ದಾವಣಗೆರೆ,ಜು.19- ಸ್ಥಳೀಯ ಲಾಡ್ಜಿಂಗ್ ಉದ್ದಿಮೆದಾರರು ಮತ್ತು ಹೋಟೆಲ್ ಉದ್ದಿಮೆ ದಾರರ ಸಂಘದ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರನ್ನು ಸನ್ಮಾನಿಸಲಾಯಿತು. ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವಾರಿಯ ರ್ಸ್ ಗೆ ಹೋಟೆಲ್ ಅಪೂರ್ವ ಸಭಾಂಗಣದಲ್ಲಿ ಮೊನ್ನೆ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನಿತರಾಗಿದ್ದ ಎಸ್ಪಿ ಹನುಮಂತರಾಯ ಅವರು ತಮ್ಮ ಕರ್ತವ್ಯದ ಒತ್ತಡದ ಹಿನ್ನೆಲೆಯಲ್ಲಿ ಗೈರು ಹಾಜರಾದ ಕಾರಣ, ಅವರ ಕಚೇರಿಯಲ್ಲಿ ಇಂದು ಭೇಟಿ ಮಾಡಿದ ಹೋಟೆಲ್ ಉದ್ಯಮಿದಾರರು, ಹನುಮಂತರಾಯ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಿದರು. ಹೋಟೆಲ್ ಉದ್ಯಮಿದಾರರ ಸಂಘದ ಅಧ್ಯಕ್ಷರೂ ಆದ ಹಿರಿಯ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಅವರು ಹನುಮಂತರಾಯ ಅವರನ್ನು ಸನ್ಮಾನಿಸಿದರು. ಶಂಕರ್ ಕಂಫರ್ಟ್ ನ ಜಗದೀಶ್, ಜನತಾ ಹೋಟೆಲ್ ನ ಕೆ.ವಿ. ವಿಠಲ್, ಶ್ರಮಜೀವಿ ಲಾಡ್ಜ್ ನ ಸಿಂಗ್, ಗಣೇಶ್, ಸಂಜಯ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
December 26, 2024