ದಾವಣಗೆರೆ, ಡಿ.29- ದೇಶದ ಸ್ವಾತಂತ್ರ್ಯಕ್ಕಾಗಿ 1885ರ ಡಿಸೆಂಬರ್ 28ರಂದು ಜನ್ಮ ತಾಳಿದ್ದು ಕಾಂಗ್ರೆಸ್ ಪಕ್ಷವಾಗಿದ್ದು, ಇದಕ್ಕೆ 137 ವರ್ಷಗಳ ಇತಿಹಾಸವಿದೆ. ಆದರೆ ಕೇವಲ ಅಧಿಕಾರದ ದಾಹದಿಂದ ಕುರ್ಚಿಗಾಗಿ 1980ರಲ್ಲಿ ಹುಟ್ಟಿಕೊಂಡಿದ್ದು ಬಿಜೆಪಿ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟೆಕ್ ವಿಭಾಗವು ಏರ್ಪಡಿಸಿದ್ದ 137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷದ ಇತಿಹಾಸವಾಗಿದೆ. ಆದರೆ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜನವಿರೋಧಿ, ರೈತ ವಿರೋಧಿ ಕರಾಳ ಕಾಯ್ದೆಗಳನ್ನು ರೂಪಿಸಿ ಜನರ ಬದುಕನ್ನು ಹಾಳುಗೆಡವಿದೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಇಂಟೆಕ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಅಧ್ಯಕ್ಷ ಎಸ್. ನಂಜ್ಯಾ ನಾಯ್ಕ್ ಮುಖಂಡರಾದ ಎಸ್.ಎಂ. ಜಯಪ್ರಕಾಶ್, ಎಂ.ಕೆ. ಲಿಯಾಖತ್ ಅಲಿ, ಅಲ್ಲಾವಲಿ ಸಮೀರ್‍ಖಾನ್, ಗಿರಿಧರ್, ಶಶಿಕುಮಾರ್, ಅಮ್ಜದ್‍ಖಾನ್, ಅರುಣ್ ಎನ್. ರಾಥೋಡ್, ಬಸವರಾಜ್ ನಾಯ್ಕ್, ಅಲ್ಲಾವಲಿ ಸಜ್ಜಾದ್, ಮಹ್ಮದ್ ಜಪ್ರುಲ್ಲಾ, ಮಕ್ಸೂದ್, ಸೂರಜ್, ಸತೀಶ್, ಮಹ್ಮದ್ ಫಾರೂಕ್, ಡಿ.ಶಿವಕುಮಾರ್, ಬಿ. ಮಂಜುನಾಥ್, ಎ. ಕುಮಾರ್, ಕುಮಾರ್ ಎ.ಎಂ. ಭೀಮೇಶ್ ಹಾಗು ಇತರರು ಭಾಗವಹಿಸಿದ್ದರು.