ಲಾಕ್ ಡೌನ್: ಕಳೆದುಕೊಂಡದ್ದೆಷ್ಟು, ಗಳಿಸಿದ್ದೆಷ್ಟು ..?

ನಿಜಕ್ಕೂ ನಾವೆಲ್ಲರೂ `ಲಾಕ್ ಡೌನ್’ ಸಂದರ್ಭ ಪ್ರಾರಂಭಗೊಂಡ ದಿನದಿಂದ ನಮ್ಮ ಅಮೂಲ್ಯ ಸಮಯ ಬಳಸಿಕೊಂಡು ಗಳಿಸಿದ, ಕಳೆದುಕೊಂಡ ಆಯ-ವ್ಯಯದ ಲೆಕ್ಕ ಮಾಡಿಕೊಳ್ಳಲೇಬೇಕು. 

ಏಕೆಂದರೆ ಸತತ 120 ದಿನಗಳವರೆಗೆ ಒಂದಿಲ್ಲೊಂದು ರೀತಿಯಲ್ಲಿ ಗೃಹ ಬಾಂಧ ವ್ಯದಲ್ಲಿ ಸಮಯ ಕಳೆದ ಸಂಸಾರಗಳು, ಇನ್ನೊಂದು ರೀತಿಯಲ್ಲಿ ವಿದ್ಯಾವಂತ, ಬುದ್ಧಿವಂತ ಪದವೀಧರ ಮಿತ್ರರು, ನಮಗೆ ಶಾಲೆ-ಕಾಲೇಜಿನ ಯಾವ ಸಂಬಂಧವೂ ಇಲ್ಲ ಎನ್ನುವ ರೀತಿಯಲ್ಲಿ ಶಾಲೆ ರಹಿತ ಜೀವನದ ಅಮೂಲ್ಯ ದಿನಗಳನ್ನು ಬಳಸಿ ಕೊಳ್ಳದ ವಿದ್ಯಾರ್ಥಿ ಸಮೂಹ. ವಿಪರ್ಯಾ ಸವೆಂದರೆ ಸರ್ಕಾರವಾಗಲಿ, ಶಿಕ್ಷಣ ಇಲಾ ಖೆಯಾಗಲೀ, ತರಬೇತಿ ಇಲಾಖೆಯಾಗಲೀ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಕ್ಷೇತ್ರ, ಕೌಶಲ್ಯಾ ಭಿವೃದ್ಧಿ ಇಲಾಖೆ ಇವ್ಯಾವುವೂ ಸಹ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ರೀತಿಯಲ್ಲಿ ಕೆಲಸ ಮಾಡದಿರುವುದು ಕಲ್ಲಿನ ಕನ್ನಡಿಯಲ್ಲಿಯೂ ಪ್ರತಿಬಿಂಬ ಗೋಚರಿಸುವಷ್ಟು ಸತ್ಯಸಂಗತಿ. 120 ದಿನಗಳವರೆಗೆ ಕೃಷಿ ಕ್ಷೇತ್ರ, ಇನ್ನಿತರೆ ಕೆಲಸ ಮಾಡುವವರನ್ನು ಹೊರತುಪಡಿಸಿ ಭವಿಷ್ಯ ಶೇ.65 ಜನಸಮೂಹ ಮನೆಯಲ್ಲಿದ್ದುದೇ ಸಾಧನೆ.            

ಸರ್ಕಾರ ಗೖಹ ಬಂಧನ ದಲ್ಲಿರಿಸಿತೇ ಹೊರತು ಅಲ್ಲಿದ್ದುಕೊಂಡು ದೇಶದ ಆರ್ಥಿ ಕತೆಯ ಚಿಂತನೆಗೆ ರೂಪ ಕೊಡುವಲ್ಲಿ ವಿಫಲವಾಯಿತು. ಏಕೆಂದರೆ ನಮ್ಮಲ್ಲಿ ಗೖಹ ಮತ್ತು ಗುಡಿ ಕೈಗಾರಿಕೆಗಳಿಗೆ ಹಿಂದಿನಿಂ ದಲೂ ಯಾವ ಪ್ರೋತ್ಸಾಹ ಸಿಗದೇ ಇರುವುದು ಮತ್ತು ನಮ್ಮ ದೇಶೀಯ ವಸ್ತುಗಳನ್ನು ಖರೀದಿಸಿ, ಬಳಸುವ ಬೖಹತ್ ಮನಸ್ಸಿನವರಂತೂ ನಾವಲ್ಲ ಎಂಬುದು ಸರಿ. ನಮ್ಮ ದೇಶವು ಆರ್ಥಿಕ ಸ್ವಾವಲಂಬನೆ ಕಾಣಬೇಕೆಂದರೆ ಕಚ್ಚಾವಸ್ತುಗಳಿಂದ ಮನೆ ಮನೆಯಲ್ಲಿ ಸಣ್ಣ ಪುಟ್ಟ ಯಂತ್ರಗಳ ಬಿಡಿ ಭಾಗಗಳನ್ನು ಬಳಕೆಗೆ ಬೇಕಾಗುವ  ಸಣ್ಣ ಪುಟ್ಟ  ಯಂತ್ರಗಳನ್ನಾಗಲೀ ಇನ್ನಿತರೆ ಮಿಷ ನರಿ ಪಾರ್ಟ್ಸ್ ಗಳಾಗಲೀ ಮಾಡಿ ಮಾ ರುಕಟ್ಟೆ ಸೃಷ್ಟಿಸಿದರೆ ನಾವು  ಪ್ರಬಲವಾಗಲು ಸಾಧ್ಯ. ದೇಶದ ಅಂಬಿಗರು ಮಾರುಕಟ್ಟೆ ಸೃಷ್ಟಿಸಿಕೊಡುವ ಜವಾಬ್ದಾರಿಯನ್ನು ಅರಿತು ನಡೆಯಬೇಕು- ನಡೆಯಲೇಬೇಕಾಗುತ್ತದೆ.

 ದೂರದರ್ಶನ ಮಾಧ್ಯಮ ಗಳಂತೂ  ಜನರಲ್ಲಿ ಜಾಗೃತಿ ಮೂಡಿಸುವ ಸೇತುವೆ ಯಲ್ಲಿ  ಕೈ ಹಿಡಿದು ನಡೆಸುವಂತೆ  ಕೆಲಸ ಮಾಡುತ್ತಾ ಜಾರಿಸುವ  ಕೆಲಸ ಮಾಡಿದವು ಎಂದು ಹೇಳಿದರೆ ತಪ್ಪಾಗಲಾರದು. ತೋರಿಸಿದ್ದೇ ತೋರಿಸಿದ್ದು, ನೋಡಿದ್ದೇ ನೋಡಿದ್ದು  `ಎಲ್ಲಿಗೆ ಬಂತು ಮಾರಾಯ ಎಂದರೆ ನೆತ್ತಿಗೆ ಬಂತು ದೇವರಾಯ’ ಎಂಬಂತಾಗಿದೆ. ಕೊರೊನಾ ವೈರಸ್ ಮನೆಯಲ್ಲಿ ಇರುವುದಕ್ಕೆ ಬಹಳಷ್ಟು ಸಮಯ ದೊರಕಿಸಿತು.  ಆದರೆ ಸದ್ಬಳಕೆ ಯಾಗದೇ ಇದ್ದದ್ದು  ಬಹಳ ವಿಷಾದಕರ.

ಪ್ರಪಂಚವೇ ಇಂದು ಸೋಂಕಿನ ಔಷಧಿ ಕಂಡುಹಿಡಿಯುವ ರೇಸ್ ನಲ್ಲಿ ತನ್ನ ಶತಪ್ರಯತ್ನ ಮಾಡುತ್ತಿದೆ. 120 ದಿನಗಳಾ ದರೂ ಸಹ ನಾವು ಲಾಕ್ ಡೌನ್ ಎಂಬ ಪದವನ್ನೇ ಬಳಸುತ್ತಿದ್ದೇವೆಯೇ ಹೊರತು ಅದಕ್ಕೆ ಮಾತೃಭಾಷೆಯಲ್ಲಿ ಯಾವ ಪದ ಬಳಸಬೇಕು ಎಂಬ ಹುಡುಕಾಟದಲ್ಲಿದ್ದೇವೆ ಕನ್ನಡ ನುಡಿ ಮತ್ತು ಮುದ್ರಣ ಮಾಧ್ಯಮ ದಲ್ಲಿ ಇಲ್ಲಿಯವರೆಗೂ ಲಾಕ್ ಡೌನ್ ಎನ್ನುವ ಪದವನ್ನೇ ಬಳಸುತ್ತಿರುವುದು ಸತ್ಯ. 

ಪ್ರಾಯೋಗಿಕ  ತರಬೇತಿ ಕೇಂದ್ರಗಳನ್ನು  ಇನ್ನು ಮುಂದಾದರೂ ಆಯೋಜನೆ ಮಾಡಿದರೆ ಭವ್ಯಭಾರತದ ಪರಿಕಲ್ಪನೆಗೆ ಎಲ್ಲೋ ಸ್ವಲ್ಪ ಕಾಯಕಲ್ಪ ಕೊಟ್ಟಂತಾಗುತ್ತದೆ. ಹಾಗೇ ಶಿಕ್ಷಣದಲ್ಲೂ ಪ್ರಾರಂಭಿಕ ಹಂತದಿಂದಲೂ ಕೌಶಲ್ಯ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡುವ ಮೂಲಕ ಪಠ್ಯಕ್ರಮದಲ್ಲಿ ಅಳವಡಿಸಿದರೆ ಇಂಥ ಸಂದಿಗ್ಧ ಸಂದರ್ಭದಲ್ಲಿ ಗ್ರಾಮಕ್ಕೆ, ದೇಶಕ್ಕೆ ಬೆನ್ನೆಲುಬಾಗಿ ನಿಲ್ಲಬಹುದು ಎಂಬ ಆಶಾಭಾವನೆಯೊಂದಿಗೆ …..


ಕೆ. ಸಿರಾಜ್ ಅಹಮ್ಮದ್‌
ಕಸಾಪ ಜಿಲ್ಲಾ ಸಂಚಾಲಕರು, ಸಂತೇಬೆನ್ನೂರು.
[email protected]

error: Content is protected !!