ಹರಿಹರ, ಡಿ. 24- ಮಹಾರಾಷ್ಟ್ರ ಶಿವಸೇನಾ ಮುಖ್ಯಸ್ಥರು ಕೊಲ್ಲಾಪುರ ಜಿಲ್ಲೆಯಲ್ಲಿ ಕನ್ನಡ ಧ್ವಜ ಸುಟ್ಟು ಹಾಕುವ ಮೂಲಕ ನಾಡದ್ರೋಹದ ಕೃತ್ಯ ಎಸಗಿದ್ದಾರೆ. ಇಂತಹ ಸಂಘಟನೆಗಳನ್ನು ಮಹಾರಾಷ್ಟ್ರ ಸರ್ಕಾರ ಬೆಂಬಲಿ ಸುತ್ತಿದೆ ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಖಂಡಿಸಿದ್ದಾರೆ.
ಮಹಾರಾಷ್ಟ್ರ ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳನ್ನು ಕರ್ನಾಟಕದಲ್ಲಿ ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಹರಿಹರ ತಾಲ್ಲೂಕು ಅಧ್ಯಕ್ಷ ವೈ. ರಮೇಶ್ ಮಾನೆ, ಕಾರ್ಯಾಧ್ಯಕ್ಷ ಪ್ರೀತಂ ಬಾಬು, ಗೌರವಾಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್, ಕಾರ್ಯದರ್ಶಿ ಯಮನೂರು, ಉಪಾಧ್ಯಕ್ಷರಾದ ಅಣ್ಣಪ್ಪ ಲೋಕಿಕೆರೆ, ಇಮ್ತಿಯಾಜ್ ಅಹ್ಮದ್, ರಂಜಿತ್ ಹೆಗ್ಡೆ, ಅಲಿ ಅಕ್ಬರ್, ಅಣ್ಣಪ್ಪ, ಹನುಮಂತರೆಡ್ಡಿ, ಶಶಿನಾಯ್ಕ, ರಾಮು, ರವಿ, ಶಿವು, ಜಿಲ್ಲಾಧ್ಯಕ್ಷ ನಾಗರಾಜ್ ಜಮ್ನಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ಮುನ್ನ, ಗಜೇಂದ್ರ ಉಪಸ್ಥಿತರಿದ್ದರು.