ರಾಣೇಬೆನ್ನೂರು, ಡಿ. 27- ಭಕ್ತರ ಕಾಣಿಕೆಯೊಂದಿಗೆ ಸುಮಾರು ಎರಡು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಕಟ್ಟಿರುವ ಈಚೆಗೆ ಉದ್ಘಾಟನೆಯಾದ ಇಲ್ಲಿನ ಕುರುಬಗೇರಿಯ ಶ್ರೀ ಬನಶಂಕರಿ ದೇವಿ ದೇವಸ್ಥಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರಳಿ ದೇವಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಂಜುನಾಥ್ ಗೌಡ ಶಿವಣ್ಣನವರ, ವಿರೂಪಾಕ್ಷಿ ಬೆಳಕೇರಿ, ಶಂಕ್ರಪ್ಪ ಬುರುಡಿಕಟ್ಟಿ, ಶಿವಪ್ಪ ಹೆದ್ದೇರಿ, ರಾಯಪ್ಪ ಮಾಕನೂರ, ಬಸವರಾಜ ಮೈಲಾರ ಮತ್ತಿತರರಿದ್ದರು.
December 24, 2024