ದಾವಣಗೆರೆ, ಜು. 25- ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಅಜಯ್ ಅವರ ಪತ್ನಿ ಮಂಗಳಾ, ಮಗ ಭರತ್‌ಗೂ ಸೋಂಕು ಇರುವುದು ದೃಢಪಟ್ಟಿದೆ. ಆದರೆ ಮಗಳು ನೇಹಾಗೆ ನೆಗೆಟಿವ್ ವರದಿ ಬಂದಿರುವುದಾಗಿ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಕೆಮ್ಮು, ನೆಗಡಿ, ಮೈಕೈ ನೋವಿದ್ದುದರಿಂದ ಅವರು ಸ್ವಯಂ ಕ್ವಾರಂಟೈನ್‌ನಲ್ಲಿದ್ದರು. ನಂತರ ಕುಟುಂಬ ಸದಸ್ಯರ ಪರೀಕ್ಷೆ ಮಾಡಿಸಿದ್ದರು. ಕೊರೊನಾ ಭಯ ಪಡುವಂತಹ ಕಾಯಿಲೆಯಲ್ಲ. ಇದರ ಬಗ್ಗೆ ಜನರೂ ಭಯಭೀತರಾಗಬೇಕಾಗಿಲ್ಲ. ಆದರೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಸುವ ಮೂಲಕ ಎಚ್ಚರದಿಂದಿರಬೇಕು ಎಂದವರು ಸಲಹೆ ನೀಡಿದ್ದಾರೆ.