ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ನಗರದ ಶ್ರೀ ವೈಷ್ಣವಿಚೇತನ ಪದವಿ ಪೂರ್ವ ಕಾಲೇಜು, ವಿಶ್ವಚೇತನ ಕಾಲೇಜು, ತರಳಬಾಳು ಅನುಭವ ಮಂಟಪ, ಸಿದ್ಧಗಂಗಾ ಕಾಲೇಜು, ಸರ್ ಎಂ.ವಿ. ಪಿಯು.ಕಾಲೇಜು ಸಿದ್ದೇಶ್ವರ, ಅನ್ಮೋಲ್, ಸೈನ್ಸ್ ಅಕಾಡೆಮಿ ಹಾಗೂ ಹರಪನಹಳ್ಳಿಯ ಎಸ್.ಜೆ.ಎಂ.ಪಿ.ಯು. ಕಾಲೇಜು, ಎಸ್.ಎಸ್. ಜೈನ್ ಕಾಲೇಜು, ಶ್ರೀಬಂಗಿ ಬಸಪ್ಪ ವಿಜ್ಞಾನ ಕಾಲೇಜು, ಅರಸೀಕೆರೆಯ ಎಸ್ಎಂಸಿಕೆ. ಪದವಿ ಪೂರ್ವ ಕಾಲೇಜು, ಶ್ರೀ ತೋಂಟದಾರ್ಯ ಪದವಿ ಪೂರ್ವ ಕಾಲೇಜು, ರಾಣೇಬೆನ್ನೂರಿನ ರೋಟರಿ ಪದವಿ ಪೂರ್ವ ಕಾಲೇಜು, ದೇವಿಕಾ ಪಿಯು ಕಾಲೇಜು ಉತ್ತಮ ಫಲಿತಾಂಶ ಪಡೆದಿವೆ.
ವೈಷ್ಣವಿಚೇತನ ಪಿಯು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ : ನಗರದ ಶ್ರೀ ವೈಷ್ಣವಿಚೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ. ಉನ್ನತ ಶ್ರೇಣಿಯನ್ನು 302 ವಿದ್ಯಾರ್ಥಿಗಳು ಪಡೆದಿದ್ದಾರೆ. ಪ್ರಥಮ ಶ್ರೇಣಿಯನ್ನು 352 ವಿದ್ಯಾರ್ಥಿಗಳು ಪಡೆದಿದ್ದಾರೆ. ಅನೇಕ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಶೇಕಡ 100 ಕ್ಕೆ 100 ರಷ್ಟು ಫಲಿತಾಂಶ ಪಡೆದಿದ್ದಾರೆ.
ಐಶ್ವರ್ಯರಾಣಿ ಎಸ್.ಶೀರೂರು ಮತ್ತು ಡಿ.ಸಹನ ಅವರುಗಳು 600 ಕ್ಕೆ 588 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆೆ. ಹೆಚ್.ಎಸ್.ಪ್ರಕೃತಿ 600 ಕ್ಕೆ 586 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾಳೆ. ರಿಷಿ ಪಿ.ಜೈನ್ 600 ಕ್ಕೆ 584 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ವಿಶ್ವಚೇತನ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ : ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ. ಉನ್ನತ ಶ್ರೇಣಿಯನ್ನು 111 ವಿದ್ಯಾರ್ಥಿಗಳು ಪಡೆದಿದ್ದಾರೆ. ಪ್ರಥಮ ಶ್ರೇಣಿಯನ್ನು 162 ವಿದ್ಯಾರ್ಥಿಗಳು ಪಡೆದಿದ್ದಾರೆ ಹಾಗೂ ಅನೇಕ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಶೇಕಡ 100 ಕ್ಕೆ 100 ರಷ್ಟು ಫಲಿತಾಂಶ ಪಡೆದಿದ್ದಾರೆ.
ವಿ.ಎಂ. ಭೂಮಿಕಾ ಆಚಾರ್ 600 ಕ್ಕೆ 588 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಎಸ್.ಎಂ.ಪೂಜಾ 600 ಕ್ಕೆ 586 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾಳೆ. ಡಿ.ಆರ್.ನಯನ 600ಕ್ಕೆ 583 ಅಂಕಗಳನ್ನು ಪಡೆದು ತೃತಿಯ ಸ್ಥಾನ ಪಡೆದಿದ್ದಾಳೆ.
ದ್ವಿತೀಯ ಪಿಯುಸಿ : ಸಿದ್ಧಗಂಗಾ ಕಾಲೇಜಿಗೆ ಶೇ.96 ರಷ್ಟು ಫಲಿತಾಂಶ, ಟಾಪರ್ ಗಿ. ನಾಗಸಾಯಿಗೆ 588 ಉದಯ್ ಹೆಚ್. ಜಿಲ್ಲೆಗೆ ಪ್ರಥಮ : ನಗರದ ಸಿದ್ಧಗಂಗಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಕಾಲೇಜಿಗೆ ಶೇ. 96ರಷ್ಟು ಫಲಿತಾಂಶ ಲಭಿಸಿದೆ.
ಗಿ. ನಾಗಸಾಯಿ 600 ಕ್ಕೆ 588 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕನ್ನಡ 96, ಇಂಗ್ಲಿಷ್ 94, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 100, ಶೇಕಡ 98 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ.
ಕಾಲೇಜಿನ ಒಟ್ಟು 746 ಮಕ್ಕಳಲ್ಲಿ ಭೌತಶಾಸ್ತ್ರದಲ್ಲಿ 2, ರಸಾಯನ ಶಾಸ್ತ್ರದಲ್ಲಿ 4, ಗಣಿತ 81, ಜೀವಶಾಸ್ತ್ರ 7, ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ 1 ಹೀಗೆ 95 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದು ವಿದ್ಯಾರ್ಥಿಗಳು ದಾಖಲೆ ನಿರ್ಮಿಸಿದ್ದಾರೆ.
ಉದಯ್ ಹೆಚ್. ದುಮ್ಮಿನಾಳ್ ಭೌತಶಾಸ್ತ್ರ 100 ರಸಾಯನ ಶಾಸ್ತ್ರ 100 ಗಣಿತ 100 ಜೀವಶಾಸ್ತ್ರ 100 ಹೀಗೆ 400 ಕ್ಕೆ 400 ಅಂಕ ಪಡೆದು ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದ್ದಾನೆ.
33 ಮಕ್ಕಳು ಶೇ.95 ಕ್ಕಿಂತ ಹೆಚ್ಚು, 165 ಮಕ್ಕಳು ಶೇ.90 ಕ್ಕಿಂತ ಹೆಚ್ಚು, ಒಟ್ಟು 308 ಮಕ್ಕಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ. ಕಬ್ಬಿಣದ ಕಡಲೆ ಎಂದೇ ಬಿಂಬಿತವಾಗಿರುವ ಗಣಿತದಲ್ಲಿ 81 ಮಕ್ಕಳು 100 ಕ್ಕೆ 100 ಪಡೆದು ಸಿದ್ಧಗಂಗೆಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಠಿಸಿದ್ದಾರೆ.
ತರಳಬಾಳು ಅನುಭವ ಮಂಟಪ ಕಾಲೇಜಿಗೆ ಶೇ.100 ಫಲಿತಾಂಶ : ನಗರದ ಶ್ರೀ ತರಳಬಾಳು ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 100ಕ್ಕೆ 100 ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಕೆ.ಮಂದಾರ 600 ಅಂಕಗಳಿಗೆ 569 ಅಂಕಗಳನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ಅಭಿಷೇಕ್ ಎ.ಜಾಧವ್ 600 ಅಂಕಗಳಿಗೆ 579 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. 68 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 108 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಗಣಿತ ಶಾಸ್ತ್ರದಲ್ಲಿ 12, ಜೀವಶಾಸ್ತ್ರದಲ್ಲಿ 03 ಹಾಗೂ ವಾಣಿಜ್ಯ ವಿಭಾಗದಲ್ಲಿ ವ್ಯವಹಾರ ಅಧ್ಯಯನ 03, ಲೆಕ್ಕಶಾಸ್ತ್ರ 01 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.
ಸೈನ್ಸ್ ಅಕಾಡೆಮಿಗೆ ಶೇ.97.32 : ಕಳೆದ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇ ಜಿಗೆ ಶೇ.97.32 ಫಲಿತಾಂಶ ಲಭಿಸಿದೆ. ಕಾಲೇಜಿನ ನೇಹಾ ಮಂಜುನಾಥ್ ರಾಯ್ಕರ್ ಶೇ.96.33 (578) ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾಳೆ. ಎ.ಎಸ್. ಮೇಘ ಶೇ. 95 (570) ಹಾಗೂ ಸ್ವಾತಿ ಜೆ. ಆಚಾರ್ಯ ಶೇ.95 (570) ಗಳಿಸಿ, ದ್ವಿತೀಯ ಸ್ಥಾನ ಹಾಗೂ ಟಿ. ಕೀರ್ತನಾ ಶೇ.94.66 (568) ಅಂಕಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಸುಮಾರು 62 ಕ್ಕೂ ಅಧಿಕ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಹರಪನಹಳ್ಳಿಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್
ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಹರಪನಹಳ್ಳಿಯ ಮೂವರು ವಿದ್ಯಾರ್ಥಿನಿಯರು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 4, 5 ಮತ್ತು 6ನೇ ಸ್ಥಾನ ಪಡೆದುಕೊಳ್ಳುವ ಮೂಲಕ ತಾಲ್ಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಪಟ್ಟಣದ ಎಸ್.ಯು.ಜೆ.ಎಂ.ಪಿ ಯು. ಕಾಲೇಜಿನ ವಿದ್ಯಾರ್ಥಿನಿ ಗೀತಾ ದೊಗ್ಗಳ್ಳಿ ಕಲಾ ವಿಭಾಗದಲ್ಲಿ 600ಕ್ಕೆ 590 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡಿದ್ದು, ಎಸ್.ಎಸ್.ಜೈನ್ ಪಿ.ಯು.ಕಾಲೇಜಿನ ವಿದ್ಯಾರ್ಥಿನಿಯರಾದ ಹಕ್ಕಿ ರೂಪ ಮತ್ತು ಚಲುವಾದಿ ಅನಿತಾ 600ಕ್ಕೆ 589 ಮತ್ತು 588 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ 5 ಮತ್ತು 6ನೇ ಸ್ಥಾನ ಪಡೆದುಕೊಂಡಿದ್ದಾರೆ.
ಪಟ್ಟಣದ ಶ್ರೀ ಬಂಗಿ ಬಸಪ್ಪ ವಿಜ್ಞಾನ ಕಾಲೇಜಿನ 115 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಡಿಸ್ಟಿಂಕ್ಷನ್ 7, ಪ್ರಥಮ ದರ್ಜೆ 44. ದ್ವಿತೀಯ ದರ್ಜೆ 12, 16 ಜನ ಪಾಸಾ ಗಿದ್ದು, ಸಂತೋಷ ಜಿ.ಎಂ. 600ಕ್ಕೆ 562 ಅಂಕ ಗಳಿಸುವ ಮೂಲಕ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾನೆ.
ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ಬಳಿಕ ಇದೇ ಮೊದಲ ಬಾರಿಗೆ ಹರಪನಹಳ್ಳಿ ತಾಲ್ಲೂಕಿನ ದ್ವಿತೀಯ ಪಿಯುಸಿ ವಿದ್ಯಾ ರ್ಥಿಗಳ ಫಲಿತಾಂಶ ಬಳ್ಳಾರಿ ಜಿಲ್ಲಾ ವ್ಯಾಪ್ತಿ ಯಲ್ಲಿ ಪ್ರಕಟಗೊಂಡಿದ್ದು, ಹರಪನ ಹಳ್ಳಿಯು ಬಳ್ಳಾರಿ ಜಿಲ್ಲೆಗೆ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ಪ್ರಕಟಗೊಂಡ ಮೊದಲ ಪರೀಕ್ಷಾ ಫಲಿತಾಂಶ ಇದಾಗಿದೆ.
ಅರಸಿಕೇರೆಯ ಎಸ್.ಎಮ್.ಸಿ.ಕೆ ಪದವಿ ಪೂರ್ವ ಕಾಲೇಜು ಶೇ 51 ರಷ್ಟು ಫಲಿತಾಂಶ ಪಡೆದು ಕೊಂಡಿದೆ. ತೌಷೀಕ್ ಉಮರ್ 558 ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾನೆ. 116 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಡಿಸ್ಟಿಂಕ್ಷನ್ 6, ಪ್ರಥಮ ದರ್ಜೆ 33, ದ್ವಿತಿಯ ದರ್ಜೆ 12 ಸೇರಿದಂತೆ ಒಟ್ಟಾರೆ 55 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಅರಸೀಕೆರೆಯ ಶ್ರೀ ತೋಂಟದಾರ್ಯ ಪದವಿ ಪೂರ್ವ ಕಾಲೇಜು ಶೇ. 45 ರಷ್ಟು ಫಲಿತಾಂಶ ಪಡೆದು ಕೊಂಡಿದೆ. 73 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 34 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಡಿಸ್ಟಿಂಕ್ಷನ್ 6, ಪ್ರಥಮ ದರ್ಜೆ 25. ದ್ವಿತೀಯ ದರ್ಜೆ 2, ಒಬ್ಬ ವಿದ್ಯಾರ್ಥಿ ಪಾಸ್ ಆಗಿದ್ದಾನೆ.
ಬಡತನದಲ್ಲಿ ಅರಳಿದ ಕಾವೇರಿ : ಹರಿಹರ ತಾಲ್ಲೂಕು ಬಿಳಸ ನೂರು ಗ್ರಾಮದ ಕಾವೇರಿ ಅತ್ಯಂತ ಬಡತನದಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದು, ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ 558 ಅಂಕಗ ಳೊಂದಿಗೆ ಶೇಕಡ 93 ರಷ್ಟು ಅಂಕಗಳನ್ನು ಪಡೆದು ಅದ್ವಿತೀಯ ಸಾಧನೆ ಮಾಡಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆ. ಆದರೆ, ಈ ವಿದ್ಯಾರ್ಥಿನಿಗೆ ಗಣಿತ ಅತ್ಯಂತ ಸುಲಭ. ನೂರಕ್ಕೆ ನೂರು ಅಂಕಗಳನ್ನು ಗಣಿತದಲ್ಲಿ ಪಡೆದಿದ್ದಾರೆ.
ಸರ್.ಎಂ.ವಿ. ಪಿಯು ಕಾಲೇಜಿಗೆ ಅತ್ಯುತ್ತಮ ಶೇ.99.4 ಫಲಿತಾಂಶ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಸರ್.ಎಂ.ವಿ ಪದವಿ ಪೂರ್ವ ಕಾಲೇಜು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.
ವಿಜ್ಞಾನ ವಿಭಾಗದಲ್ಲಿ ಕು|| ಎಸ್.ಅನುಷ 600ಕ್ಕೆ 589 ಅಂಕ ಪಡೆಯುವುದರ ಜೊತೆಗೆ ಭೌತಶಾಸ್ತ್ರ 100ಕ್ಕೆ 100, ಗಣಿತ ಶಾಸ್ತ್ರ 100 ಕ್ಕೆ 100, ಜೀವಶಾಸ್ತ್ರ 100ಕ್ಕೆ 100, ರಸಾಯನ ಶಾಸ್ತ್ರ 100ಕ್ಕೆ 99, ಕನ್ನಡ 100ಕ್ಕೆ 98, ಇಂಗ್ಲಿಷ್ 100ಕ್ಕೆ 92 ಅಂಕ ಗಳಿಸಿ, ಜಿಲ್ಲೆಗೆ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕು|| ಪಂಚಂಗಂ ಮಾನಸ 600ಕ್ಕೆ 582 ಅಂಕ ಗಳಿಸಿ, ಕಾಲೇಜಿಗೆ ಪ್ರಥಮ ಸ್ಥಾನ ತಂದಿರುತ್ತಾರೆ. ಲೆಕ್ಕಶಾಸ್ತ್ರ 100ಕ್ಕೆ 100, ವ್ಯವಹಾರ ಅಧ್ಯಯನ 100ಕ್ಕೆ 100, ಸಂಸ್ಕೃತ 100ಕ್ಕೆ 100 ಅಂಕ ಗಳಿಸಿರುತ್ತಾರೆ.
ಸರ್.ಎಂ.ವಿ.ಯ ಫಲಿತಾಂಶದಲ್ಲಿ ಅತ್ಯುತ್ತಮ ಶ್ರೇಣಿ ಪಡೆದ ವಿದ್ಯಾರ್ಥಿಗಳು 495, ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು 243.
100ಕ್ಕೆ 100 ಅಂಕ ಪಡೆದ ವಿಷಯಗಳು : ಭೌತಶಾಸ್ತ್ರ 05, ಗಣಿತಶಾಸ್ತ್ರ 115, ಗಣಕವಿಜ್ಞಾನ 17, ಲೆಕ್ಕಶಾಸ್ತ್ರ 10, ಸಂಸ್ಕೃತ 01, ರಸಾಯನ ಶಾಸ್ತ್ರ 07, ಜೀವಶಾಸ್ತ್ರ 23, ವ್ಯವಹಾರ ಅಧ್ಯಯನ 06, ಸಂಖ್ಯಾಶಾಸ್ತ್ರ 07, ಕನ್ನಡ 02 ಒಟ್ಟು 193 ವಿದ್ಯಾರ್ಥಿಗಳು.
ಪಿಯು ಪರೀಕ್ಷೆ : ಸಿದ್ದೇಶ್ವರ ಕಾಲೇಜಿಗೆ ಶೇ.99.02 ಫಲಿತಾಂಶ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿಗೆ ಶೇ.99.02 ರಷ್ಟು ಫಲಿ ತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 240 ವಿದ್ಯಾರ್ಥಿಗಳ ಪೈಕಿ 238 ವಿದ್ಯಾರ್ಥಿಗಳು ಉತ್ತೀ ರ್ಣರಾಗಿದ್ದಾರೆ. ವಿರಾಜ್ ಎಸ್.ಗೆ ಶೇ.96.33 (578 ಅಂಕ) ರಷ್ಟು ಲಭಿಸಿದ್ದು, 84 ವಿದ್ಯಾರ್ಥಿ ಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 28 ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ 100ಕ್ಕೆ 100, ಭೌತ ಶಾಸ್ತ್ರದಲ್ಲಿ 4, ರಸಾಯನ ಶಾಸ್ತ್ರದಲ್ಲಿ 1, ಸಂಸ್ಕೃತ 1, ಕ್ರಮವಾಗಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಕನ್ನಡ ವಿಷಯ ದಲ್ಲಿ ಓರ್ವ ವಿದ್ಯಾರ್ಥಿ 99 ಅಂಕ ಗಳಿಸಿದ್ದಾರೆ.
ಅನ್ಮೋಲ್ ಕಾಲೇಜಿಗೆ ಶೇ.94 ರಷ್ಟು ಫಲಿತಾಂಶ: ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಅನ್ಮೋಲ್ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಶೇ.94 ರಷ್ಟು ಫಲಿತಾಂಶ ಲಭಿಸಿದೆ. ಹೆಚ್.ಕೆ.ಲಾವಣ್ಯ 577 ಅಂಕ ಗಳಿಸಿದ್ದಾರೆ. 7 ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ 100ಕ್ಕೆ 100, ಭೌತಶಾಸ್ತ್ರದಲ್ಲಿ 4 ವಿದ್ಯಾರ್ಥಿಗಳು 100ಕ್ಕೆ 100, ಗಣಿತದಲ್ಲಿ 9 ವಿದ್ಯಾರ್ಥಿಗಳು 100ಕ್ಕೆ 99 ಅಂಕ ಪಡೆದಿದ್ದಾರೆ. 27 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 58 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ರಾಣೇಬೆನ್ನೂರು ರೋಟರಿ ಕಾಲೇಜಿನ ಫಲಿತಾಂಶ : ಇಲ್ಲಿನ ರೋಟರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ಫಲಿತಾಂಶ ಪ್ರಕಟಗೊಂಡಿದ್ದು, ವಾಣಿಜ್ಯ ವಿಭಾಗದಲ್ಲಿ 85 ವಿದ್ಯಾರ್ಥಿಗಳಲ್ಲಿ 16 ಡಿಸ್ಟಿಂಕ್ಷನ್, 46 ಪ್ರಥಮ ದರ್ಜೆ 16 ದ್ವಿತೀಯ ಹಾಗೂ ನಾಲ್ವರು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ಲದ್ವಾ ಪ್ರಥಮ, ಐಶ್ವರ್ಯ ಚಾವಡಿಮನೆ ದ್ವಿತೀಯ, ಮಧು ಅಂಗಡಿ ತೃತೀಯ, ವಿಜ್ಞಾನ ದಲ್ಲಿ ಗಂಗಾ ಏಳುಕೋಟೆಪ್ಪ ಪ್ರಥಮ, ಸಿಂಧು ಕೋನನವರ ದ್ವಿತೀಯ, ದೀಪಾಲಿ ಜಂಬಗಿ ತೃತೀಯ ಸ್ಥಾನ ಪಡೆದಿದ್ದಾರೆ.
ರಾಣೇಬೆನ್ನೂರಿನ ದೇವಿಕಾ ಪಿಯು ಕಾಲೇಜಿಗೆ ಶೇ .94.41 ಫಲಿತಾಂಶ : ನಗರದ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ದೇವಿಕಾ ವಿಜ್ಞಾನ ಮಹಾವಿದ್ಯಾಲಯದ ದ್ವೀತಿಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು ಶೇ.94.41 ರಷ್ಟಾಗಿದೆ.
ಕಾಲೇಜಿನ 179 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 44 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ದ್ದಾರೆ. ಪ್ರಥಮ ಶ್ರೇಣಿಯಲ್ಲಿ 91 ವಿದ್ಯಾರ್ಥಿಗಳು ಹಾಗೂ ದ್ವೀತಿಯ ಶ್ರೇಣಿಯಲ್ಲಿ 26 ವಿದ್ಯಾರ್ಥಿಗಳು ಮತ್ತು 8 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಒಟ್ಟು 169 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕು|| ಪೂಜಾ ವರಮೂರ್ತಿ (ಶೇ.96) 575 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾಳೆ ಹಾಗೂ ಭೌತಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾಳೆ.
ಕು|| ಶಿವರಾಜ ನಾಯ್ಕ (ಶೇ.95) 568 ಅಂಕಗಳನ್ನು ಪಡೆದು, ಕಾಲೇಜಿಗೆ ದ್ವಿತೀಯ ಸ್ಥಾನದಲ್ಲಿದ್ದಾನೆ. ಭೌತಶಾಸ್ತ್ರ ಮತ್ತು ಗಣಿತ ವಿಷಯ ದಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾರೆ. ಕು|| ರಾಧಾ ಕಡೂರು (ಶೇ. 94.5) 567 ಅಂಕಗಳನ್ನು ಪಡೆದು, ಕಾಲೇಜಿಗೆ ತೃತೀಯ ಸ್ಥಾನದಲ್ಲಿದ್ದಾಳೆ ಹಾಗೂ ಭೌತಶಾಸ್ತ್ರ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾಳೆ.