ಎಂಇಎಸ್ ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

ಉಪವಿಭಾಗಾಧಿಕಾರಿ ಕಚೇರಿಗೆ ಕರವೇ ಮುತ್ತಿಗೆ

ದಾವಣಗೆರೆ, ಡಿ.29- ನಾಡ ಮತ್ತು ದೇಶಭಕ್ತರ ಮೂರ್ತಿಗಳಿಗೆ ಅಪಚಾರ ಮಾಡಿದ ಮತ್ತು ಕನ್ನಡ ಬಾವುಟ ಸುಟ್ಟ ಅಪರಾಧಿಗಳನ್ನು ರಾಜ್ಯದಿಂದ ಗಡೀಪಾರು ಮಾಡುವಂತೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದಲ್ಲಿ ನಗರದ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ನಂತರ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮುಖೇನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿಯಲ್ಲಿ ತಾಯ್ನೆಲಕ್ಕಾಗಿ ಹೋರಾಡಿ ಬ್ರಿಟೀಷರಿಂದ ಗಲ್ಲಿಗೇರಿಸಲ್ಪಟ್ಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಎಂಇಎಸ್, ಶಿವಸೇನೆ ಗೂಂಡಾಗಳು ವಿರೂಪಗೊಳಿಸಿದ ಬೆನ್ನಲ್ಲೇ, ಖಾನಾಪುರದ ಹಲಸಿಯಲ್ಲಿ ಕನ್ನಡ ಬಾವುಟ ಸುಟ್ಟು, ವಿಶ್ವಮಾನವ ಕ್ರಾಂತಿಯೋಗಿ ಬಸವಣ್ಣನವರ ಭಾವಚಿತ್ರಕ್ಕೆ ಸೆಗಣಿ ಬಳಿದ ಘಟನೆ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವ ಗುರು ಬಸವಣ್ಣನವರಿಗೆ ನೀಚ ಎಂಇಎಸ್ ಮತ್ತು ಶಿವಸೇನೆ ಭಯೋತ್ಪಾದಕರು  ಅಪಮಾನ ಮಾಡುವ ಮೂಲಕ ಸಮಸ್ತ ಮಾನವ ಕುಲಕ್ಕೆ ಅವಮಾನ ಎಸಗಿದ್ದಾರೆ ಎಂದು ಆಕ್ಷೇಪಿಸಿದರು.

ಸರ್ಕಾರ ಈಗಲಾದರೂ ಕಾರ್ಯೋನ್ಮುಖವಾಗಬೇಕು. ಕೂಡಲೇ ಈ ದುಷ್ಕೃತ್ಯ ಎಸಗಿದ ಅಪರಾಧಿಗಳನ್ನು ಬಂಧಿಸಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಮಂಜುಳಮ್ಮ ಮಾಂತೇಶ,  ಶಾಂತಮ್ಮ, ಮಂಜುಳಮ್ಮ, ಅಮೀದಾ ಬಾನು, ಸುಜಾತ,  ಹೇಮಲತಾ, ಮಂಜುಶ್ರೀ ಗೌಡ್ರು, ಮಲ್ಲಿಕಾರ್ಜುನ್,  ಸಂತೋಷ್, ಗೋಪಾಲ್ ದೇವರಮನೆ,  ಬಸವರಾಜ್, ಎಂ.ಡಿ. ರಫೀಕ್, ಭಾಷಾ ಸಾಬ್, ಖಾದರ್ ಭಾಷಾ, ಶಫಿ ಉಲ್ಲಾ  ಸಾಧಿಕ್, ಅನ್ವರ್ ಬೇಗ್, ಅಲ್ಲಾಭಕ್ಷಿ, ಜಬಿಉಲ್ಲಾ, ಅನ್ವರ್, ಖಲೀಲ್, ಎಜಾಜ್, ಶಫಿ, ಆಟೋ ರಫೀಕ್ , ಭಾಷಾ ಸಾಬ್, ಬುತ್ತಿ ಆಯೂಬ್, ಫಾರೂಕ್, ಮಹಬೂಬ್, ಅಹ್ಮದ್ ಖಾನ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!