ದಾವಣಗೆರೆ, ಅ.14- 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೆಲಮಟ್ಟಕ್ಕಿಂತ ಮೇಲೆ (ಅಬವ್ ಗ್ರೌಂಡ್ ಲೆವೆಲ್-ಸ್ಟೀಲ್ ಟ್ಯಾಂಕ್) ರಚಿಸುವ ನೀರು ಸಂಗ್ರಹಣಾ ಘಟಕಗಳ ವಿನ್ಯಾಸಗಳಿಗೆ ಜಿಲ್ಲೆಗೆ ಭೌತಿಕ 8 ಮತ್ತು ಆರ್ಥಿಕ ರೂ.27.75 ಲಕ್ಷಗಳ ಗುರಿ ನೀಡಲಾಗಿದೆ.
ಒಂದು ಲಕ್ಷ ಲೀಟರ್ ಮತ್ತು 2 ಲಕ್ಷ ಲೀಟರ್ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ರೂ.3.25 ಹಾಗೂ ರೂ. 5.00 ಲಕ್ಷ ಸಹಾಯಧನವಿದ್ದು, ಆಸಕ್ತಿಯುಳ್ಳ ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ರೈತರು ಸಂಬಂಧಪಟ್ಟ ತಾಲ್ಲೂಕುಗಳ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.