ದೂಡಾದಿಂದ 3 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ದಾವಣಗೆರೆ, ಡಿ.27- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೈಗೆತ್ತಿಕೊಂಡಿರುವ ಸುಮಾರು 3 ಕೋಟಿ ರೂ.ಗಳ ವೆಚ್ಚದ  ರಸ್ತೆ, ಒಳಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಹಾಗೂ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ಮತ್ತು ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಅವರುಗಳು ಇಂದು ಮಧ್ಯಾಹ್ನ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

44ನೇ ವಾರ್ಡ್ ವ್ಯಾಪ್ತಿಯ ಎಸ್.ಎಸ್. ಬಡಾವಣೆಯ `ಬಿ¬ ಬ್ಲಾಕ್ 4ನೇ ಮುಖ್ಯ ರಸ್ತೆ 14ನೇ ಅಡ್ಡ ರಸ್ತೆ ಅಭಿವೃದ್ಧಿ ಕಾಮಗಾರಿ, ನಂತರ ಎಸ್.ಎಸ್. ಲೇಔಟ್ `ಬಿ’ಬ್ಲಾಕ್‍ನ 4 ನೇ ಮುಖ್ಯ ರಸ್ತೆ, 3 ಹೆಚ್ ಅಡ್ಡ ರಸ್ತೆಯಿಂದ ಡಬಲ್ ರಸ್ತೆವರೆಗೆ ಮತ್ತು 13 ನೇ ಅಡ್ಡರಸ್ತೆ ಕೂಡುವಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಎಸ್.ಎಸ್. ಲೇಔಟ್ `ಬಿ’ಬ್ಲಾಕ್ 4ನೇ ಮುಖ್ಯರಸ್ತೆ, 12 ನೇ ಅಡ್ಡ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಹಾಗೂ 12 ಹಾಗೂ 14ನೇ ಅಡ್ಡ ರಸ್ತೆಯಲ್ಲಿ ರಸ್ತೆ ಅಭಿವೃದ್ಧಿ, ವಾರ್ಡ್ ಸಂಖ್ಯೆ 25 ವಾಸವಿ ಕಲ್ಯಾಣ ಮಂಟಪದಿಂದ ಶಕ್ತಿ ನಗರಕ್ಕೆ ಹೋಗುವ ಮುಖ್ಯರಸ್ತೆ ಹಾಗೂ ಡಿಸಿಎಂ ಮುಖ್ಯರಸ್ತೆಯಿಂದ ರಾಜೇಂದ್ರ ಬಡಾವಣೆಗೆ ಹೋಗುವ ರಸ್ತೆಗಳ ಅಭಿವೃದ್ಧಿ, ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿ ರಿಂಗ್ ರೋಡ್ ಸರ್ಕಲ್‍ಗೆ ಅಭಿಮುಖವಾಗಿ ನಾಮಫಲಕದ ಕಮಾನು ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ನಗರ ಪಾಲಿಕೆ ಮಹಾಪೌರರಾದ
ಎಸ್.ಟಿ. ವೀರೇಶ್, ಉಪ ಮಹಾಪೌರರಾದ ಶಿಲ್ಪಾ ಜಯಪ್ರಕಾಶ್, ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್, ದೂಡಾ ಸದಸ್ಯರುಗಳಾದ ಮಾರುತಿರಾವ್ ಘಾಟ್ಗೆ, ಬಾತಿ ಚಂದ್ರಶೇಖರ, ಆರ್. ಲಕ್ಷ್ಮಣ್, ಶ್ರೀಮತಿ ಗೌರಮ್ಮ ವಿ.ಪಾಟೀಲ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮುಖಂಡರುಗಳಾದ ಕೊಂಡಜ್ಜಿ ಜಯಪ್ರಕಾಶ್, ಜಯಪ್ರಕಾಶ್ ನಾರಾಯಣ, ಪಾಲಿಕೆ ಮಾಜಿ ನಾಮನಿರ್ದೇಶನ ಸದಸ್ಯ ಶಿವನಗೌಡ ಪಾಟೀಲ್, ಪ್ರಾಧಿಕಾರದ ಅಭಿಯಂತರರಾದ ಕೆ.ಹೆಚ್. ಶ್ರೀಕರ್, ಕಿರಿಯ ಅಭಿಯಂತರರಾದ ಕೆ.ಟಿ. ಅಕ್ಷತ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!