ದಾವಣಗೆರೆ, ಜು. 13 – ಜಿಲ್ಲೆಯಲ್ಲಿ ಸೋಮವಾರ 45 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಇದೇ ದಿನ 21 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 129ಕ್ಕೆ ಏರಿಕೆಯಾಗಿದೆ.
ನಗರದ ಬೇತೂರು ರಸ್ತೆ ಕಂಟೈನ್ಮೆಂಟ್ ವಲಯದ 39 ವರ್ಷದ ವ್ಯಕ್ತಿಯೊಬ್ಬರು ಸಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಅತಿ ರಕ್ತದೊತ್ತಡದಿಂದಲೂ ಬಳಲುತ್ತಿದ್ದರು ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಾವಣಗೆರೆಯ ಸೈಯದ್ ಪೀರ್ ಬಡಾವಣೆಯಲ್ಲಿ ಫ್ಲುದಿಂದ ಬಳಲುತ್ತಿದ್ದ 42 ವರ್ಷದ ವ್ಯಕ್ತಿ (ಸಂಖ್ಯೆ 38994), 47 ವರ್ಷದ ಫ್ಲುದಿಂದ ಬಳಲುತ್ತಿದ್ದ ವ್ಯಕ್ತಿ (39003), ಪ್ರಯಾಣದಿಂದ ಮರಳಿದ್ದ ಹುಬ್ಬಳ್ಳಿ ಚೌಡಪ್ಪ ಗಲ್ಲಿಯ 42 ವರ್ಷದ ಪುರುಷ (39009), ಎಂ.ಸಿ.ಸಿ. ಎ. ಬ್ಲಾಕ್ನಲ್ಲಿ 55 ವರ್ಷದ ಮಹಿಳೆ (39014) ಸಂಪರ್ಕಿತರಿಂದ ಸೋಂಕಿಗೆ ಗುರಿಯಾಗಿದ್ದಾರೆ. ಎಂ.ಸಿ.ಸಿ. ಎ ಬ್ಲಾಕ್ 8ನೇ ಮೇನ್ನ 32 ವರ್ಷದ ಪುರುಷರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವರು ಫ್ಲುದಿಂದ ಬಳಲುತ್ತಿದ್ದರು. (39024).
ನರಸರಾಜಪೇಟೆಯ 26 ವರ್ಷದ ವ್ಯಕ್ತಿಗೆ ಸಂಪರ್ಕದ ಮೂಲಕ ಸೋಂಕು ಬಂದಿದೆ (39038).
ಬಡಾವಣೆ ಪೊಲೀಸ್ ಠಾಣೆಯ ನಿವಾಸಿ 46 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. (39393). ಪಿ.ಜೆ. ಬಡಾವಣೆ 4ನೇ ಮೇನ್ ವಾಸಿ 58 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. (39415).
ಹೊನ್ನಾಳಿಯ 36 ವರ್ಷದ ಮೂವರು ಪುರುಷರಲ್ಲಿ ಸೋಂಕು ಕಂಡು ಬಂದಿದೆ. (ರೋಗಿ ಸಂಖ್ಯೆ 38990, 39051, 39060), 48 ವರ್ಷದ ಪುರುಷ (39057), 50 ವರ್ಷದ ಪುರುಷ (39078)ರಲ್ಲಿ ಸೋಂಕು ಕಂಡು ಬಂದಿದೆ. ಇವರು ಪ್ರಯಾಣದಿಂದ ಮರಳಿದ್ದು, ಸೋಂಕಿನ ಮೂಲ ಪತ್ತೆ ಮಾಡಲಾಗುತ್ತಿದೆ.
ಹರಿಹರದ ಟಿಪ್ಪು ನಗರದ 32 ವರ್ಷದ ಮಹಿಳೆ (39245), 55 ವರ್ಷದ ವ್ಯಕ್ತಿ (39262)ಗೆ ಸಂಪರ್ಕದಿಂದ ಸೋಂಕು ಬಂದಿದೆ.
ಹರಿಹರ ತಾಲ್ಲೂಕಿನ ಕೊಂಡಜ್ಜಿ ಕ್ಯಾಂಪ್ ಇಂದ್ರ ಬಡಾವಣೆಯಲ್ಲಿ ಫ್ಲುದಿಂದ ಬಳಲುತ್ತಿದ್ದ 24 ವರ್ಷದ ಮಹಿಳೆ (39084)ಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಹರಿಹರದ ಹಳ್ಳದಕೆರೆಯ 12 ವರ್ಷದ ಬಾಲಕ (39319), 32 ವರ್ಷದ ಮಹಿಳೆ (39532) ಇವರಲ್ಲಿ ಸೋಂಕು ಕಂಡು ಬಂದಿದ್ದು, ಸೋಂಕಿನ ಮೂಲದ ತನಿಖೆ ನಡೆಸಲಾಗುತ್ತಿದೆ.
ಕುಂಬಾರ ಓಣಿ ನಿವಾಸಿ 10 ವರ್ಷದ ಬಾಲಕಿ (39362), ಅಮರಾವತಿ ಬಡಾವಣೆಯ 26 ವರ್ಷದ ಪುರುಷ (39371), 40 ವರ್ಷದ ಪುರುಷ (39343) ಇವರಲ್ಲಿ ಸೋಂಕು ಕಂಡು ಬಂದಿದ್ದು, ಮೂಲದ ತನಿಖೆ ನಡೆಸಲಾಗುತ್ತಿದೆ.
ಚನ್ನಗಿರಿಯ ಮೆದಿಕೇರನಹಳ್ಳಿಯಲ್ಲಿ ಫ್ಲುದಿಂದ ಬಳಲುತ್ತಿದ್ದ 20 ವರ್ಷದ ಮಹಿಳೆ (39111), ಮುದಲಮಾಚಿಕೆರೆಯಲ್ಲಿ ಫ್ಲುದಿಂದ ಬಳಲುತ್ತಿದ್ದ 32 ವರ್ಷದ ಮಹಿಳೆ (39128)ಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿಯ 56 ವರ್ಷದ ಪುರುಷ (39399) ಹಾಗೂ 42 ವರ್ಷದ ಮಹಿಳೆ (39407) ಇವರಲ್ಲಿ ಸೋಂಕು ಕಾಣಿಸಿಕೊಂಡಿದೆ.ಇವರು ಫ್ಲುದಿಂದ ಬಳಲುತ್ತಿದ್ದರು.
ಬೇತೂರು ರಸ್ತೆ ಕಂಟೈನ್ಮೆಂಟ್ ವಲಯದ 39 ವರ್ಷದ ವ್ಯಕ್ತಿ ಸಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲ ಸಿಗದೆ ಸಾವು
ಇನ್ನೂ ಒಟ್ಟು 4,535 ಮಾದರಿಗಳ ಫಲಿತಾಂಶ ಬರುವುದು ಬಾಕಿ.
ಜಗಳೂರಿನಲ್ಲಿ ದುರ್ಗಮ್ಮ ದೇವಾಲಯದ ಬಳಿ 24 ವರ್ಷದ ಪುರುಷ (39017), ಹಳೆ ಎ.ಕೆ. ಕಾಲೊನಿಯಲ್ಲಿ ಫ್ಲು ಹೊಂದಿದ್ದ 65 ವರ್ಷದ ಮಹಿಳೆ (39144), 16 ವರ್ಷದ ಯುವತಿ (39151), 23 ವರ್ಷದ ಮಹಿಳೆ (39199), 18 ವರ್ಷದ ಮಹಿಳೆ (39213), 16 ವರ್ಷದ ಯುವತಿ (39222), 23 ವರ್ಷದ ಮಹಿಳೆ (39199), 18 ವರ್ಷದ ಮಹಿಳೆ (39213), 16 ವರ್ಷದ ಯುವತಿ (39222), ಹತ್ತು ವರ್ಷದ ಬಾಲಕ (39230) ಇವರಲ್ಲಿ ಸೋಂಕು ಕಂಡು ಬಂದಿದೆ.
ಇದೇ ಹಳೇ ಎ.ಕೆ. ಕಾಲೋನಿಯ 65 ವರ್ಷದ ಮಹಿಳೆ (39275), 24 ವರ್ಷದ ಮಹಿಳೆ (39288), 16 ವರ್ಷದ ಯುವತಿ (39299), 35 ವರ್ಷದ ಮಹಿಳೆ (39308)ಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿನ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಬಳ್ಳಾರಿಯ ಸಂಡೂರಿನಿಂದ ಜಿಲ್ಲೆಗೆ ಬಂದಿದ್ದ 68 ವರ್ಷದ ಫ್ಲುನಿಂದ ಬಳಲುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. (ಸಂಖ್ಯೆ 38998).
ಇದೇ ದಿನ 21 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರು ಚನ್ನಗಿರಿಯ ಗಂಗೇಗೊಂಡನಹಳ್ಳಿಯ 35 ವರ್ಷದ ಮಹಿಳೆ ( ಸಂಖ್ಯೆ 26973), ತಾವರಕೆರೆಯ 38 ವರ್ಷದ ಪುರುಷ (26974), ಚನ್ನಗಿರಿಯ ಕುರುಬರ ಬೀದಿಯ 40 ವರ್ಷದ ಪುರುಷ (26975),
ದಾವಣಗೆರೆಯ ನರಸರಾಜಪೇಟೆಯ 45 ವರ್ಷದ ಪುರುಷ (26976), ಹರಿಹರ ಗಾಂಧಿನಗರದ 32 ವರ್ಷದ ಪುರುಷ (35906), ಹೊನ್ನಾಳಿ ತಾಲ್ಲೂಕಿನ ಬಿದರಗಡ್ಡೆಯ 35 ವರ್ಷದ ಪುರುಷ (35907), ಜಗಳೂರಿನ ಕಲ್ಲೇಶ್ವರ ಲಾಡ್ಜ್ ಎದುರಿನ ನಿವಾಸಿ 29 ವರ್ಷದ ಪುರುಷ (35909), ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಡಿಪೋ ಕಂಟೈನ್ಮೆಂಟ್ ವಲಯದ 36 ವರ್ಷದ ಪುರುಷ (35910), ಡಿ.ಸಿ.ಎಂ. ಬಡಾವಣೆಯ 55 ವರ್ಷದ ಪುರುಷ (35917), ಹರಿಹರದ ಗಂಗನರಸಿಯ 25 ವರ್ಷದ ಎರಡು ವರ್ಷ ಹೆಣ್ಣು ಮಗು (35920), ದಾವಣಗೆರೆ ಎಂ.ಸಿ.ಸಿ. ಎ ಬ್ಲಾಕ್ 10ನೇ ಮೇನ್ನ 35 ವರ್ಷದ ಪುರುಷ (35931), 41 ವರ್ಷದ ಪುರುಷ (35932), ಹೊನ್ನಾಳಿಯ ಕ್ಯಾಸಿನಕೆರೆಯ 59 ವರ್ಷದ ಪುರುಷ (10836), ಜಗಳೂರಿನ 43 ವರ್ಷದ ಪುರುಷ (14404), ಹರಿಹರದ ಗಾಂಧಿನಗರದ 34 ವರ್ಷದ ಪುರುಷ (14410), ದಾವಣಗೆರೆಯ ಬೀಡಿ ಲೇಔಟ್ನ 26 ವರ್ಷದ ಮಹಿಳೆ (21685), ದಾವಣಗೆರೆಯ ಕುರುಬರಕೇರಿಯ 64 ವರ್ಷದ ಪುರುಷ (35939), ದಾವಣಗೆರೆಯ ಹೊಂಡದ ವೃತ್ತದ ಸುಲ್ತಾನ್ ಪೇಟೆಯ 58 ವರ್ಷದ ಮಹಿಳೆ (15384) ಆಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ 581 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 431 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 21 ಜನರು ಸಾವನ್ನಪ್ಪಿದ್ದಾರೆ. ಸಕ್ರಿಯ ಸೋಂಕುಗಳ ಸಂಖ್ಯೆ 129 ಆಗಿದೆ.
ಕೊರೊನಾ ಪರೀಕ್ಷೆಗಾಗಿ 32,477 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ 4,535 ಮಾದರಿಗಳ ಫಲಿತಾಂಶ ಬರುವುದು ಬಾಕಿ ಇದೆ.
ಸೋಮವಾರ ಪತ್ತೆಯಾದ ಪ್ರಕರಣಗಳ ಪೈಕಿ ಜಗಳೂರಿನವು ಗರಿಷ್ಠ 18 ಪ್ರಕರಣಗಳು.
ಉಳಿದಂತೆ ದಾವಣಗೆರೆ ಹಾಗೂ ಹರಿಹರದಲ್ಲಿ ತಲಾ ಹತ್ತು, ಹೊನ್ನಾಳಿಯಲ್ಲಿ ಐದು ಹಾಗೂ ಚನ್ನಗಿರಿಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.