ವಾಹಿನಿಯ ನೇರ ಪ್ರಸಾರಕ್ಕೆ ತಡೆ : ವರದಿಗಾರರ ಕೂಟ ಪ್ರತಿಭಟನೆ

ದಾವಣಗೆರೆ, ಸೆ.30- ಪವರ್ ಟಿವಿ ನೇರ ಪ್ರಸಾರವನ್ನು ನಿರ್ಬಂಧಿ ಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ವರದಿಗಾರರ ಕೂಟದ ನೇತೃತ್ವ ದಲ್ಲಿ ಪತ್ರಕರ್ತರು ನಗರದಲ್ಲಿ ಇಂದು ಸಂಜೆ ಪ್ರತಿಭಟನೆ ನಡೆಸಿದರು. ಉಪವಿಭಾಗಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದ ಪತ್ರಕರ್ತರು ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವುದನ್ನು ಖಂಡಿಸಿದರು. ನಂತರ ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ,  ಪವರ್ ಟಿವಿ ವಾಹಿನಿಯ ಲೈವ್ ಬಂದ್ ಮಾಡುವುದರಿಂದ ಅದನ್ನು ಅವಲಂಬಿಸಿರುವ ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ.    ಕಾರಣ, ಲೈವ್‍ಗೆ ಅವಕಾಶ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಕೂಟದ ಮಾಜಿ ಅಧ್ಯಕ್ಷ ಬಸವರಾಜ್ ದೊಡ್ಮನಿ ಮಾತನಾಡಿದರು. ಕೂಟದ ಸಂಸ್ಥಾಪಕ ಅಧ್ಯಕ್ಷ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಡಜ್ಜಿ, ಖಜಾಂಚಿ ನಂದಕುಮಾರ್, ವಿವೇಕ್, ರವಿಬಾಬು, ಲೋಕೇಶ್, ರಾಮಪ್ರಸಾದ್, ಮಲ್ಲಿಕಾರ್ಜುನ ಕೈದಾಳ್, ಮಧು ನಾಗರಾಜ್ ಕುಂದುವಾಡ, ಯೋಗರಾಜ್, ಪುನೀತ್ ಆಪ್ತಿ, ಮಂಜು, ರವಿ, ಅಶೋಕ್, ರಾಮು, ಮಹಾದೇವ, ವೀರೇಶ್, ವಿಜಯ್, ಹನುಮಂತು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!