ದಾವಣಗೆರೆ, ಡಿ.23 – ನಗರದ ಅಮರ್ ಜವಾನ್ ಸ್ಮಾರಕ ಉದ್ಯಾನವನ, ಕೆ.ಬಿ. ಬಡಾವಣೆಯ ಗುಳ್ಳಮ್ಮ ಪಾರ್ಕ್, ಬಂಬೂ ಬಜಾರ್ , ಹೊಂಡದ ಸರ್ಕಲ್ ವೀರ ಮದಕರಿ ನಾಯಕ ಪುತ್ಥಳಿ, ಶಿವಾಜಿ ಪುತ್ಥಳಿ ಸೇರಿದಂತೆ ನಗರದ ಪ್ರಗತಿಯಲ್ಲಿರುವ ಕಾಮಗಾರಿಯನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನೆ ಶಿವಕುಮಾರ್ ವೀಕ್ಷಿಸಿದರು.
ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಗುತ್ತಿಗೆದಾರರು ಸ್ಥಳದಲ್ಲಿ ಇರಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಂಬೂ ಬಜಾರ್‍ನಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡ್ತಿದ್ದಾರೋ ಇಲ್ವೋ, ಕ್ಯೂರಿಂಗ್ ಬಗ್ಗೆ ಸುತ್ತಮುತ್ತಲಿನ ಸಾರ್ವಜನಿಕರ ಬಳಿ ವಿಚಾರಿಸಿದರು. ಬೇಗ ಕಾಮಗಾರಿ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರ ಸದಸ್ಯರಾದ ಬಾತಿ ಚಂದ್ರಶೇಖರ್, ಆರ್ ಲಕ್ಷ್ಮಣ್, ಆಯುಕ್ತ ಬಿ.ಟಿ ಕುಮಾರಸ್ವಾಮಿ, ಕಾರ್ಯಪಾಲಕ ಅಭಿಯಂತರರಾದ ಕೆ.ಹೆಚ್. ಶ್ರೀಕರ್, ಸೃಜಯ, ಅಕ್ಷತಾ ಉಪಸ್ಥಿತರಿದ್ದರು.