ಹೊನ್ನಾಳಿ, ಡಿ.23- ಅನೇಕ ಅಡ್ಡಿ, ಆತಂಕಗಳ ನಡುವೆಯೂ ವ್ಯವಸ್ಥಿತ ಹಾಗೂ ಲಾಭದಾಯಕವಾಗಿ ಸೊಸೈಟಿಯನ್ನು ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಇಲ್ಲಿನ ಲಕ್ಷ್ಮೀ ವಿವಿಧೋದ್ಧೇಶ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ರಾದ ಶ್ರೀಮತಿ ಸುಧಾ ಮರಿಸಿದ್ದಪ್ಪ ಹೇಳಿದರು.
ಕಿತ್ತೂರು ರಾಣಿ ಸಮುದಾಯ ಭವನದಲ್ಲಿ ನಡೆದ ಸಂಘದ 7ನೇ ವರ್ಷದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದಲ್ಲಿ 1300 ಷೇರುದಾರರನ್ನು ಹೊಂದಿದ್ದು, ವರ್ಷದಲ್ಲಿ 1 ಕೋಟಿ 87 ಲಕ್ಷ ರೂ.ಗಳ ವ್ಯವಹಾರದ ವಹಿವಾಟು ನಡೆಸಿದ್ದು, 97880 ರೂ.ಗಳ ಉಳಿತಾಯದೊಂದಿಗೆ ಇದೇ ಮೊದಲ ಬಾರಿಗೆ ಶೇಕಡ 5ರಷ್ಟು ಡಿವಿಡೆಂಡ್ ನೀಡುತ್ತಿರುವುದಾಗಿ ಹೇಳಿದರು.
ಸಂಘದ ಸಂಸ್ಥಾಪಕಿ ರೇಣುಕಾಬಾಯಿ ವಿಶ್ವನಟೇಶ್ ಮಾತನಾಡಿ, ಬೈಲಾ ಪ್ರಕಾರ ಅನೇಕ ಏಳುಬೀಳುಗಳ ನಡುವೆಯೂ ಧೈರ್ಯದಿಂದ ಸಂಘ ನಡೆಸಿಕೊಂಡು ಬಂದಿದ್ದರ ಬಗ್ಗೆ ವಿವರಿಸಿದರು.
ಸಂಘದ ಉಪಾಧ್ಯಕ್ಷರಾದ ಉಮಾದೇವಿ ಓಂಕಾರ್, ನಿರ್ದೇಶಕರಾದ ಪ್ರಭಾ ಗುರುದತ್, ಶೋಭಾ ರಮೇಶ್, ರೇಣುಕಮ್ಮ ಕೊಟ್ರೇಶಪ್ಪ, ಲೀಲಾವತಿ ಲಿಂಗರಾಜು, ಕಮಲಮ್ಮ ಸಿದ್ದಪ್ಪ, ಅತಿಥಿಗಳಾದ ಡಾ|| ವಿಶ್ವನಟೇಶ್, ಗುರುದತ್ ಉಪಸ್ಥಿತರಿದ್ದರು.