ದಾವಣಗೆರೆ, ಜು.17- ಯುವ ವಿಜ್ಞಾನಿ ಎಂದು ಗುರುತಿಸಿಕೊಂಡಿರುವ ಮಂಡ್ಯದ ಡ್ರೋನ್ ಪ್ರತಾಪ್ 8 ದಿನಗಳ ಕಾಲ ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಹೂಡಿದ್ದರೆಂಬ ವಿಚಾರ ತಡವಾಗಿ ತಿಳಿದು ಬಂದಿದೆ.
ಪ್ರತಾಪ್ ಕಾಗೆ ಡ್ರೋನ್ ಎನ್ನುವ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿರುವ ಹೊತ್ತಿನಲ್ಲೇ ನಗರದ ಹೋಟೆಲ್ನಲ್ಲಿ ವಾಸ್ತವ್ಯವಿದ್ದರು ಎನ್ನುವ ಸುದ್ದಿ ಹೋಟೆಲ್ ಮಾಲೀಕರಿಂದ ಬಯಲಾಗಿದೆ.
ಇದೇ ಜುಲೈ 1ರಿಂದ 8ರವರೆಗೂ ಡ್ರೋನ್ ಪ್ರತಾಪ್ ತಮ್ಮ ಹೋಟೆಲ್ನಲ್ಲಿ ಉಳಿದಿದ್ದು, ಅಲ್ಲಿವರೆಗೂ ನಗರದಲ್ಲೆ ಇದಿದ್ದು ನಿಜ. ಡ್ರೋನ್ ಪ್ರತಾಪ್ ತಮ್ಮ ಹೋಟೆಲ್ನಲ್ಲಿ ಉಳಿದಿದ್ದು ಇದೇ ಮೊದಲಲ್ಲ. ಕಳೆದ ಜೂನ್ ತಿಂಗಳಲ್ಲೂ ಬಂದಿದ್ದರು ಎಂದು ಶ್ರೀಗಂಧ ರೆಸಿಡೆನ್ಸಿ ಹೋಟೆಲ್ ಮಾಲೀಕ ವಿನಾಯಕ್ ಖಚಿತಪಡಿಸಿದ್ದಾರೆ.
ಹೋಟೆಲ್ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೋನ್ ಮಾಡಿ ಡಿಆರ್ಡಿಒನಲ್ಲಿ ಉದ್ಯೋಗ ಆಫರ್ ಮಾಡಿದ್ದರು. ನಾನೇ ಅದನ್ನು ನಿರಾಕರಿಸಿದೆ. ಅದಕ್ಕೆ ನನ್ನ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಬರುತ್ತವೆ ಎಂಬುದಾಗಿ ಪ್ರತಾಪ್ ಮೊದಲೇ ಹೇಳಿದ್ದರು ಎಂದು ವಿನಾಯಕ್ ತಿಳಿಸಿದ್ದಾರೆ.
ಜುಲೈ 8ರಂದು ಹೋಟೆಲ್ ಖಾಲಿ ಮಾಡಿ ಬೆಂಗಳೂರಿಗೆ ಹೋದರು. ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಹರಿದಾಡಿದ ವಿಡಿಯೋಗಳನ್ನು ನೋಡಿದೆ. ಈ ಬಗ್ಗೆ ಅವರಿಗೂ ವಿಡಿಯೋ ಶೇರ್ ಮಾಡಿದ್ದೇನೆ. ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಹಿತಿ ಹೊರ ಹಾಕಿದ್ದಾರೆ.