ಮಲೇಬೆನ್ನೂರು 2, ಹೋಬಳಿಯಲ್ಲಿ 2 ಪಾಸಿಟಿವ್

ಮಲೇಬೆನ್ನೂರು, ಜು.21- ಮಲೇಬೆನ್ನೂರು ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ಮಂಗಳವಾರ 4 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪ ಟ್ಟಿದ್ದು, ಹೋಬಳಿಯಲ್ಲಿ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಇಲ್ಲಿನ 5 ನೇ ವಾರ್ಡ್‌ನಲ್ಲಿರುವ ಕಾಲ ಭೈರವ ದೇವಸ್ಥಾನದ ಎದುರು ಮನೆಯ 31 ವರ್ಷದ ಟ್ಯಾಕ್ಸಿ ಡ್ರೈವರ್‌ಗೆ ಸೋಂಕು ತಗುಲಿದ್ದು, ಈತನ ಜೊತೆ ಮನೆಯಲ್ಲಿದ್ದ 55 ವರ್ಷದ ತಾಯಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಈತ ಬೆಂಗಳೂರಿಗೆ ಹೋಗಿ ಬಂದ ನಂತರ ಆಶಾ ಕಾರ್ಯಕರ್ತೆಯರ ಸೂಚನೆಯಂತೆ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ಎನ್ನಲಾಗಿದೆ. 

ಇಂದು ಬೆಳಿಗ್ಗೆ ಈತನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ನಂತರ ಗುತ್ತೂರಿನಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಯಿತು. ಈ ವೇಳೆ ಸೋಂಕಿತ ವ್ಯಕ್ತಿ ಆರೋಗ್ಯವಾಗಿದ್ದರು ಎಂದು ಹೇಳಲಾಗಿದೆ.  ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಉಪ ತಹಶೀಲ್ದಾರ್ ಆರ್.ರವಿ, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ಉಮೇಶ್, ದಿನಕರ್, ನವೀನ್, ಪ್ರಭು ಮತ್ತು ಪೌರ ಕಾರ್ಮಿಕರು ಸೋಂಕಿತ ವ್ಯಕ್ತಿ ವಾಸವಿದ್ದ ಮನೆಯ ಏರಿಯಾವನ್ನು ಬಫರ್ ವಲಯವನ್ನಾಗಿ ಸೀಲ್‌ಡೌನ್ ಮಾಡಿ, ಸ್ಯಾನಿಟೈಸ್ ಮಾಡಿಸಿದರು.  ಇಲ್ಲಿನ ಇಂದಿರಾ ನಗರದ 10ನೇ ವಾರ್ಡಿನ ಮೇದೂರು ಗಲ್ಲಿಯ 45 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇವರ ಪತ್ನಿ ಕಳೆದ ವಾರ ಅಸ್ತಮಾ ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದರು. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಮಹಿಳೆ ಮೃತ ಪಟ್ಟ ನಂತರ ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು. ಮನೆಯನ್ನೂ ಸೀಲ್‌ಡೌನ್ ಮಾಡಿ, ನಂತರ ಅವರ ಕುಟುಂಬದವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಟ್ಟು ಎಲ್ಲರಿಗೂ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಆ ಪೈಕಿ ಮೃತ ಮಹಿಳೆಯ ಪತಿಗೆ ಸೋಂಕು ದೃಢಪಟ್ಟಿದ್ದು, ಅವರನ್ನು  ದಾವಣಗೆರೆ ಸಿ.ಜಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಯಿತು.

ನಂದಿತಾವರೆ : ಗ್ರಾಮದ ವಾಸಿ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ ಆಗಿದ್ದರು ಎನ್ನಲಾದ 45 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ಅನಾರೋಗ್ಯದ ಕಾರಣ ಈತನನ್ನು   ಸಿ.ಜಿ. ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಇವರು ಕಾರ್ಯನಿಮಿತ್ಯ ಬೆಂಗಳೂರಿಗೆ ಹೋಗಿ ಬಂದ ನಂತರ ಅನಾರೋಗ್ಯದ ಕಾರಣ ಮಲೇಬೆನ್ನೂರಿನಲ್ಲಿ 15 ರಂದು ಕೊರೊನಾ ಟೆಸ್ಟ್ ಮಾಡಿಸಿದ್ದರು. ಮಂಗಳವಾರ ವರದಿ ಪಾಸಿಟಿವ್ ಬಂದಿದ್ದು, ಈತನ ಜೊತೆಯಲ್ಲಿದ್ದ ಪತ್ನಿ, 9 ವರ್ಷದ ಮಗಳನ್ನು ಹೋಂ ಕ್ವಾರಂಟೈನ್ ಮಾಡಿ, ಇವರ ಮನೆಯ ಏರಿಯಾವನ್ನು ಸೀಲ್‌ಡೌನ್ ಮಾಡಲಾಗಿದೆ.

ಕುಣಿಬೆಳಕೆರೆ ಗ್ರಾ.ಪಂ. ಪಿಡಿಒ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಸುರೇಶ್, ಬಿಎಲ್ಒ ನಾಗರತ್ನ, ಆಶಾ ಕಾರ್ಯಕರ್ತೆ ಯರಾದ ರೇಖಾ, ಸುಮಾ,  ದೇವರಬೆಳಕೆರೆ ಆರೋಗ್ಯ ಕೇಂದ್ರದ ಆದರ್ಶ್‌, ಪರಶುರಾಮ್ ಈ ವೇಳೆ ಹಾಜರಿದ್ದರು.

ಹೊಸ ಪಾಳ್ಯ : ಗ್ರಾಮದ 26 ವರ್ಷದ ಯುವ ತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು ಎನ್ನಲಾ ಗಿದೆ. ಲಾಕ್‌ಡೌನ್ ನಿಮಿತ್ತ್ಯ ಬೆಂಗಳೂರಿನಿಂದ ಹೊಸಪಾಳ್ಯಕ್ಕೆ ಆಗಮಿಸಿದ್ದ ಇವರನ್ನು ನಂದಿಗುಡಿ ಆರೋಗ್ಯ ಕೇಂದ್ರದಲ್ಲಿ 11 ರಂದು ಕೊರೊನಾ ಟೆಸ್ಟ್ ಮಾಡಲಾಗಿತ್ತು. ಇಂದು ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಗುತ್ತೂರಿನ ಕೋವಿಡ್ ಕೇರ್ ಸೆಂಟರ್‌ಗೆ ಕರೆದೊಯ್ಯಲಾಯಿತು.

ಕೆ.ಎನ್.ಹಳ್ಳಿ ಗ್ರಾ.ಪಂ. ಪಿಡಿಒ ಪರಮೇಶ್ವ ರಪ್ಪ, ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾ ಧಿಕಾರಿ ಆನಂದತೀರ್ಥ, ನಂದಿಗುಡಿ ಆರೋಗ್ಯ ಕೇಂದ್ರದ ಮಂಜುನಾಥ್, ಪ್ರಕಾಶ್, ಗ್ರಾ.ಪಂ. ಎಸ್‌ಡಿಎ ಶ್ರೀನಿವಾಸ್, ಆಶಾ ಕಾರ್ಯಕರ್ತೆ ಯರು ಹಾಜರಿದ್ದು, ಸೋಂಕಿತರ   ತಂದೆ-ತಾಯಿಯನ್ನು ಹೋಂ ಕ್ವಾರಂಟೈನ್ ಮಾಡಿಸಿದರು.

error: Content is protected !!