ಜಿಲ್ಲೆಯಲ್ಲಿ 95 ಪಾಸಿಟಿವ್, 70 ಬಿಡುಗಡೆ

ಸಾವಿರದ ಸನಿಹಕ್ಕೆ ಒಟ್ಟು ಸೋಂಕಿತರ ಸಂಖ್ಯೆ, ತ್ರಿ ಶತಕ ದಾಟಿದ ಸೋಂಕಿತರ ಸಂಖ್ಯೆ

ದಾವಣಗೆರೆ, ಜು. 21 – ಜಿಲ್ಲೆಯಲ್ಲಿ ಮಂಗಳವಾರ 95 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಇದೇ ದಿನ 70 ಜನ ಗುಣಮುಖರಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಮುನ್ನೂರರ ಗಡಿ ದಾಟಿದೆಯಲ್ಲದೇ, ಒಟ್ಟು ಸೋಂಕಿತರ ಸಂಖ್ಯೆ ಸಾವಿರದ ಹತ್ತಿರಕ್ಕೆ ತಲುಪಿದೆ.

ಮಂಗಳವಾರ ಪತ್ತೆಯಾದ ಸೋಂಕಿತರಲ್ಲಿ ದಾವಣಗೆರೆ ತಾಲ್ಲೂಕಿನ 67, ಹರಿಹರದ 11, ಜಗಳೂರು ತಾಲ್ಲೂಕಿನ 7, ಚನ್ನಗಿರಿಯ 3, ಹೊನ್ನಾಳಿಯ ಐವರು ಹಾಗೂ ಹೊರ ಜಿಲ್ಲೆಯ ಇಬ್ಬರು ಸೇರಿದ್ದಾರೆ. ಇದೇ ದಿನದಂದು ಬಿಡುಗಡೆಯಾದವರಲ್ಲಿ ದಾವಣಗೆರೆ ತಾಲ್ಲೂಕಿನ 36, ಹರಿಹರ 12, ಜಗಳೂರಿನ ಏಳು,
ಚನ್ನಗಿರಿಯ ಹದಿನಾಲ್ಕು ಹೊರ ಜಿಲ್ಲೆಯ ಇಬ್ಬರು ಸೇರಿದ್ದಾರೆ.

ದಾವಣಗೆರೆ ನಗರದ ಎಂ.ಸಿ.ಸಿ. ಬಿ ಬ್ಲಾಕ್‌ನ 66 ವರ್ಷದ ವೃದ್ಧ ಹಾಗೂ ಸಿದ್ದವೀರಪ್ಪ ಬಡಾವಣೆಯ 30 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಚಾಮರಾಜಪೇಟೆಯ 80 ವರ್ಷದ ವೃದ್ಧೆ ಹಾಗೂ ಆಜಾದ್ ನಗರದ 70 ವರ್ಷದ ವೃದ್ಧಗೆ ಸೋಂಕು ಬಂದಿದೆ. ನಿಜಲಿಂಗಪ್ಪ ಬಡಾವಣೆಯ 23 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.

ಆಜಾದ್ ನಗರದ ಒಂಭತ್ತು ಜನರಿಗೆ ಸೋಂಕು ಬಂದಿದೆ. ಇಲ್ಲಿನ 35, 49, 52 ವರ್ಷದ ಮಹಿಳೆಯರು, 13 ವರ್ಷದ ಬಾಲಕಿ ಹಾಗೂ 20, 21, 30, 54, 70 ವರ್ಷದ ವ್ಯಕ್ತಿಗಳಿಗೆ ಸಂಪರ್ಕದಿಂದ ಸೋಂಕು ಬಂದಿದೆ.

ದುಗ್ಗಮ್ಮನ ದೇವಾಲಯದ ಬಳಿ 53 ವರ್ಷದ ವ್ಯಕ್ತಿ ಹಾಗೂ ಬಂಬೂ ಬಜಾರ್‌ನ 23 ಮತ್ತು 45 ವರ್ಷಗಳ ವ್ಯಕ್ತಿಗಳಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಜಯನಗರದ 34 ವರ್ಷದ ಮಹಿಳೆಗೆ ಸೋಂಕು ಬಂದಿದೆ.

ಎಂ.ಸಿ.ಸಿ. ಬಿ ಬ್ಲಾಕ್‌ನ 55 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ. ಬಸವರಾಜಪೇಟೆಯ ಇಜಾರ್‌ದಾರ್ ಗಲ್ಲಿಯ 41 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಕಾಯಿಪೇಟೆಯ 22 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ.

ದೇವರಾಜ ಅರಸ್ ಬಡಾವಣೆಯ 24 ವರ್ಷದ ಫ್ಲುದಿಂದ ಬಳಲುತ್ತಿದ್ದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ. ಪೊಲೀಸ್ ಕ್ವಾರ್ಟರ್ಸ್‌ನ 49 ವರ್ಷದ ವ್ಯಕ್ತಿ, ಜಯನಗರದ 65 ವರ್ಷದ ವೃದ್ಧೆಗೆ ಸೋಂಕು ಬಂದಿದೆ. ಇಮಾಮ್ ನಗರದ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಕುವೆಂಪು ನಗರದ 25 ವರ್ಷದ ವ್ಯಕ್ತಿ, ಡಿಸಿಎಂ ಲೇಔಟ್‌ನ 42 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ. ಇದೇ ಬಡಾವಣೆಯ 48 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ.

ವಿಜಯನಗರ ಬಡಾವಣೆಯ 38 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಇದೇ ಬಡಾವಣೆಯ 45 ವರ್ಷದ ಮಹಿಳೆ ಹಾಗೂ 52 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಅಹಮದ್ ನಗರದ 42 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಬಿ.ಎನ್‌. ಬಡಾವಣೆಯ 21 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.

ಎಸ್.ಪಿ.ಎಸ್. ನಗರದ 32 ವರ್ಷದ ವ್ಯಕ್ತಿ ಹಾಗೂ 29 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಆಂಜನೇಯ ಬಡಾವಣೆಯ 19 ಹಾಗೂ 55 ವರ್ಷದ ವ್ಯಕ್ತಿಗಳಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಕೆ.ಟಿ.ಜೆ. ನಗರದ 32 ಹಾಗೂ 33 ವರ್ಷದ ಮಹಿಳೆಯರಿಗೆ ಸಂಪರ್ಕದಿಂದ ಸೋಂಕು ಬಂದಿದೆ.

ಬೇತೂರು ರಸ್ತೆಯಲ್ಲಿ ಐದು ವರ್ಷದ ಹೆಣ್ಣು ಮಗು, 35 ವರ್ಷದ ಮಹಿಳೆ ಹಾಗೂ 16 ವರ್ಷದ ಯುವತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಇ.ಡಬ್ಲ್ಯೂ.ಎಸ್. ಕಾಲೋನಿಯಲ್ಲಿ 39 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಬಸವರಾಜಪೇಟೆಯ 30 ಹಾಗೂ 28  ವರ್ಷದ ಮಹಿಳೆಯರು ಹಾಗೂ 45, 28 ಮತ್ತು 29 ವರ್ಷದ ವ್ಯಕ್ತಿಗಳಿಗೆ ಸಂಪರ್ಕದಿಂದ ಸೋಂಕು ಬಂದಿದೆ.

ಶಿವಾಲಿ ಥಿಯೇಟರ್ ಬಳಿ 47 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಭರತ್ ಕಾಲೋನಿಯ 37 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ. ದೇವರಾಜ ಅರಸ್ ಬಡಾವಣೆಯ 28 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.

ಎಸ್.ಎಂ. ಕೃಷ್ಣ ನಗರದ 35 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ. ವೆಂಕಾಭೋವಿ ಕಾಲೋನಿಯ 68 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ.  ಅಮರಪ್ಪನ ತೋಟದ 41 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಇದೇ ಪ್ರದೇಶದಲ್ಲಿ ಫ್ಲುದಿಂದ ಬಳಲುತ್ತಿದ್ದ 62 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ. ಜಾಲಿನಗರದ 17 ವರ್ಷದ ಯುವಕನಿಗೆ ಸಂಪರ್ಕದಿಂದ ಸೋಂಕು ಬಂದಿದೆ. ವಿನಾಯಕ ನಗರದ 39 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.

ದಾವಣಗೆರೆ ತಾಲ್ಲೂಕು ಕಂದಗಲ್‌ನ 60 ವರ್ಷದ ವ್ಯಕ್ತಿ, ತುರ್ಚಘಟ್ಟದಲ್ಲಿ ಫ್ಲುದಿಂದ ಬಳಲುತ್ತಿದ್ದ 26 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ದೊಡ್ಡಬಾತಿಯ 20 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಆನೆಕೊಂಡದ 65 ವರ್ಷದ ವ್ಯಕ್ತಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಸೋಂಕು ಪತ್ತೆಯಾಗಿದೆ.

ತಾಲ್ಲೂಕಿನ ಆರನೇಕಲ್ಲಿನ 17 ವರ್ಷದ ಯುವಕನಿಗೆ ಸೋಂಕು ಬಂದಿದೆ. ಗೊಲ್ಲರಹಟ್ಟಿಯ 42 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ತೋಳಹುಣಸೆಯಲ್ಲಿ 48 ವರ್ಷದ ಮಹಿಳೆಗೆ ಸೋಂಕು ಬಂದಿದೆ. ಕೊಳೇನಹಳ್ಳಿಯ 42 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಚನ್ನಗಿರಿಯ ಪಿ.ಡಬ್ಲ್ಯೂ.ಡಿ. ಕಾಲೋನಿಯ 27 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಚನ್ನಗಿರಿ ತಾಲ್ಲೂಕು ಹಿರೇಗಂಗೂರಿನ 54 ವರ್ಷದ ಮಹಿಳೆ, ಕೆರೆಬಿಳಚಿಯ 52 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಹರಿಹರದ ಬಾಂಗ್ಲಾ ಬಡಾವಣೆಯ 32 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. 62 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.

ಹರಿಹರ ತಾಲ್ಲೂಕಿನ ಪ್ರಯಾಣದ ಹಿನ್ನೆಲೆಯಲ್ಲಿ ಯಲವಟ್ಟಿಯ 28, 36 ವರ್ಷದ ಮಹಿಳೆಯರು ಹಾಗೂ 23 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಹನಗವಾಡಿಯ 24 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ.

ತಾಲ್ಲೂಕಿನ ದೀಟೂರು ಗ್ರಾಮದ 27 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ಯಲವಟ್ಟಿಯಲ್ಲಿ ಪ್ರಯಾಣದ ಹಿನ್ನೆಲೆಯ 59 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ. ಮಲೇಬೆನ್ನೂರಿನಲ್ಲಿ ಸಂಪರ್ಕದಿಂದಾಗಿ 38 ವರ್ಷದ ಮಹಿಳೆಗೆ ಸೋಂಕು ಬಂದಿದೆ. ಮಲೇಬೆನ್ನೂರಿನ 31 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ನಂದಿತಾವರೆಯ 45 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಜಗಳೂರಿನ 65 ವರ್ಷದ ವ್ಯಕ್ತಿಗೆ ಸಂಪರ್ಕ ದಿಂದ ಸೋಂಕು ಬಂದಿದೆ. ಎಂ.ಎಂ. ರಸ್ತೆಯ 52 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಜಗಳೂರು ತಾಲ್ಲೂಕಿನ ತೋರಣಗಟ್ಟೆಯ 70 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಬಿಳಿಚೋಡಿನ 13 ವರ್ಷದ ಬಾಲಕ, 29 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ರಸ್ತೆ ಮಾಕುಂಟೆಯ 45 ವರ್ಷದ ಮಹಿಳೆಯಲ್ಲಿ ಸೋಂಕಿರುವುದು ಕಂಡು ಬಂದಿದೆ.

ಹೊನ್ನಾಳಿಯ ಎನ್.ಜಿ. ಗಲ್ಲಿಯಲ್ಲಿ ಫ್ಲುದಿಂದ ಬಳಲುತ್ತಿದ್ದ 44 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಹೊನ್ನಾಳಿ ತಾಲ್ಲೂಕಿನ ಜಿ. ಮಾದಾಪುರದ 24 ವರ್ಷದ ಮಹಿಳೆಗೆ ಸೋಂಕು ಬಂದಿದೆ. ರಾಂಪುರದ 32 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ದೊಡ್ಡಕೆರೆಯ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. 

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 40 ವರ್ಷದ ಮಹಿಳೆಯಲ್ಲಿ ಸೋಂಕಿರುವುದು ಪತ್ತೆಯಾಗಿದೆ.

70 ಜನರ ಬಿಡುಗಡೆ: ದಾವಣಗೆರೆ ಎಂ.ಸಿಸಿ. ಬಿ ಬ್ಲಾಕ್‌ನ 30 ವರ್ಷದ ಮಹಿಳೆ, ವಿದ್ಯಾನಗರದ 34 ವರ್ಷದ ಮಹಿಳೆ, ಬೀಡಿ ಲೇ ಔಟ್‌ನ 37 ವರ್ಷದ ಮಹಿಳೆ, 17 ವರ್ಷದ ಯುವತಿ, 45ರ ಪುರುಷ, 16ರ ಯುವಕ, 40ರ ಮಹಿಳೆ, 18ರ ಯುವತಿ, ಬಸಾಪುರದ 35ರ ಪುರುಷ, 26ರ ಮಹಿಳೆ, ನರಸರಾಜ ಪೇಟೆಯ 32ರ ಪುರುಷ,  ಬೀಡಿ ಲೇ ಔಟ್‌ನ 48ರ ಪುರುಷ, ಬಸಾಪುರದ 38ರ ಪುರುಷ, 

ಎಂ.ಸಿ.ಸಿ. ಎ ಬ್ಲಾಕ್‌ನ 45ರ ಪುರುಷ, 35ರ ಮಹಿಳೆ, ಕೆ.ಬಿ. ಬಡಾವಣೆಯ 46ರ ಪುರುಷ, ಮಹಮ್ಮದ್ ನಗರದ 62ರ ಪುರುಷ, ಮದೀನ್ ಆಟೋ ನಿಲ್ದಾಣದ 1ನೇ ಕ್ರಾಸ್‌ನ 68ರ ಪುರುಷ, ಕೆ.ಆರ್. ರಸ್ತೆಯ 45ರ ಪುರುಷ,  ಎಸ್.ಎಸ್.ಐ.ಎಂಎಸ್ ನರ್ಸಿಂಗ್ ಸಿಬ್ಬಂದಿ 35 ವರ್ಷದ ಪುರುಷ, ನಿಟುವಳ್ಳಿಯ ನಾಲ್ಕನೇ ಕ್ರಾಸ್‌ನ 55ರ ಮಹಿಳೆ,  ಭಗತ್ ಸಿಂಗ್ ನಗರದ 27ರ ಯುವಕ, ದೊಡ್ಡಬಾತಿಯ 54ರ ಮಹಿಳೆ, ಬಿಐಇಟಿ ರಸ್ತೆ ಎಂ.ಸಿ.ಸಿ. ಬಿ ಬ್ಲಾಕ್‌ನ  64ರ ಪುರುಷ, ಕೆ.ಬಿ. ಬಡಾವಣೆಯ 36ರ ಪುರುಷ, 49ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್‌ನ 8ನೇ ಮುಖ್ಯ ರಸ್ತೆಯಲ್ಲಿನ 32ರ ಪುರುಷ, ನರಸರಾಜ ಪೇಟೆಯ 26ರ ಯುವಕ, ಮುಸ್ತಫಾ ನಗರದ 63ರ ಪುರುಷ, ಡಿಸಿಬಿ ಬ್ಯಾಂಕ್‌ನ 40ರ ಪುರುಷ, ಡಾಬಾ ಬಳಿಯ 40ರ ಮಹಿಳೆ, ಭಾರತ್ ಕಾಲೋನಿ 11ನೇ ಕ್ರಾಸ್‌ನ 56ರ ಪುರುಷ,  ಬಿ.ಕಲಪನಹಳ್ಳಿಯ 64ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್‌ನ ಲೂರ್ಡ್ಸ್ ಬಾಯ್ಸ್ ಶಾಲೆ ಬಳಿ 30ರ ಯುವಕ, 

ಹರಪನಹಳ್ಳಿ ತಾಲ್ಲೂಕು ಕಂಚಿಕೆರೆಯ 45ರ ಪುರುಷ, ಜಗಳೂರು ತಾಲ್ಲೂಕು ಗೊಲ್ಲರಹಟ್ಟಿಯ 80ರ ವೃದ್ಧೆ, ಚಿಕ್ಕಬನ್ನಿಹಟ್ಟಿಯ 66 ವರ್ಷದ ಪುರುಷ, ಬಿದರಕೆರೆಯ 54 ವರ್ಷದ ಪುರುಷ, ಬಿಳಿಚೋಡು ಪೊಲೀಸ್ ಠಾಣೆಯ 30ರ ಪುರುಷ, ತೋರಣಘಟ್ಟೆಯ 21ರ ಯುವಕ, ನಳಂದ ಪಿಯು ಕಾಲೇಜಿನ 45 ವರ್ಷದ ಮಹಿಳೆ.

ಹರಿಹರ ತಾಲ್ಲೂಕು ಕೊಂಡಜ್ಜಿಯ ಬಾರಿಕರ್ ಓಣಿಯ 28ರ ಯುವತಿ, 45ರ ಮಹಿಳೆ. ಮಲೇಬೆನ್ನೂರಿನ 6, 5 ಹಾಗೂ 17 ವರ್ಷದ ಬಾಲಕರು, 22, 42ರ ಮಹಿಳೆ, 44, 48, 38 ವರ್ಷದ ಪುರುಷರು, ಹಳ್ಳಳ್ಳಿಯ 60ರ ಪುರುಷ.

ಚನ್ನಗಿರಿ ತಾಲ್ಲೂಕಿನ ದಿಗ್ಗೇನಹಳ್ಳಿಯ 46 ವರ್ಷದ ಮಹಿಳೆ, ತಣಿಗೆರೆ 35ರ ಮಹಿಳೆ, 61, 40, 65 ವರ್ಷದ ಪುರುಷರು, 20, 39 ವರ್ಷದ ಮಹಿಳೆ, 28 ವರ್ಷದ ಮಹಿಳೆ, 5 ವರ್ಷದ ಬಾಲಕಿ, 32ರ ಪುರುಷ,  14ರ ಬಾಲಕ, 45ರ ಮಹಿಳೆ, 45ರ ಪುರುಷ, ಸಂತೇಬೆನ್ನೂರಿನ 61 ವರ್ಷದ ಪುರುಷ. ಇವರೆಲ್ಲಾ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

error: Content is protected !!