ಅಪಘಾತದಿಂದ ರಕ್ಷಣೆಗೆ ಹೆಲ್ಮೆಟ್ ಅನಿವಾರ್ಯ

ಕುಡಿದು ವಾಹನ ಚಾಲನೆ ಮಾಡುವುದು ‘ಕೂಲ್’ ಅಲ್ಲ : ಎಸ್ಪಿ ಸಿ.ಬಿ. ರಿಷ್ಯಂತ್‌

ದಾವಣಗೆರೆ, ಡಿ. 29 – ಅಪಘಾತ ಸಂಭವಿಸಿದಾಗ ಕ್ಷಣಗಳಲ್ಲೇ ಜೀವನ ಬದಲಾಗುತ್ತದೆ. ಹೀಗಾಗಿ ಕುಂಟು ನೆಪಗಳನ್ನು ಹೇಳುವುದನ್ನು ಬಿಟ್ಟು ಸ್ವಯಂ ರಕ್ಷಣೆಗಾಗಿ ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಧರಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಕರೆ ನೀಡಿದ್ದಾರೆ.

ನಗರದ ಬಿಐಇಟಿ ಕಾಲೇಜಿನಲ್ಲಿ ಮೊನ್ನೆ ಆಯೋಜಿಸಲಾಗಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಹದಿಹರೆಯದವರು ಹೆಲ್ಮೆಟ್ ಧರಿಸದೇ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಳ್ಳುತ್ತಾರೆ. ಕೆಲವೊಮ್ಮೆ ಸಾವುಗಳೂ ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಪೋಷಕರ ಪರಿಸ್ಥಿತಿ ಮನಕಲಕುವಂತಿರುತ್ತದೆ ಎಂದರು.

ಇತ್ತೀಚೆಗಷ್ಟೇ ಗುಜರಾತ್‌ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ನಗರದಲ್ಲಿ ಅಪಘಾತಕ್ಕೀ ಡಾಗಿದ್ದರು. ಅವರು ಹೆಲ್ಮೆಟ್‌ ಧರಿಸಿದ್ದರೆ ಬದುಕಿರು ತ್ತಿದ್ದರು. ಇಂತಹ ಘಟನೆಗಳು ಸಂಭವಿಸಿದ ನಂತ ರವೂ ಯುವ ಜನತೆ ಹೆಲ್ಮೆಟ್ ಧರಿಸದಿರುವುದನ್ನು ನೋಡಿದಾಗ ರಕ್ತ ಕುದಿಯುತ್ತದೆ ಎಂದವರು ಆಕ್ರೋಶಭರಿತ ಕಾಳಜಿ ವ್ಯಕ್ತಪಡಿಸಿದರು.

ಹೆಲ್ಮೆಟ್ ಧರಿಸುವುದು ಹಾಗೂ ಕುಡಿದು ವಾಹನ ಚಾಲನೆ ಮಾಡದಿರುವುದು ನಾಗರಿಕ ವರ್ತನೆಗಳಾಗಿವೆ. ಬೇಜವಾಬ್ದಾರಿ ವರ್ತನೆಗಳನ್ನು §ಕೂಲ್¬ ಎಂದು ಭಾವಿಸಬಾರದು. ಹದಿಹರೆಯ ಮುಗಿಯುವ ವೇಳೆಗೆ ಇಂತಹ ಕೂಲ್ ವಿಷಯಗಳು ಹಳಸಲಾಗಿರುತ್ತವೆ ಎಂದವರು ತಿಳಿಸಿದರು.

ವಿದ್ಯಾರ್ಥಿ ಜೀವನದಲ್ಲಿ ವೃತ್ತಿಪರತೆಯತ್ತ ಸಾಗಲು ಆದ್ಯತೆ ನೀಡಬೇಕು. ಮುಂದಿನ ಜೀವನ ಕಟ್ಟಿಕೊಳ್ಳುವ ದಿಸೆಯಲ್ಲಿ ಆದ್ಯತೆ ನೀಡಿದಾಗ, ಶಿಕ್ಷಣದ ನಂತರ ಜೀವನದಲ್ಲಿ ಸ್ಥಿರತೆ ಕಾಣುತ್ತದೆ. ಇಲ್ಲವಾದರೆ ನಿವೃತ್ತಿ ವಯಸ್ಸು ಬಂದರೂ ಅಸ್ಥಿರತೆ ಇರುತ್ತದೆ ಎಂದವರು ಎಚ್ಚರಿಸಿದರು.

ಉನ್ನತ ಶಿಕ್ಷಣ ಹಂತಕ್ಕೆ ಬರಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಬುದ್ದಿವಂತಿಕೆ ಇದ್ದರೂ ಬಡತನದಿಂದಾಗಿ ಎಷ್ಟೋ ಜನರು ಈ ಹಂತಕ್ಕೆ ಬರಲು ಆಗುವುದಿಲ್ಲ. ಹೀಗಾಗಿ ಉನ್ನತ ಶಿಕ್ಷಣಕ್ಕೆ ಬಂದಿರುವವರು ಅದೃಷ್ಟವಂತರು. ನಿಮ್ಮ ಪೋಷಕರ ಋಣ ತೀರಿಸಲು ಆಗುವುದಿಲ್ಲವಾದರೂ, ಅವರ ನಿರೀಕ್ಷೆಯ ಮಟ್ಟ ತಲುಪಲು ಪ್ರಯತ್ನ ಪಡಿ ಎಂದವರು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ದೇಶದ ಒಟ್ಟು ಬಜೆಟ್‌ನ ಶೇ.30ರಷ್ಟು ಹಣ ಇಂಜಿನಿಯರಿಂಗ್ ವಿಭಾಗದ ಮೂಲಕ ಜಾರಿಯಾಗುವ ಯೋಜನೆಗಳಿಗೆ ಬರುತ್ತದೆ. ಹೀಗಾಗಿ ಸಮಾಜಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ನೀತಿ ಹಾಗೂ ನೈತಿಕತೆ ವಿದ್ಯಾರ್ಥಿ ಜೀವನದ ಭಾಗವಾಗಬೇಕು. ಯಾವುದೇ ತಪ್ಪು ಮಾಡಬಾರದು ಎಂಬ ನೀತಿ ಹೊಂದಬೇಕು ಮತ್ತು ನಮ್ಮಿಂದ ತಪ್ಪಾದಾಗ ಅದನ್ನು ಒಪ್ಪಿಕೊಳ್ಳುವ ನೈತಿಕತೆ ಇರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್.ಬಿ. ಅರವಿಂದ, ಕಾಲೇಜಿನ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!