ಕೋವಿಡ್-19 ರಿಂದ ರಾಜ್ಯ, ದೇಶ, ಭೂಮಿ ಜರ್ಜರಿತವಾಗಿದ್ದರೂ ಆಶಾದಾಯಕ ಮುಂಗಾರು ಮತ್ತು ಉತ್ತಮ ಮಳೆಯ ಕಾರ್ಮೋಡದ ಮುನ್ಸೂಚನೆಯಂತೆ ದಾವಣಗೆರೆಯ ಮಲೇಬೆನ್ನೂರಿನ ಗುಡ್ಡಗಳಲ್ಲಿ ಕೃಷಿ ಮಾಡುತ್ತಿರುವ ರೈತರು ಯುದ್ದ ಸನ್ನದ್ಧ ಯೋಧರಿಗಿಂತ ಕಡಿಮೆಯಿಲ್ಲದೆ ದುಡಿಯುತ್ತಿದ್ದಾರೆ.
ನೇಗಿಲ ಹಿಡಿದು, ಹೊಲದೊಳು ಹಾಡುತಾ ಉಳುವ ಯೋಗಿಯ ನೋಡಲ್ಲಿ…….. ರಾಜ್ಯಗಳುದಿಸಲಿ, ರಾಜ್ಯಗಳಲಿಯಲಿ, ಹಾರಲಿ ಗದ್ದುಗೆ ಮುಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲಾ ಬಿತ್ತುಳುವುದನವ ಬಿಡುವುದೇ ಇಲ್ಲಾ ….. ಎಂಬ ಕವಿ ಕುವೆಂಪುರವರ ಪದ್ಯವನ್ನು ನೆನಪಿಸುತ್ತಿದೆ ಈ ಚಿತ್ರ.
– ಡಾ. ಎಸ್. ಶಿಶುಪಾಲ, ಸೂಕ್ಷ್ಮಜೀವಶಾಸ್ತ್ರ ವಿಭಾಗ,
ದಾವಣಗೆರೆ ವಿವಿ, ದಾವಣಗೆರೆ.