ದಾವಣಗೆರೆ, ಜು.17 – ಜಿಲ್ಲೆಯಲ್ಲಿ ಶುಕ್ರವಾರ 31 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಇದೇ ದಿನ 50 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದೇ ದಿನದಂದು ಇಬ್ಬರು ಮೃತರಲ್ಲಿ ಸೋಂಕಿರು ವುದು ಕಂಡು ಬಂದಿದೆ.
ಶುಕ್ರವಾರ ಕಂಡು ಬಂದ ಸೋಂಕಿತರಲ್ಲಿ ದಾವಣಗೆರೆಯ 17, ಹರಿಹರದ ಏಳು, ಜಗಳೂರಿನ ಐದು, ಚನ್ನಗಿರಿ ಹಾಗೂ ಹೊನ್ನಾಳಿಯ ತಲಾ ಒಬ್ಬರಿದ್ದಾರೆ.
ಇದೇ ದಿನದಂದು ದಾವಣಗೆರೆಯ 14, ಹರಿಹರದ ಐದು, ಜಗಳೂರಿನ 21, ಚನ್ನಗಿರಿಯ ಒಬ್ಬರು ಹಾಗೂ ಹೊನ್ನಾಳಿಯ ಒಂಭತ್ತು ಜನರು ಬಿಡುಗಡೆಯಾಗಿದ್ದಾರೆ.
ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ ಇಂದಿರಾ ನಗರದ 43 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅವರು ರಕ್ತದೊತ್ತಡ ಹಾಗೂ ಸಕ್ಕರೆಯ ಕಾಯಿಲೆಯಿಂದ ಬಳಲುತ್ತಿದ್ದರು.
ದಾವಣಗೆರೆ ನಗರದ ದೇವರಾಜ ಅರಸ್ ಬಡಾವಣೆಯ 62 ವರ್ಷದ ವ್ಯಕ್ತಿ ಸಾನ್ನಪ್ಪಿದ್ದಾರೆ. ಅವರು ರಕ್ತದೊತ್ತಡ ಹಾಗೂ ಹೃದಯ ರೋಗದಿಂದ ಬಳಲುತ್ತಿದ್ದರು.
ದಾವಣಗೆರೆ ನಗರದ ದೇವರಾಜ ಅರಸ್ ಬಡಾವಣೆಯ 62 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ. ಜಾಲಿನಗರದಲ್ಲಿ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ 35 ವರ್ಷದ ಮಹಿಳೆ, ಬಡಾವಣೆ ಠಾಣೆಯ 40 ವರ್ಷದ ವ್ಯಕ್ತಿ, ದೇವರಾಜ ಅರಸ್ ಬಡಾವಣೆಯ 27 ವರ್ಷದ ಮಹಿಳೆ, ಆಂಜನೇಯ ಬಡಾವಣೆಯ ಪ್ರಯಾಣದ ಹಿನ್ನೆಲೆಯ 31 ವರ್ಷದ ವ್ಯಕ್ತಿ, ಮುಸ್ತಫಾ ನಗರದ ಫ್ಲು ಹೊಂದಿರುವ 63 ವರ್ಷದ ವ್ಯಕ್ತಿಯಲ್ಲಿ ಸೋಂಕಿರುವುದು ಕಂಡು ಬಂದಿದೆ.
ನಗರದ ದುಗ್ಗಮ್ಮನ ಪೇಟೆಯ 53 ವರ್ಷದ ಮಹಿಳೆಗೆ ಸಂಪರ್ಕದಿಂದ, ಪ್ರವಾಸದ ಹಿನ್ನೆಲೆ ಹೊಂದಿದ್ದ ಸಿದ್ದವೀರಪ್ಪ ಬಡಾವಣೆಯ 64 ವರ್ಷದ ವ್ಯಕ್ತಿ, ಪ್ರವಾಸದ ಹಿನ್ನೆಲೆ ಹೊಂದಿದ ಶಾಂತಿನಗರದ 45 ವರ್ಷದ ಮಹಿಳೆಗೆ ಸೋಂಕು ಬಂದಿದೆ. ಆಜಾದ್ ನಗರದ 34 ವರ್ಷದ ಮಹಿಳೆಗೆ ಸಂಪರ್ಕದಿಂದ ಸೋಂಕು ಬಂದಿದೆ.
ನಗರದ ಕುರುಬರಕೇರಿಯ 44 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಹಾಗೂ 20 ವರ್ಷದ ಮಹಿಳೆ, ಕುರುಬರ ಕೇರಿಯ 47 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಬೀಡಿ ಲೇಔಟ್ನ 44 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ಬಂದಿದೆ. ವಿಜಯನಗರ ಬಡಾವಣೆಯ 30 ವರ್ಷದ ಮಹಿಳೆ ಹಾಗೂ ಬೀಡಿ ಲೇಔಟ್ನ 40 ವರ್ಷದ ಮಹಿಳೆ ಫ್ಲುದಿಂದ ಬಳಲುತ್ತಿದ್ದು ಅವರಲ್ಲಿ ಸೋಂಕು ಕಂಡು ಬಂದಿದೆ.
ಚನ್ನಗಿರಿ ತಾಲ್ಲೂಕಿನ ಕಂಚುಗಾರನಹಳ್ಳಿಯಲ್ಲಿ ಫ್ಲು ಹೊಂದಿದ್ದ 48 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ. ಹೊನ್ನಾಳಿಯಲ್ಲಿ 37 ವರ್ಷದ ವ್ಯಕ್ತಿಯಲ್ಲಿ ಸಂಪರ್ಕದ ಕಾರಣದಿಂದ ಸೋಂಕು ಉಂಟಾಗಿದೆ. ಜಗಳೂರಿನ ಜೆ.ಸಿ.ಆರ್. ಬಡಾವಣೆಯ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.
ಜಗಳೂರು ತಾಲ್ಲೂಕಿನ ದೇವಿಕೆರೆಯಲ್ಲಿ 19 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ ಹಾಗೂ 62 ವರ್ಷದ ಮಹಿಳೆಗೆ ಸೋಂಕು ಬಂದಿದೆ. ಫ್ಲುದಿಂದ ಬಳಲುತ್ತಿದ್ದ ಬೈರನಹಳ್ಳಿಯ 65 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ. ತಾಲ್ಲೂಕಿನ ಬೈರನಹಳ್ಳಿಯಲ್ಲಿ 79 ವರ್ಷದ ವೃದ್ಧೆಯಲ್ಲಿ ಸೋಂಕು ಕಂಡು ಬಂದಿದೆ.
ಹರಿಹರದಲ್ಲಿ ನಾಲ್ವರಿಗೆ ಕೊರೊನಾ ಸೋಂಕು : ನಗರದಲ್ಲಿ ಇಂದು ನಾಲ್ಕು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದರು.
ನಗರದ ಕೆ.ಆರ್. ನಗರ ಬಡಾವಣೆಯಲ್ಲಿ ಎರಡು, ಪಾಮೇನಹಳ್ಳಿಯಲ್ಲಿ ಓರ್ವ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. 84 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಹರಿಹರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಡಾ. ವಿಶ್ವನಾಥ್, ಎಂ. ವಿ. ಹೊರಕೇರಿ ಹಾಗೂ ಇತರರು ಹಾಜರಿದ್ದರು.
ರಾಣೇಬೆನ್ನೂರು ; ದಾದಿ, ಆಯಾ ಸೇರಿ 34 ಸೋಂಕಿತರು : ಇಲ್ಲಿನ ಹೆರಿಗೆ ಆಸ್ಪತ್ರೆಯ ದಾದಿ, ಆಯಾ ಹಾಗೂ ಮದುವೆ ಮನೆಯಲ್ಲಿ ನೆರೆದಿದ್ದ 32 ಜನರಿಗೆ ಕೊರೊನಾ ವೈರಸ್ ತಗಲಿದ್ದು, ಇಂದು ಅವರೆಲ್ಲರ ವರದಿ ಪಾಸಿಟಿವ್ ಬಂದಿದೆ ಎಂದು ಗೊತ್ತಾಗಿದೆ. ಜೂನ್ ತಿಂಗಳ 29 ರಂದು 55 ವರ್ಷದ ಮಾರುತಿ ನಗರದ ವ್ಯಕ್ತಿಯೊಬ್ಬರು ಮಗನ ಮದುವೆ ಮಾಡಿದ್ದರು. ಅವರಿಗೆ ಅಂದೇ ಜ್ವರ ಕಾಣಿಸಿಕೊಂಡಿದ್ದರಿಂದ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಫಲಕಾರಿಯಾಗದೆ ಅವರು ಜು 2 ರಂದು ಅಲ್ಲಿಯೇ ನಿಧನರಾಗಿದ್ದರು. ಜು 11 ರಂದು ವಧುವಿನ ತಾಯಿ ನಿಧನರಾದರು. ಆ ಮದುವೆಯಲ್ಲಿ ಪಾಲ್ಗೊಂಡಿದ್ದ ಇತರರ ಗಂಟಲು ದ್ರವ ತೆಗೆದುಕೊಂಡು ಪರೀಕ್ಷೆಗೆ ಕಳಿಸಲಾಗಿತ್ತು. 32 ಜನರಿಗೆ ಸೋಂಕು ತಗಲಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿನ ಸರ್ಕಾರಿ ಹೆರಿಗೆ ಆಸ್ಪತ್ರೆಯ ಓರ್ವ ಸ್ಟಾಫ್ ನರ್ಸ್ ಹಾಗೂ ಓರ್ವ ಡಿ ಗ್ರೂಪ್ ನೌಕರಳಿಗೆ ಸೋಂಕು ಕಂಡು ಬಂದಿದ್ದು, ಆಸ್ಪತ್ರೆಯನ್ನ ಇಂದು ಬಂದ್ ಮಾಡಲಾಯಿತು. ನಾಳೆ ಕ್ರಿಮಿನಾಶಕ ಸಿಂಪಡಿಸಿ ಆಸ್ಪತ್ರೆಯನ್ನು ತೆರೆಯಲಾಗುವುದು ಎಂದು ಹೇಳಲಾಗಿದೆ.
ಮೊದಲು ಹಸಿರು ಪಟ್ಟಿಯಲ್ಲಿದ್ದ ತಾಲ್ಲೂಕು ಈಗ ಕೆಂಪು ಪಟ್ಟಿಯನ್ನು ಮೀರಿ ನಡೆದಿದೆ. ಇದರ ಅರಿವು ಜನರಿಗೆ ಬರಬೇಕಿದೆ. ಸ್ವಯಂ ಎಚ್ಚರ ಪ್ರತಿಯೊಬ್ಬರಿಗೂ ಬೇಕಿದೆ. ಈ ದಿಸೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ತಾಲ್ಲೂಕಿನ ಜನತೆಯ ಆರೋಗ್ಯ ರಕ್ಷಣೆಗಾಗಿ ಪ್ರಯತ್ನ ನಡೆಸಬೇಕಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹರಿಹರದ ಜೆ.ಸಿ. ಬಡಾವಣೆಯಲ್ಲಿ 42 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಮರಾಠ ಗಲ್ಲಿಯಲ್ಲಿ 53 ವರ್ಷದ ಮಹಿಳೆಯಲ್ಲಿ ಸಂಪರ್ಕದ ಕಾರಣದಿಂದಾಗಿ ಸೋಂಕು ಬಂದಿದೆ. ಇಂದಿರಾ ನಗರದ 25 ವರ್ಷ ಮಹಿಳೆ, 35 ವರ್ಷದ ಮಹಿಳೆ ಹಾಗೂ ಮಜ್ಜಿಗಿ ಬಡಾವಣೆಯ 11 ವರ್ಷದ ಬಾಲಕನಲ್ಲಿ ಸಂಪರ್ಕದ ಕಾರಣದಿಂದ ಸೋಂಕು ಬಂದಿದೆ.
ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ ಇಂದಿರಾ ನಗರದಲ್ಲಿ ಉಸಿರಾಟದ ಸಮಸ್ಯೆ ಇದ್ದ 43 ವರ್ಷದ ಮಹಿಳೆಯಲ್ಲಿ ಹಾಗೂ 44 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.
ಶುಕ್ರವಾರದಂದು 50 ಜನರು ಸೋಂಕಿನಿಂದ ಗುಣಮುಖರಾಗಿದ್ದು ಬಿಡುಗಡೆಯಾಗಿದ್ದಾರೆ.
ದಾವಣಗೆರೆಯ ಕುರುಬರಕೇರಿಯ 41 ವರ್ಷದ ವ್ಯಕ್ತಿ, ಕೆ.ಟಿ.ಜೆ. ನಗರದ 36 ಹಾಗೂ 65 ವರ್ಷದ ಮಹಿಳೆಯರು, ಸರಸ್ವತಿ ನಗರದ 30 ವರ್ಷದ ವ್ಯಕ್ತಿ, ಆಜಾದ್ ನಗರದ 34 ವರ್ಷದ ವ್ಯಕ್ತಿ ಹಾಗೂ 31 ವರ್ಷದ ಮಹಿಳೆ, ಶಂಕರನಾರಾಯಣ ವಿಹಾರದ 61 ವರ್ಷದ ವ್ಯಕ್ತಿ, ಕಿರುವಾಡಿ ಬಡಾವಣೆಯ 45 ವರ್ಷದ ಮಹಿಳೆ, ಆಜಾದ್ ನಗರದ 58 ಹಾಗೂ 37 ವರ್ಷದ ಮಹಿಳೆಯರು, ಕುರುಬರ ಕೇರಿಯ 37 ವರ್ಷದ ವ್ಯಕ್ತಿ, ಆವರಗೆರೆಯ 30 ವರ್ಷದ ವ್ಯಕ್ತಿ ಸೇರಿದ್ದಾರೆ.
ದಾವಣಗೆರೆ ತಾಲ್ಲೂಕಿನ ಬಿ. ಕಲಪನಹಳ್ಳಿಯ 55 ವರ್ಷದ ಮಹಿಳೆ ಗುಣವಾಗಿದ್ದಾರೆ.
ಹರಿಹರದ ವಿನಾಯಕ ನಗರದ 32 ವರ್ಷದ ಮಹಿಳೆ, ಹರಿಹರ ತಾಲ್ಲೂಕಿನ ಕೊಂಡಜ್ಜಿ ಕ್ಯಾಂಪ್ನ 24 ವರ್ಷದ ಮಹಿಳೆ, ಹರಿಹರದ ವಿನಾಯಕ ನಗರದ 12 ಹಾಗೂ 14 ವರ್ಷದ ಬಾಲಕಿಯರು, 33 ವರ್ಷದ ಮಹಿಳೆ ಬಿಡುಗಡೆಯಾಗಿದ್ದಾರೆ.
ಹೊನ್ನಾಳಿಯ 36, 48, ಹಾಗೂ 50 ವರ್ಷದ ವ್ಯಕ್ತಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠದ 17 ವರ್ಷದ ಯುವಕ, ಕಲ್ಕೆರೆಯ 16 ವರ್ಷದ ಯುವತಿ, ದುರ್ಗಿ ಗುಡಿಯ 25 ವರ್ಷದ ವ್ಯಕ್ತಿ, ಎಸ್. ಮಲ್ಲಾಪುರದ 23 ವರ್ಷದ ವ್ಯಕ್ತಿ ಹಾಗೂ ಹೆಚ್.ಜಿ. ಹಳ್ಳಿಯ 23 ವರ್ಷದ ವ್ಯಕ್ತಿ ಬಿಡುಗಡೆಯಾಗಿದ್ದಾರೆ.
ಜಗಳೂರಿನ ಮೂಡಲಮಾಚಿಕೆರೆಯ 24 ವರ್ಷದ ವ್ಯಕ್ತಿ ಹಾಗೂ 32 ವರ್ಷದ ಮಹಿಳೆ, ಚಿಕ್ಕರಕೆರೆಯ 29 ವರ್ಷದ ಮಹಿಳೆ, ದೊಡ್ಡಲಿಂಗದಹಳ್ಳಿಯ 42 ವರ್ಷದ ವ್ಯಕ್ತಿ ಹಾಗೂ ಮೆದಿಕೇರನಹಳ್ಳಿಯ 18 ವರ್ಷದ ವ್ಯಕ್ತಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಗಳೂರಿನ ಹಳೆ ಎ.ಕೆ. ಕಾಲೋನಿಯ 65 ವರ್ಷದ ಮಹಿಳೆ, 15 ವರ್ಷದ ಯುವತಿ ಹಾಗೂ ಜೆ.ಸಿ.ಆರ್. ಬಡಾವಣೆಯ 35 ವರ್ಷದ ವ್ಯಕ್ತಿ ಗುಣವಾಗಿ ಬಿಡುಗಡೆಯಾಗಿದ್ದಾರೆ.
ಜಗಳೂರಿನ ಹಳೆ ಎ.ಕೆ. ಕಾಲೋನಿಯ 23, 18 ಹಾಗೂ 16 ವರ್ಷದ ಮಹಿಳೆಯರು, 10 ವರ್ಷದ ಬಾಲಕ, 65 ವರ್ಷದ ವೃದ್ಧೆ ಗುಣವಾಗಿದ್ದಾರೆ.
ಜಗಳೂರು ತಾಲ್ಲೂಕಿನ ಅಸಗೋಡಿನ 75 ವರ್ಷದ ವೃದ್ಧೆ, ಲಿಂಗದಹಳ್ಳಿಯ ಐದು ವರ್ಷದ ಬಾಲಕಿ ಹಾಗೂ 27 ವರ್ಷದ ಮಹಿಳೆ ಹಾಗೂ ಮೆದಿಕೇರನಹಳ್ಳಿಯ 20 ವರ್ಷದ ಮಹಿಳೆ ಬಿಡುಗಡೆಯಾಗಿದ್ದಾರೆ.