ಹಿರಿಯರ ಸ್ಮರಿಸುತ್ತಾ ಜನರ ಮಧ್ಯೆ ಪಕ್ಷ ಬಲಪಡಿಸೋಣ

ದಾವಣಗೆರೆ, ಡಿ.29- ಜನರ ಬದುಕನ್ನು ಹಸನುಗೊಳಿಸಲು ಹಗಲಿ ರುಳು ಶ್ರಮಿಸಿ ದೇಶದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯರನ್ನು ಸ್ಮರಿಸಿಕೊಂಡು ಪಕ್ಷವನ್ನು ಜನರ ಮಧ್ಯೆ ಕೊಂಡೊಯ್ಯಲು ಎಲ್ಲರೂ ಒಟ್ಟಾಗಿ ಶ್ರಮಿ ಸಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಕರೆ ನೀಡಿದರು.

ನಗರದ ಕಾಂ. ಪಂಪಾಪತಿ ಭವನ ದಲ್ಲಿ ಮೊನ್ನೆ ಏರ್ಪಾಡಾಗಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ 97ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮತ್ತು ಪಕ್ಷಕ್ಕೆ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿದ್ದು ದುಡಿಯುವ ರೈತ ಮತ್ತು ಕಾರ್ಮಿಕರು ಹಗಲಿರಳು ದುಡಿದರೂ ತಮ್ಮ ದುಡಿಮೆಯ ಹೆಚ್ಚಿನ ಹಣವನ್ನು ಅವೈಜ್ಞಾನಿಕ ತೆರಿಗೆ ರೂಪದಲ್ಲಿ ಆಳುವ ಸರ್ಕಾರಗಳು ಲೂಟಿ ಮಾಡುತ್ತಿವೆ ಎಂದ ಅವರು, ಮುಂದಿನ ದಿನಗಳಲ್ಲಿ ಪಕ್ಷವನ್ನು ದುಡಿಯುವ ಎಲ್ಲಾ ವರ್ಗದ ಜನರ ಬಳಿ ಕೊಂಡೊಯ್ಯಲು ಪಕ್ಷದ ಎಲ್ಲಾ ಕಾರ್ಯಕರ್ತರೂ ಒಟ್ಟಾಗಿ ಶ್ರಮಿಸೋಣ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಮಂಡಳಿ ಖಜಾಂಚಿ ಆನಂದ ರಾಜ್, ಪಕ್ಷದ ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಹೆಚ್.ಜಿ. ಉಮೇಶ್, ಆವರಗೆರೆ ವಾಸು, ಮುಖಂಡರುಗಳಾದ ಪಿ. ಷಣ್ಮುಖ ಸ್ವಾಮಿ, ಐರಣಿ ಚಂದ್ರು, ನರೇಗ ರಂಗನಾಥ್, ಟಿ.ಹೆಚ್. ನಾಗರಾಜ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಮಂಡಳಿ ಮುಖಂಡರಾದ ಎಂ.ಬಿ. ಶಾರ ದಮ್ಮ, ಟಿ.ಎಸ್. ನಾಗರಾಜ್ ಸೇರಿದಂತೆ ಇತರರು ಇದ್ದರು. ಪಕ್ಷದ ಜಿಲ್ಲಾ ಮಂಡಳಿ ಸದಸ್ಯ ಮಹಮದ್ ರಫೀಕ್ ಸ್ವಾಗತಿಸಿದರು. ಕೆ. ಬಾನಪ್ಪ ವಂದಿಸಿದರು.

error: Content is protected !!