ಕೆಹೆಚ್‌ಬಿ ಕಾಲೋನಿಗೆ ನಗರ ಸಾರಿಗೆ

ಫೋನ್ ಕರೆಗೆ ಸ್ಪಂದಿಸಿ ಬಸ್ ಸೌಕರ್ಯ  ಕಲ್ಪಿಸಿದ ಮೇಯರ್ ಅಜಯ್ ಕುಮಾರ್

ದಾವಣಗೆರೆ, ನ.4- ನಗರದ ಕೆ.ಹೆಚ್.ಬಿ ಕಾಲೋನಿ ತುಂಗಭದ್ರಾ ಬಡಾವಣೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯವನ್ನು ನೂತನವಾಗಿ ಇಂದಿನಿಂದ ಆರಂಭಿಸಲಾಯಿತು.

ಬಸ್ ಸೌಕರ್ಯವಿಲ್ಲದ ಬಗ್ಗೆ ಇಲ್ಲಿನ ನಿವಾಸಿಗಳು ನಗರ ಪಾಲಿಕೆ ಮಹಾಪೌರ ಬಿ.ಜಿ. ಅಜಯ್ ಕುಮಾರ್ ಅವರ ಗಮನಕ್ಕೆ ತಂದು ಮನವಿ ನೀಡಿದ್ದರು. ಬಸ್ ಸೌಕರ್ಯವಿಲ್ಲದೇ ಇಲ್ಲಿನ ಮಹಿಳೆಯರು, ವೃದ್ಧರು, ಶಾಲಾ ವಿದ್ಯಾರ್ಥಿಗಳ ಕಷ್ಟವನ್ನು ಅರಿತ ಮಹಾಪೌರರು ತಾವೇ ಸ್ವತಃ ಹೆಚ್ಚಿನ ಮುತುವರ್ಜಿ ವಹಿಸಿ, ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದು ಇಂದು ತಾವೇ ಖುದ್ದಾಗಿ ತಮ್ಮ ಪುತ್ರನೊಂದಿಗೆ ಬಸ್ಸಿನಲ್ಲಿ ಆಗಮಿಸಿ, ನಿವಾಸಿಗಳ ಬವಣೆಗೆ ಸ್ಪಂದಿಸಿದರು. ಬಡಾವಣೆಯ ನಿವಾಸಿಗಳು ಬಸ್ಸಿಗೆ ಪೂಜೆ ಸಲ್ಲಿಸಿ, ಮಹಾಪೌರರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತ ನಾಡಿದ ಬಡಾವಣೆಯ ಹಿರಿಯ ನಾಗರಿಕ ದ್ಯಾವಪ್ಪ ಅವರು, ಮಹಾಪೌರರು ಕೇವಲ ಒಂದು ಫೋನ್ ಕರೆಗೆ ಸ್ಪಂದಿಸಿ, ನಮಗೆ ಬಸ್ ಸೌಕರ್ಯದ ವ್ಯವಸ್ಥೆ ಮಾಡಿ ದ್ದಾರೆ. ಜೊತೆಗೆ ಇನ್ನಿತರೆ ಕುಂದು – ಕೊರತೆಗಳನ್ನು ಸರಿಪಡಿಸಲು ಪ್ರಯತ್ನಿಸುತ್ತೇನೆಂದು ಹೇಳಿರು ವುದು ಸ್ವಾಗತಾರ್ಹ ಕಾರ್ಯವಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಬಸವರಾಜ ಕೂಲೇರ್, ಹನುಮಂತನಾಯ್ಕ, ಶಾಲಾ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಾವಿಕಟ್ಟಿ, ಎಸ್.ಆರ್. ಹಿರೇಮಠ, ವೀರಯ್ಯ ಹಿರೇಮಠ, ಕೆ.ಎಂ. ಮಾಲತೇಶ, ಎಮ್.ಎಸ್. ರೇವಣಪ್ಪ, ಚಂದ್ರಶೇಖರ ಹಾದಿಮನಿ, ಶ್ರೀಧರ ಮಾತನವರ, ಭಾಸ್ಕರ್, ಸಿ.ಎನ್. ವಾಸುದೇವ್, ಮಲ್ಲಿಕಾರ್ಜುನ ಶಿಡೇನೂರು, ಶ್ಯಾಮ್ ಶೆಟ್ರು ಮತ್ತಿತರರು ಭಾಗವಹಿಸಿದ್ದರು.

error: Content is protected !!