ಯುವತಿ ಅತ್ಯಾಚಾರ ಆರೋಪ ; ಎಐಡಿಎಸ್ಓ ಪ್ರತಿಭಟನೆ

ದಾವಣಗೆರೆ, ಸೆ.30- ನವದೆಹಲಿಯ ಯುಪಿ ಭವನದ ಎದುರು ಎಐಡಿವೈಓ – ಎಐಎಂಎಸ್‍ಎಸ್ ಮತ್ತು ಎಐಡಿಎಸ್‍ಓ ಸಂಘಟನೆಗಳು ಜಂಟಿಯಾಗಿ ಪ್ರತಿಭಟಿಸುತ್ತಿದ್ದ ವೇಳೆ ಶಾಂತಿಪೂರ್ಣ ಪ್ರತಿಭಟನಾಕಾರರನ್ನು ಬಂಧಿಸಿರುವ ಕ್ರಮವನ್ನು ಎಐಡಿವೈಓ ರಾಜ್ಯ ಸಮಿತಿಯು ಖಂಡಿಸಿದ್ದು, ಬಂಧಿಸಲ್ಪಟ್ಟವರನ್ನು ಬಿಡುಗಡೆಗೊಳಿಸಲು ಆಗ್ರಹಿಸಿದೆ.

ಉತ್ತರ ಪ್ರದೇಶದ ಯುವತಿ ಮೇಲಿನ ಗುಂಪು ಅತ್ಯಾಚಾರ ಮತ್ತು ಕಗ್ಗೊಲೆ ಖಂಡಿಸಿ ಮೃತಳಿಗೆ ನ್ಯಾಯ ಕ್ಕಾಗಿ ಮತ್ತು ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದಾಗ ಏಕಾಏಕಿ ದಾಳಿ ಮಾಡಿ ಪ್ರತಿಭಟನಾಕಾರರನ್ನು ಬಂಧಿಸಿರುವುದು ಪೊಲೀಸರ ದೌರ್ಜನ್ಯಕಾರಿ ನಡವಳಿಕೆಗೆ ಸಾಕ್ಷಿಯಾಗಿದೆ. ಯುಪಿ ಪೊಲೀಸರು ಗಾಯಗೊಂಡಿದ್ದ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಿದ್ದೂ ಅಲ್ಲದೆ, ಆರೋಪಿಗ ಳನ್ನು ಬಂಧಿಸಲೂ ಸಹ ನಿರ್ಲಕ್ಷ್ಯ ತೋರಿದ್ದರು. ಜನ ತಾಂತ್ರಿಕ ಮೌಲ್ಯಗಳನ್ನು ನಂಬುವ ಜನತೆಯನ್ನು ಭಯ ಭೀತರನ್ನಾಗಿಸುವ ಮತ್ತು ಆಡಳಿತದ ಹಾಗೂ ಪೊಲೀಸರ ಕರ್ತವ್ಯಲೋಪವನ್ನು ಪ್ರಶ್ನಿಸುವವರಿಗೆ ಎಚ್ಚರಿಕೆ ನೀಡುವ ಉದ್ದೇಶವನ್ನು ಪೊಲೀಸರ ಈ ನಡವಳಿಕೆ ಹೊಂದಿದೆ. ಪ್ರತಿಭಟನಾಕಾರರೆಲ್ಲರನ್ನೂ ಈ ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ರಾಜ್ಯ ಸಮಿತಿ ಕಾರ್ಯದರ್ಶಿ ಜಿ.ಎಸ್. ಕುಮಾರ್ ಒತ್ತಾಯಿಸಿದ್ದಾರೆ.

error: Content is protected !!