ಕೂಡಲಿ ಶ್ರೀ ವಿದ್ಯಾರಣ್ಯ ಭಾರತಿ ಮಹಾಸ್ವಾಮೀಜಿ ಅಭಿಮತ
ಮನುಷ್ಯ ದೇವರನ್ನು ಮರೆತರೆ ಕೊರೊನಾ ದಂತಹ ಸಂಕಷ್ಟಗಳು ಎದುರುಗುತ್ತವೆ : ವಿದ್ಯಾರಣ್ಯ ಭಾರತಿ ಶ್ರೀ
ದಾವಣಗೆರೆ, ಅ. 28- ಶರ ನ್ನವರಾತ್ರಿ ವೇಳೆ ದೇವಿ ಆರಾಧಿ ಸುವುದರಿಂದ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಕೂಡಲಿ ಶ್ರೀ ವಿದ್ಯಾಭಿನವ ವಿದ್ಯಾ ರಣ್ಯ ಭಾರತೀ ಮಹಾಸ್ವಾಮೀಜಿ ನುಡಿದರು.
ಇಲ್ಲಿನ ಜಯದೇವ ವೃತ್ತದ ಬಳಿ ಇರುವ ಶಂಕರ ಮಠದಲ್ಲಿ ರುದ್ರಹೋಮದ ಪೂರ್ಣಾಹುತಿ ನೆರವೇರಿಸಿದ ಶ್ರೀಗಳು, ಆಶೀರ್ವಚನ ನೀಡಿದರು.
ವರ್ಷದಲ್ಲಿ ಎರಡು ಬಾರಿ ನವರಾತ್ರಿ ಆಚರಿಸಲಾಗುತ್ತದೆ. ಮೊದಲನೆಯದ್ದು ಚೈತ್ರ ಮಾಸದಲ್ಲಿ 9 ದಿನಗಳ ಕಾಲ ಆಚರಿಸುವ ನವರಾತ್ರಿಯಾಗಿದ್ದು, ಆ ವೇಳೆ ಶ್ರೀರಾಮನಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ನಂತರ ಮಳೆಗಾಲ ಕಳೆದ ನಂತರ ಶರದ್ ಋತುವಿನಲ್ಲಿ ಆಚರಿಸುವ ನವ ರಾತ್ರಿಯಾಗಿದೆ ಈ ವೇಳೆ ದೇವಿ ಆರಾಧನೆಗೆ ಮಹತ್ವವಿದೆ ಎಂದರು.
ಬೇರೆ ದಿನಗಳಲ್ಲಿ ದೇವರ ಆರಾಧನೆ ಮಾಡಿದಾಗ ಸಿಗುವ ಫಲಕ್ಕಿಂತ ನೂರು ಪಟ್ಟು ಹೆಚ್ಚಿನ ಫಲ ನವರಾತ್ರಿ ಆಚರಣೆಗಳಲ್ಲಿ ಆರಾಧಿಸುವುದರಿಂದ ಪ್ರಾಪ್ತಿಯಾ ಗುತ್ತದೆ ಎಂದರು.
ಮನುಷ್ಯರಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳೂ ತಾಯಿಯನ್ನು ಪ್ರೀತಿಸುತ್ತವೆ. ನದಿ, ಭೂಮಿ ಎಲ್ಲವನ್ನೂ ನಾವು ತಾಯಿ ಎಂದು ಪೂಜಿಸುತ್ತೇವೆ. ದೇವಿ ಶಕ್ತಿ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಜಗನ್ಮಾತೆ ಇಡೀ ಜಗತ್ತಿಗೆ ಮಾತೆಯಾಗಿದ್ದಾಳೆ ಎಂದರು.
ಮನುಷ್ಯ ದೇವರನ್ನು ಮರೆತಿದ್ದರಿಂದಲೇ ಕೊರೊನಾ ದಂತಹ ಸಂಕಷ್ಟಗಳು ಎದುರಾಗುತ್ತವೆ. ಇವೆಲ್ಲಾ ದೇವರ ಲೀಲೆ ಎಂದ ಶ್ರೀಗಳು, ದುರ್ಗಾದೇವಿ ಆರಾಧನೆಯಿಂದ ಇಂತಹ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದು ಎಂದರು.
ದೇವಾಲಯಗಳಿಗೆ, ಗುರುಗಳ ಬಳಿ ಹೋದಾಗ `ಆನೆ’ಯನ್ನು ಮಾತ್ರ ಕೇಳಬೇಕು ಎಂದು ಕಿವಿ ಮಾತು ಹೇಳಿದ ಶ್ರೀಗಳು, `ಆ’ ಎಂದರೆ ಆರೋಗ್ಯ ಹಾಗೂ `ನೆ’ ಎಂದರೆ ನೆಮ್ಮದಿ ಎಂದು ವಿವರಿಸಿದರು.
ಆರೋಗ್ಯ ಹಾಗೂ ನೆಮ್ಮದಿ ಇದ್ದಲ್ಲಿ ಮಾತ್ರ ಮನುಷ್ಯ ಜೀವನದಲ್ಲಿ ಸುಖ ಜೀವನ ನಡೆಸಲು ಸಾಧ್ಯ. ಎಷ್ಟು ಕೋಟಿ ಕೊಟ್ಟರೂ ಆರೋಗ್ಯ, ನೆಮ್ಮದಿ ಪಡೆಯಲಾಗದು. ದೇವರ ಆರಾಧನೆ, ಸ್ಮರಣೆಯಿಂದ ಮಾತ್ರ ಇದು ಸಾಧ್ಯ. ಆದ್ದರಿಂದ ಪ್ರತಿ ಮನೆಯಲ್ಲಿ ಕನಿಷ್ಟ ಹತ್ತು ನಿಮಿಷಗಳಾದರೂ ದೇವರ ಸ್ಮರಣೆ ನಡೆಯುತ್ತಿರಲಿ ಎಂದು ಸಲಹೆ ನೀಡಿದರು.
ಪವನ್ ಕುಮಾರ್ ಕುಲಕರ್ಣಿ, ಅಜಯ್ ಭಟ್, ಗಣೇಶ್ ಭಟ್, ಅಮೋಘ ವರ್ಷ, ಅನಿಲ್ ಯೋಜ್ಸ್, ರಂಗನಾಥ ನಾಡಿಗೇರ್, ನರಹರಿ ನಾಡಿಗೇರ್, ಗಂಗಾಧರ ನಾಡಿಗೇರ್, ನಾರಾಯಣ ಜೋಷಿ, ಮಾಲತೇಶ್ ನಾಡಿಗೇರ್, ಹನುಮಂತರಾವ್ ಕಟ್ಟಿ, ಎಂ.ಜಿ. ಶ್ರೀಕಾಂತ್ ಇತರರು ಈ ಸಂದರ್ಭದಲ್ಲಿದ್ದರು.