ಕೊರೊನಾ ಭಯ ಬಿಟ್ಟು ಸುರಕ್ಷಿತ ಕ್ರಮಗಳ ಮುಖೇನ ಜೀವ ರಕ್ಷಿಸಿಕೊಳ್ಳಿ

ಕೋವಿಡ್ ಜಾಗೃತಿ ಜಾಥಾದಲ್ಲಿ ಎಎಸ್ಪಿ ರಾಜೀವ್ ಕಿವಿಮಾತು

ದಾವಣಗೆರೆ, ಅ.27- ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ರಾಜೀವ್ ನೇತೃತ್ವದಲ್ಲಿ ನಗರದಲ್ಲಿಂದು ಉತ್ತರ ಪೊಲೀಸ್ ವೃತ್ತ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೋವಿಡ್-19 ಜಾಗೃತಿ ಜಾಥಾ ನಡೆಸಿದರು. 

ಮದೀನಾ ಆಟೋ ನಿಲ್ದಾಣದಿಂದ ಅಕ್ತರ್ ರಜಾ ಸರ್ಕಲ್ ವರೆಗೆ ಜಾಥಾ ನಡೆಸಿ, ಮಾಸ್ಕ್ ಇಲ್ಲದೇ ಅಡ್ಡಾಡುತ್ತಿದ್ದ ಜನರಿಗೆ ಮಾಸ್ಕ್ ನೀಡಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಜಾಗೃತಿ ಮೂಡಿಸಿದರು. ಕೊರೊನಾ ವೈರಸ್ ನಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಮಾಸ್ಕ್ , ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಯಿತು.

ನಂತರ ವೇದಿಕೆ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದ ರಾಜೀವ್, ಕೊರೊನಾ ಮಹಾಮಾರಿ ವೈರಸ್ ನಿಂದ ನಮ್ಮನ್ನು ನಾವು ಸುರಕ್ಷಿತ ಕ್ರಮಗಳಾದ ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ, ಶುಚಿತ್ವ ಕಾಯ್ದುಕೊಳ್ಳುವ ಮೂಲಕ ರಕ್ಷಿಸಿಕೊಳ್ಳಬೇಕಾಗಿದೆ. ಕೊರೊನಾ ಭಯ ಬಿಟ್ಟು ಜೀವನ ಕ್ರಮದಲ್ಲಿ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಂಡು ಜೀವ ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದರು.

ಇದೇ ವೇಳೆ ಲಾಕ್ ಡೌನ್ ಸಮಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ ನಾಗರಿಕರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. 

ನಗರ ಪೊಲೀಸ್ ಉಪಾಧೀಕ್ಷಕ ನಾಗೇಶ್ ಐತಾಳ್, ಪೊಲೀಸ್ ನಿರೀಕ್ಷಕ ಗಜೇಂದ್ರಪ್ಪ, ಪಿಎಸ್ ಐಗಳಾದ ನಾಗರಾಜ, ಶೈಲಜಾ, ಲಲಿತಮ್ಮ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮುಖಂಡರುಗಳಾದ ಜೆ. ಅಮಾನುಲ್ಲಾಖಾನ್, ಸಿರಾಜ್ ಅಹ್ಮದ್, ಸಾಧಿಕ್ ಪೈಲ್ವಾನ್ ಭಾಗವಹಿಸಿದ್ದರು.

error: Content is protected !!