ಜಗಳೂರು, ಅ. 8- ತಾಲ್ಲೂಕನ್ನು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಎಸ್ .ವಿ.ರಾಮಚಂದ್ರ ತಿಳಿಸಿದ್ದಾರೆ.
ಡಾ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯದಲ್ಲಿ ಎರಡನೇ ಅತ್ಯಂತ ಹಿಂದುಳಿದ ಕೃಷಿ ಅವಲಂಬಿತ ತಾಲ್ಲೂಕಾಗಿರುವ ಜಗಳೂರು, 2020 ನೇ ಸಾಲಿನ ಮುಂಗಾರು ಋತುವಿನಲ್ಲಿ ಸೆ. 1 ರಿಂದ 22ರವರೆಗೆ 60 ಮಿ.ಮೀ. ವಾಡಿಕೆ ಮಳೆಗೆ 155 ಮಿ.ಮೀ. ಮಳೆಯಾಗಿ ಶೇ.159ರಷ್ಟು ಹೆಚ್ಚುವರಿ ಮಳೆಯಾಗಿತ್ತು. 2020ರ ಜೂನ್ ನಿಂದ ಸೆಪ್ಟೆಂಬರ್ 22ರವರೆಗೆ 253 ಮಿಮೀ ವಾಡಿಕೆ ಮಳೆಗೆ ವಾಸ್ತವವಾಗಿ 462 ಮಿ.ಮೀ. ಮಳೆಯಾಗಿ ಶೇ.83ರಷ್ಟು ಹೆಚ್ಚುವರಿ ಮಳೆ ದಾಖಲಾಗಿತ್ತು. ಹೆಚ್ಚು ಮಳೆ ಪರಿಣಾಮವಾಗಿ ಅಪಾರ ಪ್ರಮಾಣದ ವಾಸದ ಮನೆಗಳು, ಈರುಳ್ಳಿ ಬೆಳೆ ಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿತ್ತು. ರಸ್ತೆಗಳು, ಸಾರ್ವಜನಿಕ ಕಟ್ಟಡಗಳು ಹಾಳಾಗಿದ್ದರಿಂದ ತಾಲ್ಲೂಕಿನ್ನು
ಬಿದ್ದು ಹೋಗಿದ್ದು ನನ್ನ ಭಾಗದ ರೈತಾಪಿ ವರ್ಗದ ಪ್ರಮುಖ ವಾಣಿಜ್ಯ ಬೆಳೆಗಳ ಆದಂತಹ ಈರುಳ್ಳಿ ಬೆಳೆಯು ಅತಿವೃಷ್ಟಿ ಮಳೆಯಿಂದ ಸಂಪೂರ್ಣವಾಗಿ ಕೊಳೆತು ನಾಶವಾಗಿರುತ್ತದೆ ಹಾಗೂ ಇತರೆ ಬೆಳೆಗಳ ಅತಿವೃಷ್ಟಿಯಿಂದ ಸಂಪೂರ್ಣ ಹಾನಿಯಾಗಿದ್ದು ತಾಲ್ಲೂಕನ್ನು ಅತಿವೃಷ್ಟಿ ಪೀಡಿತ ಎಂದು ಘೋಷಿಸಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೆ.11ರಂದು ಸಲ್ಲಿಸಿದ ಮನವಿ ಸ್ಪಂದಿಸಿದ ಅವರು, ತಾಲ್ಲೂಕನ್ನು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ತಾಲ್ಲೂಕು ಎಂದು ಘೋಷಿಸಿದ್ದಾರೆ ಎಂದು ರಾಮಚಂದ್ರಪ್ಪ ತಿಳಿಸಿದ್ದಾರೆ.
ಅತಿವೃಷ್ಟಿ ಹಾಗೂ ಪ್ರವಾಹಗಳಿಂದ ನಷ್ಟ ಅನುಭವಿಸಿದ 16 ಜಿಲ್ಲೆಗಳ 43 ತಾಲ್ಲೂಕುಗಳ ಪಟ್ಟಿಯಲ್ಲಿ ಜಗಳೂರು ಸೇರಿದ್ದು, ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಶಾಸಕ ಎಸ್.ವಿ.ಆರ್ ಅಭಿನಂದನೆ ಸಲ್ಲಿಸಿದ್ದಾರೆ.