೆಮಲ್ಲಾಪುರದ 48ರ ಪುರುಷ, ಸವಳಂಬಗದ 27ರ ಪುರುಷ, ಹಳೆ ಹರ್ಲಾಪುರದ 68ರ ಪುರುಷ, ಬಿದರಹಳ್ಳಿಯ 18ರ ಯುವತಿ ಹಾಗೂ 39ರ ಪುರುಷ, ನ್ಯಾಮತಿಯ 21ರ ಮಹಿಳೆ, ಸಾಲಕಟ್ಟೆಯ 31ರ ಮಹಿಳೆ ಹಾಗೂ 54ರ ಪುರುಷ ಹಾಗೂ 2 ಮತ್ತು 3ರ ಬಾಲಕಿಯರಲ್ಲಿ ಸೋಂಕು ಕಂಡುಬಂದಿದೆ.
ಸಾಲಕಟ್ಟೆಯ 19ರ ಪುರುಷ ಹಾಗೂ 26 ಮತ್ತು 44ರ ಮಹಿಳೆ, ಅರಕೆರೆಯ 45ರ ಮಹಿಳೆ, ಸಾಸಿವೆಹಳ್ಳಿಯ 55ರ ಮಹಿಳೆ, ಹಿರೇಕಲ್ಮಠದ 35ರ ಪುರುಷ, ಹೊಸ ಭರಮಪುರದ 65ರ ಮಹಿಳೆ, ನ್ಯಾಮತಿಯ 38ರ ಪುರುಷ, ಸಾಸಿವೆಹಳ್ಳಿಯ 11ರ ಬಾಲಕಿ, ಜೀನಹಳ್ಳಿಯ 37ರ ಪುರುಷ ಸುರಹೊನ್ನೆಯ 75ರ ವೃದ್ಧೆ, 35, 36, 42, 45, 48 ಹಾಗೂ 55ರ ಮಹಿಳೆಯರು, 75ರ ವೃದ್ಧೆ, ಹಾಗೂ 47 ಹಾಗೂ 55ರ ಪುರುಷರು, 16ರ ಯುವತಿ, 5ರ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹೊಸಹೊನ್ನತ್ತಿಯ 52ರ ಪುರುಷ, ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 50ರ ಪುರುಷರಲ್ಲಿ ಸೋಂಕು ಕಂಡು ಬಂದಿದೆ.
ಬಿಡುಗಡೆಯಾದವರ ವಿವರ : ದಾವಣಗೆೆರೆಯ ಕುರುಬರ ಬೀದಿಯ 20ರ ಮಹಿಳೆ, 47ರ ಪುರುಷ, ಬೀಡಿ ಲೇಔಟ್ನ 44ರ ಮಹಿಳೆ, 40ರ ಪುರುಷ, ನಿಜಲಿಂಗಪ್ಪ ಬಡಾವಣೆಯ 38ರ ಪುರುಷ ಕಾಯಿಪೇಟೆಯ 29ರ ಪುರುಷ, ವಿನೋಬಗರದ 20ರ ಪುರುಷ, ದೇವರಾಜ ಅರಸ್ ಬಡಾವಣೆಯ 35ರ ಪುರುಷ, ಗುಳಗಿ ಡಾಕ್ಟರ್ ಕಾಂಪೌಂಡ್ ಹಿಂದಿನ 7ರ ಬಾಲಕ, ಆಜಾದ್ ನಗರದ 42ರ ಪುರುಷ, ನಿಟುವಳ್ಳಿಯ 47ರ ಪುರುಷ, ಬಿ.ಎಲ್. ಗೌಡ ಬಡಾವಣೆಯ 35ರ ಮಹಿಳೆ, ದುಗ್ಗಮ್ಮನ ದೇವಾಲಯ ಬಳಿಯ 35ರ ಪುರುಷ,
ವಿದ್ಯಾನಗರದ 59ರ ಪುರುಷ, ದೇವರಾಜ ಅರಸ್ ಬಡಾವಣೆಯ 52ರ ಪುರುಷ ವಿನೋಬನಗರದ 23ರ ಪುರುಷ ಜಾಲಿನಗರದ 75ರ ವೃದ್ಧ, ತರಳಬಾಳು ಬಡಾವಣೆಯ 27 ಹಾಗೂ 60ರ ಮಹಿಳೆಯರು, 20ರ ಪುರುಷ ಸರಸ್ವತಿ ಬಡಾವಣೆಯ 58ರ ಪುರುಷ, ಕೆ.ಟಿ.ಜೆ. ನಗರದ 41ರ ಪುರುಷ 33ರ ಮಹಿಳೆ, ಸರಸ್ವತಿ ನಗರದ 55ರ ಪುರುಷ, ಎಸ್.ಎಸ್.ಎಂ. ನಗರದ 20ರ ಮಹಿಳೆ, ಎಸ್.ಪಿ.ಎಸ್. ನಗರದ 47ರ ಪುರುಷ ನೂರಾನಿ ಮಸೀದಿ ಸಮೀಪದ 32ರ ಪುರುಷ ಎಂಸಿಸಿ ಬಿ ಬ್ಲಾಕ್ನ 72ರ ವೃದ್ಧ, ಡಿಡಿಪಿಐ ಕಚೇರಿಯ 41ರ ಮಹಿಳಾ ಸಿಬ್ಬಂದಿ, ಕೆ.ಬಿ. ಬಡಾವಣೆಯ 54ರ ಪುರುಷ,
ಪೊಲೀಸ್ ಕ್ವಾರ್ಟರ್ಸ್ನ 44ರ ಪುರುಷ ಬೀಡಿ ಲೇಔಟ್ನ 34ರ ಪುರುಷ ಜಾಲಿನಗರದ 75ರ ವೃದ್ಧ, ವಿನೋಬನಗರದ 67ರ ಪುರುಷ, ಕೆ.ಟಿ.ಜೆ. ನಗರದ 41ರ ಪುರುಷ, ಚಿಗಟೇರಿ ಆಸ್ಪತ್ರೆಯ ಇಂಟರ್ನ್ ಆಗಿರುವ 24ರ ಪುರುಷ ಡಿಸಿಎಂ ಬಡಾವಣೆಯ 42ರ ಪುರುಷ, ಗುಳಗಿ ಡಾಕ್ಟರ್ ಕಾಂಪೌಡ್ ಬಳಿಯ 40ರ ಮಹಿಳೆ, ನಿಜಲಿಂಗಪ್ಪ ಬಡಾವಣೆಯ 64ರ ಮಹಿಳೆ, ಕೆ.ಎಸ್.ಆರ್.ಟಿ.ಸಿ. ಡಿಪೋದ 54ರ ಪುರುಷ, ಬಂಬೂ ಬಜಾರ್ನ 24ರ ಪುರುಷ, ಹೌಸಿಂಗ್ ಬೋರ್ಡ್ ಕಾಲೊನಿಯ 16ರ ಯುವಕ, ಜಾಲಿನಗರದ 36ರ ಮಹಿಳೆ.
ದಾವಣಗೆರೆ ತಾಲ್ಲೂಕು ಹದಡಿಯ 55ರ ಪುರುಷ, ಹೊಸಚಿಕ್ಕನಹಳ್ಳಿಯ 66ರ ಪುರುಷ, ಕಲ್ಕೆರೆಯ 40ರ ಮಹಿಳೆ, ಶಿರಮಗೊಂಡನಹಳ್ಳಿಯ 38ರ ಪುರುಷ.
ಹೊನ್ನಾಳಿ ಕೆ.ಎಸ್.ಆರ್.ಟಿ.ಸಿ.ಯ 37ರ ಪುರುಷ, ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ 36ರ ಮಹಿಳೆ ಹಾಗೂ ಹೊನ್ನಾಳಿ ತಾಲ್ಲೂಕು ಗೋಣಿಗೆರೆಯ 29ರ ಪುರುಷ.
ಹರಿಹರದ ಮರಾಠಗಲ್ಲಿಯ 53ರ ಮಹಿಳೆ, ಜೆ.ಸಿ. ಬಡಾವಣೆಯ 42ರ ಪುರುಷ ಇಂದಿರಾ ನಗರದ 25ರ ಮಹಿಳೆ, ಮಜ್ಜಿಗೆ ಬಡಾವಣೆಯ 11ರ ಬಾಲಕ ಹಾಗೂ 35ರ ಮಹಿಳೆ, 33ರ ಮಹಿಳೆಯಾದ ಸ್ಟಾಫ್ ನರ್ಸ್, ಕೆ.ಹೆಚ್.ಬಿ. ಬಡಾವಣೆಯ 45ರ ಪುರುಷ.
ಹರಿಹರ ತಾಲ್ಲೂಕು ಗುತ್ತೂರಿನ 25ರ ಪುರುಷ ಹಳ್ಳದಕೆರೆಯ 28ರ ಪುರುಷ ಹಾಗೂ 80ರ ವೃದ್ಧೆ, ಹನಗವಾಡಿಯ 30ರ ಮಹಿಳೆ.
ಜಗಳೂರಿನ ಜೆ.ಸಿ.ಆರ್. ಬಡಾವಣೆಯ 32ರ ಪುರುಷ, ಜಗಳೂರು ತಾಲ್ಲೂಕು ದೇವಿಕೆರೆಯ 62ರ ಮಹಿಳೆ, 19ರ ಯುವಕ, ಬೈರನಹಳ್ಳಿಯ 65ರ ಮಹಿಳೆ, ದಿದ್ದಿಗೆಯ 66ರ ಪುರುಷ, ಯರ್ಲಕಟ್ಟೆಯ 30ರ ಪುರುಷ.
ಚನ್ನಗಿರಿಯ ಪೊಲೀಸ್ ಕ್ವಾರ್ಟರ್ಸ್ನ 71ರ ವೃದ್ಧೆ, ಚನ್ನಗಿರಿ ತಾಲ್ಲೂಕು ಕಬ್ಬಳದ 73ರ ವೃದ್ಧ. ರಾಣೇಬೆನ್ನೂರಿನ 38ರ ಪುರುಷ, ರಾಣೇಬೆನ್ನೂರು ತಾಲ್ಲೂಕು ಹಲಗೇರಿಯ 57ರ ಪುರುಷ,