ಆರೋಗ್ಯ ಇಲಾಖೆ ಹೊರಗುತ್ತಿಗೆ §ಡಿ’ ಗ್ರೂಪ್ ನೌಕರರ ಪ್ರತಿಭಟನೆ
ದಾವಣಗೆರೆ, ಅ.21- ಏಳು ತಿಂಗಳ ಬಾಕಿ ವೇತನವನ್ನು ಶೀಘ್ರವೇ ಪಾವತಿಸುವಂತೆ ಆಗ್ರಹಿಸಿ ಜಿಲ್ಲೆಯ ಆರೋಗ್ಯ ಇಲಾಖೆಯ ಹೊರಗುತ್ತಿಗೆ §ಡಿ’ ಗ್ರೂಪ್ ನೌಕರರು ಜಿಲ್ಲಾಡಳಿತಕ್ಕೆ ಮೊನ್ನೆ ಮನವಿ ಸಲ್ಲಿಸಿದರು.
ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಯಾವುದೇ ವಾರದ ರಜೆ ಇಲ್ಲದೆ ರೋಗಿಗಳ ಹಾಗೂ ಶಂಕಿತರ ಉಸ್ತುವಾರಿ ನೋಡಿಕೊಳ್ಳಲು ಸರಿಯಾದ ಸುರಕ್ಷಿತ ಸಾಮಗ್ರಿಗಳಿಲ್ಲದೇ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದರೂ, ಇದುವರೆಗೂ ಯಾವುದೇ ಕೋವಿಡ್-19 ವಿಶೇಷ ಭತ್ಯೆ ಸಿಕ್ಕಿಲ್ಲ. ಮಾರ್ಚ್ ತಿಂಗಳಿಂದಲೂ ವೇತನ ಪಾವತಿಯಾಗಿಲ್ಲ. ಇಎಸ್ಐ-ಪಿಎಫ್ ಸಹ ಸರಿಯಾಗಿ ಕಟ್ಟಿಲ್ಲ. ಇಂತಹ ಸಂದರ್ಭದಲ್ಲಿ ನಮಗೆ ದಿನ ನಿತ್ಯದ ಜೀವನ ನಡೆಸುವುದು ಕೂಡ ತುಂಬಾ ಕಷ್ಟಕರವಾಗಿದೆ ಎಂದು ಅಳಲಿಟ್ಟರು.
ಈ ಬಗ್ಗೆ ಈಗಾಗಲೇ ನಿಮಗೆ ಮನವಿ ಸಲ್ಲಿ ಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಾವು 7 ತಿಂಗಳಿಂದ ಸಂಬಳವಿಲ್ಲದೇ ರೇಷನ್ ಅಂಗಡಿ ಯಲ್ಲಿ, ಸಾಲಗಾರರ ಬಳಿ, ಸಂಘ – ಸಂಸ್ಥೆಗಳಲ್ಲಿ ಸಾಲವನ್ನು ಪಡೆದಿದ್ದು, ಅವರೆಲ್ಲಾ ನಮ್ಮ ಮನೆ ಬಾಗಿಲಿಗೆ ಬಂದು ಸಾಲ ಮರುಪವತಿಗೆ ಬೆದರಿಕೆ ಹಾಕುತ್ತಿದ್ದಾರೆ. ದಿನಕ್ಕೆ ಒಂದು ಬಾರಿ ಊಟಕ್ಕೂ ಸಹ ಇನ್ನೊಬರ ಬಳಿ ಕೇಳುವಂತಾಗಿದೆ. ಆದ್ದ ರಿಂದ ನಮಗೆ ತಕ್ಷಣವೇ 7 ತಿಂಗಳ ಸಂಬಳವನ್ನು ಪಾವತಿ ಮಾಡಿಸಬೇಕು. ಅಲ್ಲಿಯವರೆಗೂ ನಾವು ಕೆಲಸ ಮಾಡುವುದಿಲ್ಲವೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್ ಅವರು ಸಹ ಬೆಂಬಲ ನೀಡಿದ್ದರು. ಸುಮಾ ತಳವಾರ್, ಎ.ಎಂ. ಕುಸುಮ, ಎಂ. ಮನೋಜ್ ಕುಮಾರ್, ಎಂ. ಅವಿನಾಶ್, ಎಂ. ಸಿದ್ದೇಶ್, ಎಸ್. ದೇವರಾಜ್ ಗೌಡ ಸೇರಿದಂತೆ ಇತರರು ಇದ್ದರು.