ದಾವಣಗೆರೆ, ಜು. 29 – ದಾವಣಗೆರೆ ಮಹಾನಗರ ಪಾಲಿಕೆಯ ಸಿಬ್ಬಂದಿಗೆ ಕೋವಿಡ್-19 ಸೋಂಕು ಪರೀಕ್ಷೆಯ ವರದಿಯು ಪಾಸಿಟಿವ್ ಎಂದು ಬಂದಿರುವುದರಿಂದ ಸೋಂಕು ನಿವಾರಕ ಸಿಂಪಡಿಸುವ ಪ್ರಯುಕ್ತ ಸಾರ್ವಜನಿಕರ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ನಾಳೆ ದಿನಾಂಕ 30 ಮತ್ತು 31 ರಂದು ಪಾಲಿಕೆಯ ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಆಸ್ತಿ ತೆರಿಗೆ/ನೀರಿನ ತೆರಿಗೆ ಹಾಗೂ ಇತರೆ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಪಾಲಿಕೆಯ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ರಂಗಪ್ಪ ರಂಗಮಂದಿರದಲ್ಲಿ ಹಾಗೂ ಶಾಮನೂರು ರಸ್ತೆಯ ವಲಯ ಕಚೇರಿ-3ರಲ್ಲಿ ತೆರಿಗೆ ಪಾವತಿಗೆ ಬ್ಯಾಂಕಿನ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರದೊಂದಿಗೆ ಸಹಕರಿಸಬೇಕೆಂದು ಆಯುಕ್ತ ವಿಶ್ವನಾಥ್ ಮುದಜ್ಜಿ ತಿಳಿಸಿದ್ದಾರೆ.