ಪರೀಕ್ಷೆ ಬರೆಯಲು ನಿರಾಕರಿಸಿದ್ದ ಕಂಟೈನ್ಮೆಂಟ್ ಝೋನ್ನಲ್ಲಿದ್ದ ವಿದ್ಯಾರ್ಥಿಗಳು
ಹರಪನಹಳ್ಳಿ, ಜೂ.25 – ತಾಲ್ಲೂಕಿ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 13 ಪರೀಕ್ಷಾ ಕೇಂದ್ರಗಳಿಂದ 3788 ವಿದ್ಯಾ ರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಅದರಲ್ಲಿ 115 ಗೈರಾಗಿ, 3673 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಕಂಟೈನ್ಮೆಂಟ್ ಜೋನ್ ನಿಂದ ಒಟ್ಟು 17 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ದ್ದರು. ಸ್ಕಾನಿಂಗ್ , ಸ್ಯಾನಿಟೈಜರ್ ಮಾಡುವು ದರ ಜೊತೆಗೆ ಉಚಿತ ಮಾಸ್ಕ್ ಗಳನ್ನು ವಿತರಿಸಿ ಪರೀಕ್ಷಾ ಹಾಲ್ ಗೆ ಬೀಡಲಾಯಿತು.
ಕೊರೊನಾ ಭೀತಿಯಿಂದ ಮನೆಯಲ್ಲಿಯೇ ಇದ್ದ ವಿದ್ಯಾರ್ಥಿಗಳನ್ನು ಶಿಕ್ಷಣ ಹಾಗೂ ಪೊಲೀಸ್ ಅಧಿಕಾರಿಗಳು ಮನವೊಲಿಸಿ ಪರೀಕ್ಷಾ ಕೇಂದ್ರಕ್ಕೆ ಕರೆದು ಕೊಂಡು ಬಂದು ಪರೀಕ್ಷೆ ಬರೆಯುವಂತೆ ಮಾಡಿದರು. ಸ್ಥಳೀಯ ಬಾಣಗೇರಿಯನ್ನು ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿತ್ತು. ಇಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಗೈರಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕ್ಷೇತ್ರಶಿಕ್ಷಣಾಧಿಕಾರಿ ಎಸ್ .ಎಂ.ವೀರಭದ್ರಯ್ಯ, ಪಿಎಸ್ ಐ ಪ್ರಕಾಶ್ ಜೊತೆ ಬಾಣಗೇರಿಯ ಆ ವಿದ್ಯಾರ್ಥಿಗಳ ಮನೆಗೆ ತೆರಳಿ ವಿದ್ಯಾರ್ಥಿಗಳಿಗೂ ಹಾಗೂ ಪೋಷಕರಿಗೆ ಅರಿವು ಮೂಡಿಸಿ ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಕೇಂದ್ರಕ್ಕೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾದರು.
ಕಂಟೈನ್ಮೆಂಟ್ ಜೋನ್ ಅಲ್ಲದಿದ್ದರೂ ಹಗರಿಗುಡಿಹಳ್ಳಿ ಗ್ರಾಮದಲ್ಲಿ ಒಬ್ಬ ವಿದ್ಯಾರ್ಥಿ ಕೊರೊನಾ ಹರಡುವ ಭೀತಿಯಿಂದ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದ. ಆ ವಿದ್ಯಾರ್ಥಿಯನ್ನೂ ಸಹ ಬಿಇಒ ಹಾಗೂ ಸಿಬ್ಬಂದಿ ಮನವೊಲಿಸಿ ಸಾಸ್ವಿಹಳ್ಳಿ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು.